ಬಿಡುಗಡೆಗೂ ಮುನ್ನವೇ Oppo Reno 16 ಮತ್ತು Oppo Reno 16c ಫೋನ್‌ಗಳ ಬೆಲೆ ಲೀಕ್!
ಜುಲೈ 2 ರಂದು ಒಪ್ಪೋ ರೆನೋ 16 ಹಾಗೂ ರೆನೋ 16c ಬಿಡುಗಡೆ
ಒಪ್ಪೋ ರೆನೋ 16 ಸರಣಿಯ ಎರಡು ಮೊಬೈಲ್‌ಗಳು 50MP ಸೆಲ್ಫಿ ಕ್ಯಾಮೆರಾ ಪಡೆದಿರಲಿವೆ
ಈ ಸರಣಿಯು ಸ್ಟಾರಿ ವೈಟ್, ಟ್ವಿಲೈಟ್ ವೈಲೆಟ್ ಮತ್ತು ಸ್ಟೆಲ್ಲರ್ ಪರ್ಪಲ್ ಕಲರ್ ಆಯ್ಕೆಯಲ್ಲಿ ಲಭ್ಯ
ಜುಲೈ 2 ರಂದು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಅನಾವರಣಗೊಳ್ಳಲಿರುವ ಒಪ್ಪೋ ಕಂಪನಿಯ ಹೊಸ Oppo Reno 16 ಸರಣಿಯು ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಮೊಬೈಲ್ ಸರಣಿಯು ಒಪ್ಪೋ ರೆನೋ 16 ಹಾಗೂ ಒಪ್ಪೋ ರೆನೋ 16c ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಅಚ್ಚರಿಯ ಸಂಗತಿಯೆಂದರೆ ಬಿಡುಗಡೆಗೂ ಮುನ್ನವೇ ಈ ಫೋನ್‌ಗಳ ಬೆಲೆ ಮಾಹಿತಿ ಲೀಕ್ ಆಗಿದೆ. ಇನ್ನು ಈ ಮೊಬೈಲ್ ಲಾಂಚ್ ಕುರಿತಾಗಿ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಒಪ್ಪೋ ರೆನೋ 16 ಮೊಬೈಲ್ ಸರಣಿಯ ಫೋನ್‌ಗಳು ಆಕರ್ಷಕ ಬಣ್ಣಗಳ ಆಯ್ಕೆಗಳೊಂದಿಗೆ ಲಗ್ಗೆ ಇಡಲಿವೆ. ಹಾಗಾದರೆ ಒಪ್ಪೋ ರೆನೋ 16 ಸರಣಿಯ ಫೋನ್‌ಗಳ ಲೀಕ್ ಬೆಲೆ, ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ವಾಟ್ಸಾಪ್ Username ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್! Meta ಸಂಸ್ಥೆಗೆ ನೋಟಿಸ್ ಜಾರಿ
Oppo Reno 16 ಸರಣಿಯ ಬೆಲೆ ಲೀಕ್
ಇತ್ತೀಚಿನ ಲೀಕ್ ಮಾಹಿತಿಗಳ ಪ್ರಕಾರ ಒಪ್ಪೋ ರೆನೋ 16 ಫೋನ್ ಬೆಲೆ 59,999 ರೂ.ಗಳು ಎನ್ನಲಾಗಿದೆ. ಹಾಗೆಯೇ ಒಪ್ಪೋ ರೆನೋ 16c ಮೊಬೈಲ್ ಬೆಲೆ 49,999 ರೂ.ಗಳು ಎಂದು ನಿರೀಕ್ಷಿಸಲಾಗಿದೆ. ಖಚಿತವಾಗಿ ಹೇಳಬೇಕೆಂದರೆ ಎರಡೂ ಬೆಲೆಗಳು ಅವುಗಳ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚಾಗುತ್ತವೆ ಎನ್ನಲಾಗಿದೆ. ಇನ್ನು ಜುಲೈ 2, 2026 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಲೈನ್‌ಅಪ್ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಮಾರಾಟವಾಗುವುದನ್ನು ದೃಢಪಡಿಸಲಾಗಿದೆ. ಇನ್ನು ಈ ಫೋನ್ ಒಪ್ಪೋ ರೆನೋ 16 ಹಾಗೂ ಒಪ್ಪೋ ರೆನೋ 16c ಮಾಡೆಲ್‌ಗಳಲ್ಲಿ ಎಂಟ್ರಿ ಕೊಡಲಿದೆ. ಅಂದಹಾಗೆ ಈ ಸರಣಿಯು ಸ್ಟಾರಿ ವೈಟ್, ಟ್ವಿಲೈಟ್ ವೈಲೆಟ್ ಮತ್ತು ಸ್ಟೆಲ್ಲರ್ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಒಪ್ಪೋ ರೆನೋ 16 ಮೊಬೈಲ್ ನಿರೀಕ್ಷಿತ ಫೀಚರ್ಸ್
ಮುಂಬರುವ ಹೊಸ ಒಪ್ಪೋ ರೆನೋ 16 ಫೋನ್ 6.32 ಇಂಚಿನ 120Hz AMOLED ಡಿಸ್‌ಪ್ಲೇ ಹೊಂದಿರಲಿದ್ದು, 3D ಪಾಪ್ ಪ್ಲಾನೆಟ್ ಡಿಸೈನ್ ಪಡೆದಿರಲಿದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಈ ಫೋನ್ 6,700mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದುಕೊಂಡಿರಲಿದೆ. ಅಲ್ಲದೇ ಇದು ಟ್ರಿಪಲ್ 50MP ಕ್ಯಾಮೆರಾ ರಚನೆ ಜೊತೆಗೆ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ.
ಒಪ್ಪೋ ರೆನೋ 16c ಮೊಬೈಲ್ ನಿರೀಕ್ಷಿತ ಫೀಚರ್ಸ್
ಒಪ್ಪೋ ರೆನೋ 16c ಫೋನ್ 6.57 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಹೊಂದಿರಲಿದ್ದು, 3D ಪಾಪ್ ಪ್ಲಾನೆಟ್ ಡಿಸೈನ್ ಪಡೆದಿರಲಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಈ ಫೋನ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಬೆಂಬಲ ಪಡೆದುಕೊಂಡಿರಲಿದೆ. ಅಲ್ಲದೇ ಇದು ಟ್ರಿಪಲ್ 50MP ಕ್ಯಾಮೆರಾ ರಚನೆ ಜೊತೆಗೆ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
