ಜನಪ್ರಿಯ ಪೊಕೊ ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ POCO C81 series ಇಂದು (ಏಪ್ರಿಲ್ 23 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ನೂತನ ಸರಣಿಯು ಪೊಕೊ C81 ಹಾಗೂ ಪೊಕೊ C81x ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಇನ್ನು ಈ ಸರಣಿಯ ಲಾಂಚ್ ಕುರಿತು Flipkart ತಾಣದಲ್ಲಿ ಮೀಸಲಾದ ಮೈಕ್ರೋಸೈಟ್ ಈಗಾಗಲೇ ಲೈವ್ ಆಗಿದೆ. ಪೊಕೊ C81 ಮೊಬೈಲ್ 6,300mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿರಲಿದ್ದು, ಅದೇ ರೀತಿ ಪೊಕೊ C81x ಮೊಬೈಲ್ 5,200mAh ಬ್ಯಾಟರಿ ಪವರ್ ಒಳಗೊಂಡಿರಲಿದೆ. ಈ ಎರಡು ಮೊಬೈಲ್‌ಗಳು ಆಕರ್ಷಕ ಕಲರ್ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹಾಗಾದರೆ ಪೊಕೊ C81 ಹಾಗೂ ಪೊಕೊ C81x ಫೋನ್‌ಗಳ ನಿರೀಕ್ಷಿತ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : RBI New Rule: OTP ಇಲ್ಲದೆ ಬಿಲ್ ಪಾವತಿ ಸಾಧ್ಯ! ಚಂದಾದಾರಿಕೆಗಳ ಬಿಲ್ ಪಾವತಿಗೆ ಹೊಸ ವ್ಯವಸ್ಥೆ
ಪೊಕೊ ಕಂಪನಿಯ ಪೊಕೊ C81 ಹಾಗೂ ಪೊಕೊ C81x ಸ್ಮಾರ್ಟ್‌ಫೋನ್‌ಗಳು ಅಗ್ಗದ ಬೆಲೆಯ ವಿಭಾಗದಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ. ಈ ಸರಣಿಯು ಇಂದು (ಏಪ್ರಿಲ್ 23 ರಂದು) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಈ ಮೊಬೈಲ್‌ಗಳ ಬೆಲೆ ಸುಮಾರು 12,000 ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಪೊಕೊ C81 ಫೋನ್ ಸನ್‌ಸೆಟ್ ಗೋಲ್ಡ್, ಇಲೈಟ್ ಬ್ಲ್ಯಾಕ್ ಹಾಗೂ ಸ್ಕೈ ಬ್ಲೂ ಕಲರ್ ಆಯ್ಕೆ ಪಡೆದಿರಲಿದೆ. ಹಾಗೆಯೇ ಪೊಕೊ C81x ಸ್ಮಾರ್ಟ್‌ಫೋನ್ ಕ್ರಿಸ್ಟಲ್ ಬ್ಲ್ಯಾಕ್ ಹಾಗೂ ಐಸ್ ಬ್ಲೂ ಕಲರ್ ಆಯ್ಕೆ ಒಳಗೊಂಡಿರಲಿದೆ.
ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸಪೋರ್ಟ್ ಒಳಗೊಂಡ 6.9 ಇಂಚಿನ HD+ LCD ಡಿಸ್‌ಪ್ಲೇ ರಚನೆ ಅನ್ನು ಪಡೆದಿರುವ ಸಾಧ್ಯತೆಗಳು ಇವೆ. ಅಲ್ಲದೇ ಈ ಮೊಬೈಲ್ ಯುನಿಸಾಕ್ T7250 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳು ಇವೆ. ಇದಕ್ಕೆ ಪೂರಕವಾಗಿ ಶಿಯೋಮಿ ಹೈಪರ್‌ಓಎಸ್ 3 ಜೊತೆಗೆ ಆಂಡ್ರಾಯ್ಡ್ 16 ಓಎಸ್ ಸಪೋರ್ಟ್ ಪಡೆದಿರಲಿದೆ. ಇದರೊಂದಿಗೆ ಫೋನ್ ಹಿಂಭಾಗದಲ್ಲಿ 13MP ಕ್ಯಾಮೆರಾ ಸೆನ್ಸಾರ್ ಒಳಗೊಂಡಿರಲಿದೆ ಎನ್ನಲಾಗಿದೆ.
ಪೊಕೊ C81x ಮೊಬೈಲ್ 5,200mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಬಹುತೇಕ ಖಚಿತ ಆಗಿದೆ. ಇದರೊಂದಿಗೆ 15W ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸೌಲಭ್ಯ ಇರುವ ಸಾಧ್ಯತೆಗಳು ಇವೆ. ಹಾಗೆಯೇ ಪೊಕೊ C81 ಮೊಬೈಲ್ 6,300mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಜೊತೆಗೆ 15W ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲ ಹೊಂದಿರಲಿದೆ.