OPPO Reno15 and OPPO Reno15c
ಭಾರತದಲ್ಲಿ OPPO Reno15 Series ಮಾರುಕಟ್ಟೆಗೆ ಲಗ್ಗೆ ಇಡುವುದರೊಂದಿಗೆ ಒಪ್ಪೋ ಕಂಪನಿಯು ಮೊಬೈಲ್ ವಿನ್ಯಾಸ ಮತ್ತು ಫೋಟೋಗ್ರಫಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇಂದು 8ನೇ ಜನವರಿ 2026 ರಂದು ಒಪ್ಪೋ ಭಾರತದಲ್ಲಿ ಈ ಸರಣಿಯಡಿಯಲ್ಲಿ ಒಟ್ಟು 4 ಸ್ಮಾರ್ಟ್ಫೋನ್ಗಳನ್ನು OPPO Reno15, OPPO Reno15c, OPPO Reno15 Pro ಮತ್ತು OPPO Reno15 Pro Mini ಎನ್ನುವ ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ ಇದರಲ್ಲಿ OPPO Reno15 ಮತ್ತು OPPO Reno15c ಫೋನ್‌ಗಳ ಬಗ್ಗೆ ಮಾತ್ರ ಮಾಹಿತಿಯನ್ನು ನೀಡಲಾಗಿದ್ದು ಮತ್ತೊಂದು ಲೇಖನದಲ್ಲಿ ಮತ್ತೆರಡು ಫೋನ್ಗಳ ಮಾಹಿತಿ ನೀಡಲಾಗಿದೆ. ಈ ಫೋನ್‌ಗಳು “ಹೋಲೋಫ್ಯೂಷನ್” ಎನ್ನುವ ಅದ್ಭುತ ಸೌಂದರ್ಯ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಇಮೇಜಿಂಗ್ ವ್ಯವಸ್ಥೆಯನ್ನು ಹೊಂದಿವೆ.
ಹೊಸ ಸರಣಿಯ ಬೆಲೆಗಳು ಸ್ಪರ್ಧಾತ್ಮಕ ಭಾರತೀಯ ಮಾರುಕಟ್ಟೆಯಲ್ಲಿ ಅದರ ಸ್ಥಾನವನ್ನು ಪ್ರತಿಬಿಂಬಿಸುತ್ತವೆ. OPPO Reno15 ಆರಂಭಿಕ 8GB RAM ಮತ್ತು 256GB ರೂಪಾಂತರಕ್ಕೆ ₹45,999 ರಿಂದ ಪ್ರಾರಂಭವಾಗುತ್ತದೆ. ಇದರೊಂದಿಗೆ ಹೆಚ್ಚಿನ ಸ್ಟೋರೇಜ್ ಮಾದರಿಗಳು ₹53,999 ವರೆಗೆ ತಲುಪುತ್ತವೆ. ಮತ್ತೊಂದೆಡೆಯಲ್ಲಿ ಹೆಚ್ಚು ಕೈಗೆಟುಕುವ OPPO Reno15c ಬೆಲೆಯನ್ನು ನೋಡುವದಾದರೆ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ ₹34,999 ರಿಂದ ಪ್ರಾರಂಭವಾಗುತ್ತದೆ. ಎರಡೂ ಸ್ಮಾರ್ಟ್ಫೋನ್ಗಳು ಫ್ಲಿಪ್‌ಕಾರ್ಟ್, ಅಮೆಜಾನ್ ಇಂಡಿಯಾ ಮತ್ತು OPPO ಸ್ಟೋರ್ ಸೇರಿದಂತೆ ಪ್ರಮುಖ ಚಿಲ್ಲರೆ ವ್ಯಾಪಾರಿಗಳ ಮೂಲಕ ಲಭ್ಯವಿರುತ್ತವೆ. Reno15 ಸ್ಮಾರ್ಟ್ಫೋನ್ 13ನೇ ಜನವರಿ 2026 ರಿಂದ ಮಾರಾಟಕ್ಕೆ ಬರಲಿದ್ದರೂ ಅದೇ Reno15c ಫೋನ್ ಫೆಬ್ರವರಿ 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ .
ಉತ್ತಮ ಗುಣಮಟ್ಟದ ಫೋಟೋಗ್ರಫಿ ಮತ್ತು ಸ್ಟೈಲಿಶ್ ಲುಕ್ ಇಷ್ಟಪಡುವವರಿಗಾಗಿ OPPO Reno15 ಅನ್ನು ವಿಶೇಷವಾಗಿ ತಯಾರಿಸಲಾಗಿದೆ. ಇದು ನೋಡಲು ಅತ್ಯಂತ ಆಕರ್ಷಕವಾದ 6.59 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಭಾರತದಲ್ಲಿ ಮೊದಲ ಬಾರಿಗೆ ಈ ಫೋನ್‌ನಲ್ಲಿ “ಹೋಲೋಫ್ಯೂಷನ್” ತಂತ್ರಜ್ಞಾನವನ್ನು ಬಳಸಲಾಗಿದ್ದು ಫೋನಿನ ಹಿಂಭಾಗದ ಕವರ್ ನೋಡಲು ಮೂರು ಆಯಾಮದ (3D) ಆಳವನ್ನು ಹೊಂದಿರುವಂತೆ ಭಾಸವಾಗುತ್ತದೆ. ಈ ಫೋನ್‌ನಲ್ಲಿ ಶಕ್ತಿಯುತವಾದ ಸ್ನಾಪ್‌ಡ್ರಾಗನ್ 7 Gen 4 ಪ್ರೊಸೆಸರ್ ಇರುವುದರಿಂದ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ (ಒಂದೇ ಸಮಯದಲ್ಲಿ ಹಲವು ಆಪ್ ಬಳಕೆ) ಮಾಡಲು ತುಂಬಾ ಸುಲಭವಾಗುತ್ತದೆ.
ಇದರ ಕ್ಯಾಮೆರಾ ವ್ಯವಸ್ಥೆಯು ಬಹಳ ವಿಶೇಷವಾಗಿದೆ. ಇದರಲ್ಲಿ 50MP 3.5x ಟೆಲಿಫೋಟೋ ಪೋರ್ಟ್ರೇಟ್ ಕ್ಯಾಮೆರಾ ಮತ್ತು 50MP ಅಲ್ಟ್ರಾ-ಕ್ಲಿಯರ್ ಮುಖ್ಯ ಕ್ಯಾಮೆರಾ ಇದೆ. ಫೋಟೋಗಳಲ್ಲಿ ಮುಖದ ಬಣ್ಣ ನೈಜವಾಗಿ ಕಾಣಲು ಇದರಲ್ಲಿ ‘ಪೋರ್ಟ್ರೇಟ್ ಗ್ಲೋ’ ಮತ್ತು ‘ಪ್ಯೂರ್‌ಟೋನ್’ ನಂತಹ AI ತಂತ್ರಜ್ಞಾನಗಳನ್ನು ಬಳಸಲಾಗಿದೆ. ಇಡೀ ದಿನ ಫೋನ್ ಚಾರ್ಜ್ ಇರಲು ಇದರಲ್ಲಿ 6,500mAh ಬೃಹತ್ ಬ್ಯಾಟರಿ ಮತ್ತು ಕೇವಲ ಕೆಲವೇ ನಿಮಿಷಗಳಲ್ಲಿ ಫೋನ್ ಚಾರ್ಜ್ ಮಾಡಲು 80W ಸೂಪರ್‌ವಿಒಒಸಿ (SuperVOOC) ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ. ಈ ಫೋನ್ ಇತ್ತೀಚಿನ ಕಲರ್ಓಎಸ್ 16 (ColorOS 16) ಸಾಫ್ಟ್‌ವೇರ್ ಮೇಲೆ ಕಾರ್ಯನಿರ್ವಹಿಸುತ್ತದೆ.
ರೆನೋ ಸರಣಿಯಲ್ಲೇ ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಗುವ OPPO Reno15c ನಂಬಿಕಸ್ತ ಕಾರ್ಯಕ್ಷಮತೆ ಮತ್ತು ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯ ಮೇಲೆ ಹೆಚ್ಚಿನ ಗಮನ ನೀಡಿದೆ. ಇದು 6.57 ಇಂಚಿನ ಡಿಸ್ಪ್ಲೇ ಮತ್ತು “ಡೈನಾಮಿಕ್ ಸ್ಟೆಲ್ಲರ್ ರಿಂಗ್” ಎನ್ನುವ ವಿನ್ಯಾಸವನ್ನು ಹೊಂದಿದ್ದು ಕಡಿಮೆ ಬೆಲೆಯ ಫೋನ್ ಆದರೂ ನೋಡಲು ಅತ್ಯಂತ ಐಷಾರಾಮಿಯಾಗಿ ಕಾಣುತ್ತದೆ. ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 6 Gen 1 ಪ್ರೊಸೆಸರ್ ಇದ್ದು ಇದು 7,000mAh ನ ಬೃಹತ್ ಬ್ಯಾಟರಿಯನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಸರಣಿಯಲ್ಲಿ ಅತಿ ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿರುವ ಫೋನ್ ಇದಾಗಿದೆ.
ಇದರಲ್ಲೂ ಸಹ 80W ವೇಗದ ಚಾರ್ಜಿಂಗ್ ಸೌಲಭ್ಯವಿದ್ದು ದೊಡ್ಡ ಬ್ಯಾಟರಿಯನ್ನು ಸಹ ಅತಿ ಬೇಗನೆ ಚಾರ್ಜ್ ಮಾಡಬಹುದು. ಫೋಟೋಗ್ರಫಿಗಾಗಿ ಇದರಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 50MP ಅಲ್ಟ್ರಾ ವೈಡ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಕಡಿಮೆ ಬೆಲೆಯ ಫೋನ್ ಆದರೂ ಇದರಲ್ಲಿ ಸೋಶಿಯಲ್ ಮೀಡಿಯಾಗೆ ಬೇಕಾದ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು 4K ವಿಡಿಯೋ ರೆಕಾರ್ಡಿಂಗ್ ಮಾಡಲು ಸಾಧ್ಯವಿದೆ.