ಭಾರತದಲ್ಲಿ OPPO Find X9 Ultra ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್! ಜಬರ್ದಸ್ತ್ ಕ್ಯಾಮೆರಾ
ಈ ಎರಡು ಮೊಬೈಲ್‌ಗಳು ಇದೇ ಮೇ 21 ರಂದು ಲಾಂಚ್
ಒಪ್ಪೋ ಫೈಂಡ್ X9 ಅಲ್ಟ್ರಾ ಫೋನ್ 200MP ಕ್ಯಾಮೆರಾ ಹೊಂದಿರಲಿದೆ
ಒಪ್ಪೋ ಫೈಂಡ್ X9s ಮೊಬೈಲ್ 50MP ಕ್ಯಾಮೆರಾ ಒಳಗೊಂಡಿರಲಿದೆ
ಜನಪ್ರಿಯ ಒಪ್ಪೋ ಮೊಬೈಲ್ ಬ್ರಾಂಡ್ ಇದೀಗ OPPO Find X9s ಮತ್ತು OPPO Find X9 Ultra ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲು ಸಜ್ಜಾಗಿದೆ. ಒಪ್ಪೋ ಕಂಪನಿಯು ಈ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇದೇ ಮೇ 21 ರಂದು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ. ಸಂಸ್ಥೆಯ ಒಪ್ಪೋ ಫೈಂಡ್ X9 ಅಲ್ಟ್ರಾ ಫೋನ್ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿರುವ ಕಂಪನಿಯ ಮೊದಲ ಅಲ್ಟ್ರಾ ಬ್ರಾಂಡೆಡ್ ಫ್ಲ್ಯಾಗ್‌ಶಿಪ್ ಆಗಲಿದೆ. ಅವುಗಳ ಪೈಕಿ ಒಪ್ಪೋ ಫೈಂಡ್ X9 ಅಲ್ಟ್ರಾ ಮೊಬೈಲ್ 200MP ಕ್ಯಾಮೆರಾ ರಚನೆ ಅನ್ನು ಪಡೆದಿರಲಿದೆ. ಇನ್ನು ಒಪ್ಪೋ ಫೈಂಡ್ X9s ಫೋನ್ 50MP ಕ್ಯಾಮೆರಾ ಸೆನ್ಸಾರ್ ಹೊಂದಿರಲಿದೆ. ಹಾಗಾದರೆ ಒಪ್ಪೋ ಕಂಪನಿಯ ಈ ಎರಡು ಫೋನ್‌ಗಳ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : ಅಗ್ಗದ ದರದ Redmi A7 Pro 5G ಮೊಬೈಲ್ ಈಗ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ!
OPPO Find X9 Ultra ಲಾಂಚ್ ಮಾಹಿತಿ
ಒಪ್ಪೋ ಫೈಂಡ್ X9s ಮತ್ತು ಒಪ್ಪೋ ಫೈಂಡ್ X9 ಅಲ್ಟ್ರಾ ಮೊಬೈಲ್‌ಗಳು ಇದೇ ಮೇ 21 ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ. ಈ ಫೋನ್‌ಗಳ ಲಾಂಚ್ ಕುರಿತು ಈಗಾಗಲೇ ಅಮೆಜಾನ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಇನ್ನು ಬಿಡುಗಡೆ ಬಳಿಕ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಒಪ್ಪೋದ ಆನ್‌ಲೈನ್ ಸ್ಟೋರ್ ಮೂಲಕ ಭಾರತದಲ್ಲಿ ಲಭ್ಯವಿರುತ್ತವೆ.

ಒಪ್ಪೋ ಫೈಂಡ್ X9 ಅಲ್ಟ್ರಾ ನಿರೀಕ್ಷಿತ ಫೀಚರ್ಸ್
ಮುಂಬರುವ ಹೊಸ ಒಪ್ಪೋ ಫೈಂಡ್ X9 ಅಲ್ಟ್ರಾ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ ಮುಖ್ಯ ಕ್ಯಾಮೆರಾವು 200MP ಸೆನ್ಸಾರ್ ಆಗಿರಲಿದೆ ಜೊತೆಗೆ 50MP 10x ಆಪ್ಟಿಕಲ್ ಟೆಲಿಫೋಟೋ ಕ್ಯಾಮೆರಾ ಸಹ ಒಳಗೊಂಡಿರಲಿದೆ. ಇದು 3D Cryo-velocity ಕೂಲಿಂಗ್ ಸಿಸ್ಟಮ್ ಸೌಲಭ್ಯ ಸಹ ಪಡೆದಿರಲಿದೆ. ಇನ್ನಜು ಈ ಮೊಬೈಲ್ 7,050mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ವ್ಯವಸ್ಥೆ ಹೊಂದಿರಲಿದೆ.
ಒಪ್ಪೋ ಫೈಂಡ್ X9s ನಿರೀಕ್ಷಿತ ಫೀಚರ್ಸ್
ಬರಲಿರುವ ಒಪ್ಪೋ ಫೈಂಡ್ X9s ಮೊಬೈಲ್ ಟ್ರಿಪಲ್ 50MP ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರಲಿದೆ. ಅಲ್ಲದೇ ಇದು ಡ್ಯುಯಲ್ ವಿಡಿಯೋ ಕ್ಯಾಪ್ಚರ್ ಸಪೋರ್ಟ್ ಹೊಂದಿರಲಿದೆ. ಈ ಫೋನಿನ ಎಲ್ಲಾ ಕ್ಯಾಮೆರಾಗಳಲ್ಲಿ 4K 60fps ಡಾಲ್ಬಿ ವಿಷನ್ ರೆಕಾರ್ಡಿಂಗ್ ಸೌಲಭ್ಯ ಇರಲಿದೆ. ಅಂದಹಾಗೆ ಇದು ಮೀಡಿಯಾಟೆಕ್ ಡೈಮೆನ್ಸಿಟಿ 9500s ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇನ್ನು ಈ ಫೋನ್ 7,025mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile