ಕಡಿಮೆ ಬೆಲೆಯ POCO C85 5G ಮೊಬೈಲ್‌ ಈಗ ಇನ್ನಷ್ಟು ಅಗ್ಗದ ದರದಲ್ಲಿ ಲಭ್ಯ! ಈ ಆಫರ್‌ ನೋಡಿ

HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ ಪೊಕೊ C85 5G ಮೊಬೈಲ್‌ಗೆ ಬಿಗ್ ಡಿಸ್ಕೌಂಟ್‌

ಪೊಕೊ C85 5G ಮೊಬೈಲ್‌ 8MP ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಪಡೆದಿದೆ

ಪೊಕೊ C85 5G ಫೋನ್‌ MediaTek Dimensity 6300 ಪ್ರೊಸೆಸರ್‌ ಪಡೆದುಕೊಂಡಿದೆ

ಇ ಕಾಮರ್ಸ್‌ ವೆಬ್‌ಸೈಟ್‌ಗಳು ಸ್ಮಾರ್ಟ್‌ಫೋನ್‌ಗಳಿಗೆ ಏನಾದರೊಂದು ಡಿಸ್ಕೌಂಟ್‌ ಘೋಷಿಸುತ್ತವೆ. ಈ ನಿಟ್ಟಿನಲ್ಲಿ ಅನೇಕರು ಗ್ರಾಹಕರು ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳತ್ತ ಗಮನ ನೀಡುತ್ತಾರೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಪೊಕೊ ಬ್ರಾಂಡ್‌ನ POCO C85 5G ಸ್ಮಾರ್ಟ್‌ಫೋನ್‌ ಭರ್ಜರಿ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದಲ್ಲದೇ ಬ್ಯಾಂಕ್‌ ಆಫರ್‌ ಪಡೆದುಕೊಂಡು ಖರೀದಿಸಿದರೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದಹಾಗೆ ಪೊಕೊ C85 5G ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಅಲ್ಲದೇ MediaTek Dimensity 6300 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇನ್ನು ಗ್ರಾಹಕರು ಈ ಫೋನ್‌ ಅನ್ನು ಮಿಸ್ಟಿಕ್ ಪರ್ಪಲ್, ಸ್ಪ್ರಿಂಗ್ ಗ್ರೀನ್ ಹಾಗೂ ಪವರ್‌ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಖರೀದಿ ಮಾಡಬಹುದು. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಪೊಕೊ C85 5G ಮೊಬೈಲ್‌ಗೆ ಲಭ್ಯ ಇರುವ ಆಫರ್‌ ಬಗ್ಗೆ ಮುಂದೆ ತಿಳಿಯೋಣ.

Also Read : OnePlus 15T ಸ್ಮಾರ್ಟ್‌ಫೋನ್‌ ಬಿಡುಗಡೆ! 100W SuperVOOC ಚಾರ್ಜಿಂಗ್ ಸೌಲಭ್ಯ

POCO C85 5G ಬೆಲೆಯಲ್ಲಿ ಬೊಂಬಾಟ್‌ ಇಳಿಕೆ

ಜನಪ್ರಿಯ ಪೊಕೊ C85 5G ಸ್ಮಾರ್ಟ್‌ಫೋನ್‌ ಸದ್ಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಭಾರೀ ರಿಯಾಯಿತಿ ಪಡೆದಿದೆ. ಈ ಸ್ಮಾರ್ಟ್‌ಫೋನ್‌ 4GB RAM + 128GB ವೇರಿಯಂಟ್‌ ಬೆಲೆ 14,499 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್‌ 11,999 ರೂ.ಗಳ ದರದಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದಾಗಿದೆ. ಇದರೊಂದಿಗೆ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಗ್ರಾಹಕರು ಈ ಮೊಬೈಲ್‌ ಅನ್ನು ಮಿಸ್ಟಿಕ್ ಪರ್ಪಲ್, ಸ್ಪ್ರಿಂಗ್ ಗ್ರೀನ್ ಹಾಗೂ ಪವರ್‌ ಬ್ಲ್ಯಾಕ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದು.

ಪೊಕೊ C85 5G ಮೊಬೈಲ್‌ ಫೀಚರ್ಸ್‌ ಹೀಗಿವೆ

ಪೊಕೊ C85 5G ಮೊಬೈಲ್‌ 6.9 ಇಂಚಿನ HD+ ಪ್ಯಾನೆಲ್ ಡಿಸ್‌ಪ್ಲೇ ಪಡೆದುಕೊಂಡಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್‌ ಪಡೆದುಕೊಂಡಿದ್ದು 810 nits ಗರಿ‍ಷ್ಠ ಬ್ರೈಟ್ನೆಸ್‌ ಬೆಂಬಲ ಹೊಂದಿದೆ. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ 4GB RAM + 128GB, 6GB RAM + 128GB ಹಾಗೂ 8GB RAM + 128GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದ್ದು ಇದಕ್ಕೆ ಪೂರಕವಾಗಿ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 10W ವೈರ್ಡ್ ರಿವರ್ಸ್ ಚಾರ್ಜಿಂಗ್ ಒಳಗೊಂಡಿದೆ.

ಹಾಗೆಯೇ ಪೊಕೊ C85 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ ಮತ್ತು ಸೆಕೆಂಡರಿ ಕ್ಯಾಮೆರಾ ಬೇಸಿಕ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್‌ 8MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಈ ಮೊಬೈಲ್‌ IP64 ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :