ಒಪ್ಪೋ ಮೊಬೈಲ್ ಸಂಸ್ಥೆಯು ಹೊಸದಾಗಿ Oppo K14 Lite ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್ Unisoc T7250 ಆಕ್ಟಾ-ಕೋರ್ ಪ್ರೊಸೆಸರ್ ಬೆಂಬಲದಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಹಾಗೂ 7,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಮುಂಭಾಗದಲ್ಲಿ ಇದು 13MP ಸೆನ್ಸಾರ್‌ನ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ‘Feather Purple’ ಮತ್ತು ‘Stone Brown’ ಕಲರ್ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹಾಗಾದರೇ ಒಪ್ಪೋ K14 ಲೈಟ್ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : OnePlus N6 Lite ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ನಿಗದಿ; ನಿರೀಕ್ಷಿತ ಫೀಚರ್ಸ್ ನೋಡಿ
ಒಪ್ಪೋ ಮೊಬೈಲ್ ಸಂಸ್ಥೆಯ ಒಪ್ಪೋ K14 ಲೈಟ್ ಮೊಬೈಲ್ ಆಕರ್ಷಕ ಫೀಚರ್ಸ್‌ಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ ಆರಂಭಿಕ 4GB RAM + 64GB ಸ್ಟೋರೇಜ್ ವೇರಿಯಂಟ್ 16,999 ರೂ.ಗಳ ಬೆಲೆಯನ್ನು ಹೊಂದಿದೆ. ಈ ಫೋನ್ ‘Feather Purple’ ಮತ್ತು ‘Stone Brown’ ಕಲರ್ ಆಯ್ಕೆ ಪಡೆದುಕೊಂಡಿದೆ. ಅಂದಹಾಗೆ ಈ ಫೋನ್ ಒಪ್ಪೋ ಇ-ಸ್ಟೋರ್ ಮತ್ತು Flipkart ಮೂಲಕ ಇಂದಿನಿಂದಲೇ ಇದು ಖರೀದಿಗೆ ಲಭ್ಯವಿರುತ್ತದೆ.
ಒಪ್ಪೋ K14 ಲೈಟ್ ಸ್ಮಾರ್ಟ್‌ಫೋನ್ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಜೊತೆಗೆ 900 nits ಬ್ರೈಟ್ನೆಸ್ ಸೌಲಭ್ಯ ಅನ್ನು ಪಡೆದಿದೆ. ಹಾಗೆಯೇ ಈ ಸ್ಕ್ರೀನ್ 720 x 1,570 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಹಾಗೆಯೇ ಈ ಫೋನ್ Unisoc T7250 ಆಕ್ಟಾ-ಕೋರ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದು ಧೂಳು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಣೆಗಾಗಿ IP64 ರೇಟಿಂಗ್ ಅನ್ನು ಹೊಂದಿದೆ. ಅಲ್ಲದೇ ಇದು ಆಂಡ್ರಾಯ್ಡ್ 16 ಆಧಾರಿತ ColorOS 16 ಓಎಸ್ ಸಪೋರ್ಟ್ ಪಡೆದಿದೆ.
ಹಾಗೆಯೇ ಒಪ್ಪೋ K14 ಲೈಟ್ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 13MP ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಪಡೆದುಕೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 7,000mAh ಬ್ಯಾಟರಿ ಸಪೋರ್ಟ್ ಹೊಂದಿರುವ ಜೊತೆಗೆ 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.