OPPO K14 5G ಬಿಡುಗಡೆಗೆ ಮುಹೂರ್ತ ಫಿಕ್ಸ್! 7,000mAh ಬ್ಯಾಟರಿಯೊಂದಿಗೆ ಅಬ್ಬರಿಸುವ ನಿರೀಕ್ಷೆ
ಒಪ್ಪೋ K14 ಮೊಬೈಲ್ ಮಾರ್ಚ್ 9 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ
ಒಪ್ಪೋ K14 ಮೊಬೈಲ್ ಸ್ನಾಪ್‌ಡ್ರಾಗನ್ 7s Gen 4 ಪ್ರೊಸೆಸರ್ ಪಡೆದಿರುವ ನಿರೀಕ್ಷೆ ಇದೆ
ಒಪ್ಪೋದ ಈ ಮೊಬೈಲ್ ಕ್ಲಾಸಿಕ್ ವೈಟ್ ಹಾಗೂ ಡಾರ್ಕ್ ಪರ್ಪಲ್ ಕಲರ್ ಆಯ್ಕೆ ಪಡೆದಿರಬಹುದು
OPPO K14 5G: ಒಪ್ಪೋ ಮೊಬೈಲ್ ಇತ್ತೀಚಿಗೆ ಒಪ್ಪೋ K14x ಮೊಬೈಲ್ ಪರಿಚಯಿಸಿ ಮಾರುಕಟ್ಟೆಯ ಗಮನ ಸಳೆದಿದೆ. ಇದೀಗ ತನ್ನ K ಸರಣಿಯಲ್ಲಿ ಮೊತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ದಿನಾಂಕ ಫಿಕ್ಸ್ ಮಾಡಿದೆ. ಸಂಸ್ಥೆಯ ಮುಂಬರುವ ಫೋನ್ OPPO K14 5G ಆಗಿದೆ. ಈ ಮೊಬೈಲ್ ಅನ್ನು ಒಪ್ಪೋ ಕಂಪನಿಯು ಇದೇ ಮಾರ್ಚ್ 9 ರಂದು ಅಧಿಕೃತವಾಗಿ ಲಾಂಚ್ ಮಾಡಲಿದೆ. ಈ ಫೋನ್ 7,000mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿರುವ ಸೂಚನೆಗಳನ್ನು ನೀಡಿದ್ದು Snapdragon 7s Gen 4 ಪ್ರೊಸೆಸರ್ ಪವರ್ ಪಡೆದಿರುವ ಸಾಧ್ಯತೆಗಳು ಇವೆ. ಇನ್ನು ಈ ಫೋನ್ ಕ್ಲಾಸಿಕ್ ವೈಟ್ ಹಾಗೂ ಡಾರ್ಕ್ ಪರ್ಪಲ್ ಕಲರ್ ಆಯ್ಕೆಗಳೊಂದಿಗೆ ಲಗ್ಗೆ ಇಡಬಹುದು ಎನ್ನಲಾಗಿದೆ. ಇನ್ನುಳಿದಂತೆ ಒಪ್ಪೋ K14 5G ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : Holi Wishes 2026 in Kannada: ಹೋಳಿ ಹಬ್ಬದ ಶುಭಾಶಯ ತಿಳಿಸಲು ಇಲ್ಲಿವೆ ಬೆಸ್ಟ್ ಮೆಸೆಜ್‌ಗಳು
OPPO K14 5G ಬಿಡುಗಡೆ ದಿನಾಂಕದ ಮಾಹಿತಿ
ಒಪ್ಪೋ ಸಂಸ್ಥೆಯು K ಸರಣಿಯಲ್ಲಿ ಹೊಸದಾಗಿ ಪರಿಚಯಿಸಲಿರುವ ಒಪ್ಪೋ K14 5G ಈಗಾಗಲೇ ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಸ್ಮಾರ್ಟ್‌ಫೋನ್ ಇದೇ ಮಾರ್ಚ್ 9 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಫೋನ್ ಕುರಿತು ಫ್ಲಿಪ್‌ಕಾರ್ಟ್ ತಾಣದಲ್ಲಿ ಮೀಸಲಾದ ಮೈಕ್ರೋಸೈಟ್ ಈಗಾಗಲೇ ಲೈವ್ ಆಗಿದೆ. ಅಂದಹಾಗೆ ಈ ಫೋನ್ ಎರಡು ಬಣ್ಣಗಳ ಆಯ್ಕೆ ಪಡೆದಿರಲಿದ್ದು ಅವುಗಳು ಕ್ರಮವಾಗಿ ಕ್ಲಾಸಿಕ್ ವೈಟ್ ಹಾಗೂ ಡಾರ್ಕ್ ಪರ್ಪಲ್ ಕಲರ್ ಆಗಿರಲಿವೆ ಎಂದು ಹೇಳಲಾಗುತ್ತಿದೆ. ಇನ್ನು ಫೋನಿನ ಅಧಿಕೃತ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ. ಈ ಫೋನ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಮಾರಾಟ ಪ್ರಾರಂಭಿಸಲಿದೆ.

ಒಪ್ಪೋ K14 5G ನಿರೀಕ್ಷಿತ ಫೀಚರ್ಸ್
ಒಪ್ಪೋ ಸಂಸ್ಥೆಯ ಮುಂಬರುವ ನೂತನ ಒಪ್ಪೋ K14 5G ಸ್ಮಾರ್ಟ್‌ಫೋನ್ ಬ್ಯಾಟರಿ ಪ್ರಮುಖ ಹೈಲೈಟ್ ಆಗಿರಲಿದೆ. ಇದು 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಲಿದ್ದು ಇದಕ್ಕೆ ಪೂರಕವಾಗಿ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದುಕೊಂಡಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಒಪ್ಪೋ K14 5G ಮೊಬೈಲ್‌ನ ಹಿಂಭಾಗದ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ. ಈ ಫೋನ್ LED ಫ್ಲ್ಯಾಷ್ ಬೆಂಬಲದೊಂದಿಗೆ ಸೆಟ್ ಆಗಿರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಅನ್ನು ಹೊಂದಿರುವಂತೆ ಕಾಣುತ್ತದೆ. ಹಾಗೆಯೇ ಒಪ್ಪೋದ ಈ ಮೊಬೈಲ್ ColorOS ಪಡೆದಿರಲಿದೆ ಎನ್ನಲಾಗಿದೆ.
ಅಲ್ಲದೇ ಕೆಲವು ಲೀಕ್ ಮಾಹಿತಿಗಳ ಪ್ರಕಾರ ಈ ಮೊಬೈಲ್ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ. ಈ ಫೋನಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನು ಬಹಿರಂಗವಾಗಬೇಕಿದೆ. ಇನ್ನು ಒಪ್ಪೋ K14 5G ಮೊಬೈಲ್ 20,000 ರೂ.ಗಳ ಆಸುಪಾಸಿನ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಪಡೆಯುವ ನಿರೀಕ್ಷೆಗಳು ಇವೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile



