Oppo Reno 15c: Oppo ಮೊಬೈಲ್ ಸಂಸ್ಥೆಯು ಭಾರತದಲ್ಲಿ ಇಂದು ತನ್ನ ನೂತನ Oppo Reno 15c ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಸಂಸ್ಥೆಯ Reno 15 ಸರಣಿಯ ಮುಂದುವರಿದ ಭಾಗವಾಗಿದ್ದು ಈ ಸರಣಿಯ ಕೈಗೆಟುಕುವ ಆಯ್ಕೆ ಎನಿಸಿದೆ. ಈ ನೂತನ ಮೊಬೈಲ್ ಅತ್ಯುತ್ತಮ ಬ್ಯಾಟರಿ ಬಾಳಿಕೆ, ಆಕರ್ಷಕ ಕ್ಯಾಮೆರಾ ಜೊತೆಗೆ ವೇಗದ ಪ್ರೊಸೆಸರ್‌ನಂತಹ ಅಪ್‌ಡೇಟ್ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಈ ಮೊಬೈಲ್ 7000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಸಹ ಒಳಗೊಂಡಿದೆ. ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಆಗಿದೆ. ಹಾಗಾದರೆ Oppo Reno 15c ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಸಖತ್ ಸ್ಟೈಲಿಶ್ ಡಿಸೈನ್ ಹೊಂದಿರುವ Oppo Find X8 Pro ಬೆಲೆಯಲ್ಲಿ ಭರ್ಜರಿ ಇಳಿಕೆ!
Oppo Reno 15c ಫೋನ್ ದೇಶಿಯ ಮಾರುಕಟ್ಟೆಗೆ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಎಂಟ್ರಿ ಕೊಟ್ಟಿದೆ. ಈ ಮೊಬೈಲ್‌ನ ಆರಂಭಿಕ 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆಯು 34,999 ರೂಗಳು ಆಗಿದೆ. ಹಾಗೆಯೇ ಇದರ 12GB+256GB ಸ್ಟೋರೇಜ್ ವೇರಿಯಂಟ್ 37,999 ರೂಗಳ ಬೆಲೆಯಲ್ಲಿ ಲಭ್ಯ. ಇನ್ನು ಈ ಫೋನ್ ಆಫ್ಟರ್‌ಗ್ಲೋ ಪಿಂಕ್ ಮತ್ತು ಟ್ವಿಲೈಟ್ ಬ್ಲೂ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇರಲಿವೆ. ಅಂದಹಾಗೆ ಈ ಮೊಬೈಲ್ ಅನ್ನು ಗ್ರಾಹಕರು Amazon, Flipkart ಒಪ್ಪೋದ ಆನ್‌ಲೈನ್ ಸ್ಟೋರ್ ಮತ್ತು ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಾಗುತ್ತದೆ. ಫೆಬ್ರವರಿ 5 ರಿಂದ ಖರೀದಿಗೆ ಲಭ್ಯ ಇರಲಿದೆ.
Oppo Reno 15c ಫೋನ್ 6.57 ಇಂಚಿನ ಫ್ಲಾಟ್ AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು ಇದು ಪೂರ್ಣ HD+ ರೆಸಲ್ಯೂಶನ್ ಜೊತೆಗೆ ಸ್ಲಿಮ್ ಬೆಜೆಲ್ ವಿನ್ಯಾಸ್ ಪಡೆದಿದೆ. ಹಾಗೆಯೇ ಇದು ಕ್ವಾಲ್ಕಮ್ Snapdragon 6 Gen 1 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದ ಜೊತೆಗೆ Android ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಒಳಗೊಂಡಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಆಗಿದೆ. ಇನ್ನುಳಿದಂತೆ ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 8MP + 2MP ಸೆನ್ಸಾರ್ ಬಲದಲ್ಲಿ ಇವೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ನೀಡಲಾಗಿದೆ.
Oppo Reno 15c ಮೊಬೈಲ್‌ನ ಪ್ಲಸ್ ಪಾಯಿಂಟ್ ಎಂದರೆ ಅದರ ಬ್ಯಾಟರಿ ಆಗಿದ್ದು, ಇದು 7000mAh ಬ್ಯಾಟರಿ ಸಪೋರ್ಟ್ ಪಡೆದಿದೆ. ಇದಕ್ಕೆ ಪೂರಕವಾಗಿ 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಮೊಬೈಲ್ ತೆಳ್ಳನೆಯ ರಚನೆ ಹೊಂದಿದ್ದು ಇದರ ತೂಕ 195 ಗ್ರಾಂ ಆಗಿದೆ. ಇನ್ನು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ Oppo Reno 15c ಮೊಬೈಲ್ IP66, IP68 ಮತ್ತು IP69 ರೇಟಿಂಗ್‌ಗಳ ಸೌಲಭ್ಯ ಸಹ ಹೊಂದಿದೆ.