ಒಪ್ಪೋ ಕಂಪನಿಯು ತನ್ನ ಹೊಸ Oppo Reno 16 Series ಮೊಬೈಲ್ ಅನ್ನು ಇಂದು (ಜುಲೈ 2 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಅನಾವರಣ ಮಾಡಲಿದೆ. ಮುಂಬರುವ ಈ ಮೊಬೈಲ್ ಲಾಂಚ್ ಕುರಿತಾಗಿ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಅಂದಹಾಗೆ ಈ ಮೊಬೈಲ್ ಸರಣಿಯು ಒಪ್ಪೋ ರೆನೋ 16 ಹಾಗೂ ಒಪ್ಪೋ ರೆನೋ 16c ಮಾಡೆಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಹಾಗೆಯೇ ಫೋನ್‌ಗಳೊಂದಿಗೆ ಎನ್‌ಕೋ ಏರ್ 5 ಟಿಡಬ್ಲ್ಯೂಎಸ್ ಇಯರ್‌ಬಡ್ಸ್ ಡಿವೈಸ್ ಅನ್ನು ಲಾಂಚ್ ಮಾಡುವ ನಿರೀಕ್ಷೆಗಳು ಇವೆ. ಇನ್ನು ಒಪ್ಪೋ ರೆನೋ 16 ಮೊಬೈಲ್ ಸರಣಿಯು ಸ್ಟಾರಿ ವೈಟ್, ಟ್ವಿಲೈಟ್ ವೈಲೆಟ್ ಮತ್ತು ಸ್ಟೆಲ್ಲರ್ ಪರ್ಪಲ್ ಬಣ್ಣಗಳ ಆಯ್ಕೆಗಳೊಂದಿಗೆ ಲಗ್ಗೆ ಇಡುವ ನಿರೀಕ್ಷೆಗಳು ಇವೆ. ಹಾಗಾದರೆ ಒಪ್ಪೋ ರೆನೋ 16 ಸರಣಿಯ ಫೋನ್‌ಗಳ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ವಾಟ್ಸಾಪ್ Username ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್! Meta ಸಂಸ್ಥೆಗೆ ನೋಟಿಸ್ ಜಾರಿ
ಒಪ್ಪೋ ರೆನೋ 16 ಮೊಬೈಲ್ ಸರಣಿಯು ಇಂದು (ಜುಲೈ 2, 2026 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಲೈನ್‌ಅಪ್ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಮಾರಾಟವಾಗುವುದನ್ನು ದೃಢಪಡಿಸಲಾಗಿದೆ. ಇನ್ನು ಈ ಫೋನ್ ಒಪ್ಪೋ ರೆನೋ 16 ಹಾಗೂ ಒಪ್ಪೋ ರೆನೋ 16c ಮಾಡೆಲ್‌ಗಳಲ್ಲಿ ಎಂಟ್ರಿ ಕೊಡಲಿದೆ. ಅಂದಹಾಗೆ ಈ ಸರಣಿಯು ಸ್ಟಾರಿ ವೈಟ್, ಟ್ವಿಲೈಟ್ ವೈಲೆಟ್ ಮತ್ತು ಸ್ಟೆಲ್ಲರ್ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಒಪ್ಪೋ ರೆನೋ 16 ಫೋನ್ 6.32 ಇಂಚಿನ AMOLED ಡಿಸ್‌ಪ್ಲೇ ಪಡೆದಿರಲಿದ್ದು, 3D ಪಾಪ್ ಪ್ಲಾನೆಟ್ ಡಿಸೈನ್ ಹೊಂದಿರಲಿದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಈ ಫೋನ್ 6,700mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದುಕೊಂಡಿರಲಿದೆ. ಅಲ್ಲದೇ ಇದು ಟ್ರಿಪಲ್ 50MP ಕ್ಯಾಮೆರಾ ರಚನೆ ಜೊತೆಗೆ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ.
ಒಪ್ಪೋ ರೆನೋ 16c ಫೋನ್ 6.57 ಇಂಚಿನ AMOLED ಡಿಸ್‌ಪ್ಲೇ ಹೊಂದಿರಲಿದ್ದು, 3D ಪಾಪ್ ಪ್ಲಾನೆಟ್ ಡಿಸೈನ್ ಪಡೆದಿರಲಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಈ ಫೋನ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಬೆಂಬಲ ಪಡೆದುಕೊಂಡಿರಲಿದೆ. ಅಲ್ಲದೇ ಇದು ಟ್ರಿಪಲ್ 50MP ಕ್ಯಾಮೆರಾ ರಚನೆ ಜೊತೆಗೆ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ.