ಫೆಬ್ರವರಿ 10 ರಂದು ಮಾರುಕಟ್ಟೆಗೆ ಬರ್ತಿದೆ OPPO K14x 5G ಮೊಬೈಲ್‌! ವಾವ್‌ ಎನಿಸುವ ಫೀಚರ್ಸ್‌

Updated on 06-Feb-2026
HIGHLIGHTS

OPPO K14x 5G ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರಲಿದೆ

OPPO K14x 5G ಮೊಬೈಲ್ ಫೆ 10 ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ

OPPO K14x 5G ಫೋನ್‌ 6,500mAh ಬ್ಯಾಟರಿ ಪಡೆದಿರುವ ಬಹುತೇಕ ಪಕ್ಕಾ

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾದ OPPO ಸಂಸ್ಥೆಯು ಇದೀಗ OPPO K14x ಮೊಬೈಲ್‌ ಪರಿಚಯಿಸಲು ಸಜ್ಜಾಗಿದೆ. ಮುಂದಿನ ವಾರದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ OPPO K14x ಮೊಬೈಲ್‌ ಕಂಪನಿಯ ಈ ಹಿಂದಿನ ಒಪ್ಪೋ K13x ಫೋನಿನ ಉತ್ತರಾಧಿಕಾರಿಯಾಗಿ ಬರಲಿದೆ. ಅಂದಹಾಗೆ ನೂತನ OPPO K14x ಮೊಬೈಲ್‌ 6500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಖಚಿತ ಎನ್ನಲಾಗಿದೆ. ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯ ಜೊತೆಗೆ ರಿವರ್ಸ್‌ ಚಾರ್ಜಿಂಗ್ ಆಯ್ಕೆಯನ್ನು ಇದು ಒಳಗೊಂಡಿರಲಿದೆ. ಹಾಗಾದರೆ ಇನ್ನೇನು ಕೆಲವೇ ದಿನಗಳಲ್ಲಿ ಗ್ರ್ಯಾಂಡ್‌ ಎಂಟ್ರಿ ಕೊಡಲಿರುವ OPPO K14x ಮೊಬೈಲ್‌ನ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಫೆಬ್ರವರಿ 9 ರಂದು Samsung Galaxy F70e ಮೊಬೈಲ್‌ ಬಿಡುಗಡೆ! ಬೆಲೆ ಮತ್ತು ಫೀಚರ್ಸ್‌ ನೋಡಿ

OPPO K14x 5G ಮೊಬೈಲ್‌ ಲಾಂಚ್‌ ದಿನಾಂಕ ಮತ್ತು ನಿರೀಕ್ಷಿತ ಬೆಲೆ

OPPO ಸಂಸ್ಥೆಯ ನೂತನ OPPO K14x ಮೊಬೈಲ್‌ ಮಾರುಕಟ್ಟೆಗೆ ಬರಲು ತಯಾರಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಮೊಬೈಲ್‌ ಇದೇ ಫೆಬ್ರವರಿ 10 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಬಗ್ಗೆ Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋ ಪೇಜ್‌ ತೆರೆಯಲಾಗಿದೆ. ಆದರೆ ಕಂಪನಿಯು ಮೊಬೈಲ್‌ನ ಬೆಲೆಯ ಈ ಕುರಿತು ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಲಾಂಚ್‌ ದಿನವೇ ಫೋನಿನ ಪ್ರೈಸ್‌ ರಿವೀಲ್‌ ಮಾಡಲಿದೆ. ಇನ್ನು ಈ ಮೊಬೈಲ್‌ ಪ್ರಿಸ್ಮ್ ವೈಲೆಟ್‌ ಗ್ರೀನ್‌ ಹಾಗೂ ಐಸ್‌ ಬ್ಲೂ ಕಲರ್‌ ಆಯ್ಕೆ ಪಡೆದಿರಲಿದೆ.

OPPO K14x 5G ಫೋನಿನ ನಿರೀಕ್ಷಿತ ಫೀಚರ್ಸ್‌

ಲೀಕ್‌ ಮಾಹಿತಿ ಪ್ರಕಾರ OPPO K14x 5G ಮೊಬೈಲ್‌ 6.7 ಇಂಚಿನ HD+ ಡಿಸ್‌ಪ್ಲೇ ಹೊಂದಿರಲಿದ್ದು, ಹಾಗೆಯೇ 120Hz ರಿಫ್ರೆಶ್ ರೇಟ್‌ ಜೊತೆಗೆ 1125 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿರಲಿದೆ. ಅಲ್ಲದೇ ಈ ಫೋನ್‌ MediaTek Dimensity 6300 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ Android 16 ಓಎಸ್‌ ಬೆಂಬಲ ಸಹ ಪಡೆದಿರಲಿದೆ. ಅಲ್ಲದೇ ಇದು 6GB RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರೊಂದಿಗೆ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 45W ಫಾಸ್ಟ್‌ ಸಪೋರ್ಟ್‌ ಸಹ ಪಡೆದಿರಲಿದೆ.

ಹಾಗೆಯೇ OPPO K14x 5G ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50MP AI ಸೆನ್ಸಾರ್‌ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 5MP ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿರುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಫೋನಿನಲ್ಲಿ ರಿವರ್ಸ್‌ ಚಾರ್ಜಿಂಗ್ ಆಯ್ಕೆ ಸಹ ಒದಗಿಸಬಹುದು ಜೊತೆಗೆ IP64 ರೇಟಿಂಗ್ ಸೌಲಭ್ಯ ಸಹ ಪಡೆದಿರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :