ಜನಪ್ರಿಯ ಪೊಕೊ ಕಂಪನಿಯ ಅಗ್ಗದ ದರದ POCO C75 5G ಮೊಬೈಲ್ ಈಗ ಇನ್ನಷ್ಟು ಅಗ್ಗದ ಬೆಲೆಗೆ ಲಭ್ಯವಿದೆ. ಹೌದು, ಪ್ರಸ್ತುತ ಈ ಸ್ಮಾರ್ಟ್‌ಫೋನ್ Flipkart ವೆಬ್‌ಸೈಟ್ ನಲ್ಲಿ ಭರ್ಜರಿ ಬೆಲೆ ಇಳಿಕೆ ಕಂಡಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಸಹ ಪಡೆಯಲು ಅವಕಾಶ ಇದೆ. ಪೊಕೊ ಕಂಪನಿಯ ಈ ಮೊಬೈಲ್ Snapdragon 4s Gen 2 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದ್ದು ಇದರೊಂದಿಗೆ 50MP ಸಾಮರ್ಥ್ಯದ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಮೊಬೈಲ್ ಆಕರ್ಷಕ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ Flipkart ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ POCO C75 5G ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Vi ಗ್ರಾಹಕರೇ ಗಮನಿಸಿ! ಈ ಬಜೆಟ್ ಬೆಲೆಯ ಪ್ಲಾನ್‌ಗಳಲ್ಲಿ ಡೇಟಾ ಜೊತೆಗೆ ಅತ್ಯುತ್ತಮ ವ್ಯಾಲಿಡಿಟಿ
ಪೊಕೊ ಸಂಸ್ಥೆಯ POCO C75 5G ಮೊಬೈಲ್ ಪ್ರಸ್ತುತ Flipkart ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಭಾರೀ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 4GB RAM + 64GB ವೇರಿಯಂಟ್ ಬೆಲೆ 10,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಫೋನ್ 8,499 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಗ್ರಾಹಕರು Flipkart Axis ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿಯಾಗಿ 425 ರೂಗಳ ಡಿಸ್ಕೌಂಟ್ ಪಡೆಯಬಹುದಾಗಿದೆ. ಅಂದಹಾಗೆ ಈ ಫೋನ್ Enchanted Green, Aqua Bliss ಮತ್ತು Silver Stardust ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.
POCO C75 5G ಮೊಬೈಲ್ ಡಿಸ್‌ಪ್ಲೇಯು 6.88 ಇಂಚಿನ FHD+ ಮಾದರಿ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಹೊಂದಿದ್ದು ಜೊತೆಗೆ 600 nits ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಇನ್ನು ಈ ಮೊಬೈಲ್ Snapdragon 4s Gen 2 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಈ ಫೋನ್ 4GB RAM + 64GB ವೇರಿಯಂಟ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಪಡೆದಿದೆ.
ಅಲ್ಲದೇ POCO C75 5G ಮೊಬೈಲ್ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್ 13MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 5160mAh ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಅಲ್ಲದೇ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, AI ಫೇಸ್ ಅನ್‌ಲಾಕ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೆ ಇದು ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.