OPPO Reno 15c Launched
ಚೀನಾ ದೇಶದಲ್ಲಿ OPPO Reno 15c ನೆನ್ನೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಇದು ಲೇಟೆಸ್ಟ್ ಸ್ನಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್‌ನೊಂದಿಗೆ ಬಂದಿದೆ. ರೆನೋ 15 ಸರಣಿಯ ಈ ಹೊಸ ಮೊಬೈಲ್ ಮೂರು ಬಣ್ಣಗಳಲ್ಲಿ ಸಿಗಲಿದೆ. ಇದರಲ್ಲಿ ಬರೋಬ್ಬರಿ 12GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ (ಸಂಗ್ರಹಣೆ) ಇದೆ. ಈ ಹ್ಯಾಂಡ್‌ಸೆಟ್ 120Hz ವರೆಗಿನ ರಿಫ್ರೆಶ್ ದರದೊಂದಿಗೆ 6.59 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಹಿಂಭಾಗದಲ್ಲಿ ಇದು ಎರಡು 50-ಮೆಗಾಪಿಕ್ಸೆಲ್ ಸಂವೇದಕಗಳನ್ನು ಒಳಗೊಂಡಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಇಟ್ಟಿದೆ. ಒಪ್ಪೋ ರೆನೋ 15c ನಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50MP ಮೆಗಾಪಿಕ್ಸೆಲ್‌ನ ಉತ್ತಮ ಮುಂಭಾಗದ ಕ್ಯಾಮೆರಾ ಇದೆ. ಪವರ್‌ಗಾಗಿ ಇದು 6,500mAh ಬ್ಯಾಟರಿಯನ್ನು ಪಡೆದಿದ್ದು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Also Read: Jio, Airtel ಮತ್ತು BSNL ಹೊಂದಿರುವ 349 ರೂಗಳ ಒಂದೇ ಬೆಲೆಯ ರಿಚಾರ್ಜ್ ಯೋಜನೆಯಲ್ಲಿ ಯಾರ ಪ್ಲಾನ್ ಬೆಸ್ಟ್?
ಪ್ರಸ್ತುತ ಇದು 12GB RAM + 256GB ಸ್ಟೋರೇಜ್ ಮಾದರಿಯ ಈ Oppo Reno 15c ಬೆಲೆ CNY 2,899 (ಸರಿಸುಮಾರು 37,000 ರೂಪಾಯಿಗಳು) ರಿಂದ ಪ್ರಾರಂಭವಾಗುತ್ತದೆ. 512GB ಸ್ಟೋರೇಜ್ ರೂಪಾಂತರ (ಅದೇ ಪ್ರಮಾಣದ RAM ಹೊಂದಿರುವ) ಬೆಲೆ CNY 3,199 (ಸರಿಸುಮಾರು 41,000 ರೂಪಾಯಿಗಳು) ಆಗಿದೆ. ಇದು ಅರೋರಾ ಬ್ಲೂ, ಕಾಲೇಜ್ ಬ್ಲೂ ಮತ್ತು ಸ್ಟಾರ್‌ಲೈಟ್ ಬೋ ಬಣ್ಣಗಳ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬಂದಿದೆ. ಪ್ರಸ್ತುತ ಇದರ ಬಿಡುಗಡೆಯನ್ನು ಭಾರತದಲ್ಲಿ ಯಾವಾಗ ಮಾಡಲಿದೆ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳಿಲ್ಲ.
ಡ್ಯುಯಲ್ ಸಿಮ್ ಹಾಕಬಹುದಾದ ಒಪ್ಪೋ ರೆನೋ 15c ಆಂಡ್ರಾಯ್ಡ್ 16 ಆಧಾರಿತ ಕಲರ್ ಓಎಸ್ 16 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.59 ಇಂಚಿನ FHD+ (1,256 x 2,760 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ 120Hz ವರೆಗೆ ರಿಫ್ರೆಶ್ ದರ ಮತ್ತು 1200 ನಿಟ್ಸ್ ಗರಿಷ್ಠ ಹೊಳಪು, 240Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರ ಮತ್ತು 460ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಬಹಳ ಚೆನ್ನಾಗಿದೆ. ಈ ಹ್ಯಾಂಡ್‌ಸೆಟ್ ಅಡ್ರಿನೊ 722 ಜಿಪಿಯು ಜೊತೆಗೆ ಸ್ನಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್, 12GB ವರೆಗಿನ LPDDR5x RAM ಮತ್ತು 512GB ವರೆಗಿನ UFS 3.1 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಒಳಗೊಂಡಿದೆ.
ಹಿಂಭಾಗದಲ್ಲಿ OPPO Reno 15c ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಸೇರಿಸಲಾಗಿದೆ. ಮುಂಭಾಗದಲ್ಲಿ ಇದು 50MP ಮೆಗಾಪಿಕ್ಸೆಲ್‌ನ ಕ್ಲಿಯರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Also Read: Realme Narzo 90x ಬರೋಬ್ಬರಿ 7000mAh ಬ್ಯಾಟರಿಯೊಂದಿಗೆ ಕೈಗೆಟಕುವ ಬೆಲೆಗೆ ಬೆಸ್ಟ್ ಗೇಮಿಂಗ್ ಫೋನ್ ಬಿಡುಗಡೆ!
ಒಪ್ಪೋ ರೆನೋ 15c ನಲ್ಲಿರುವ ಇತರೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, NFC, BeiDou, GPS, GLONASS, ಗೆಲಿಲಿಯೋ, QZSS, Wi-Fi 6 ಮತ್ತು USB ಟೈಪ್-C ಪೋರ್ಟ್ ಸೇರಿವೆ. ಸ್ಮಾರ್ಟ್‌ಫೋನ್ ಗಟ್ಟಿಮುಟ್ಟಾದ IP66, IP68 ಮತ್ತು IP69 ನೀರು ಮತ್ತು ಧೂಳು ನಿರೋಧಕ ರೇಟಿಂಗ್ ಅನ್ನು ಹೊಂದಿದೆ. ಲಾಕ್ ತೆಗೆಯಲು ಇನ್-ಡಿಸ್ಪ್ಲೇ ಅಲ್ಟ್ರಾಸೌಂಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡಲಾಗಿದೆ. ಒಪ್ಪೋ ರೆನೋ 15c ಸ್ಮಾರ್ಟ್‌ಫೋನ್ 6500mAh ಬ್ಯಾಟರಿಯನ್ನು ಹೊಂದಿದ್ದು ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.