OPPO Find X9 Launched in India
ಭಾರತದಲ್ಲಿ ಒಪ್ಪೋ ಇಂದು ತನ್ನ ಪ್ರೀಮಿಯಂ ಸ್ಮಾರ್ಟ್ಫೋನ್ಗಳನ್ನು ಆಕರ್ಷಕ ಬೆಲೆಗೆ ಒಂದಕ್ಕಿಂತ ಒಂದು ಅಬ್ಬಬಾ ಎನ್ನುವ ಫೀಚರ್ಗಳೊಂದಿಗೆ OPPO Find X9 ಮತ್ತು OPPO Find X9 Pro ಎರಡು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ಗಳು ಈಗಾಗಲೇ ಕಳೆದ ತಿಂಗಳು ತನ್ನ ತಾಯ್ನಾಡಾದ ಚೀನಾದಲ್ಲಿ ಬಿಡುಗಡೆಯಾಗಿದ್ದು ಈಗ ಭಾರತದ ಬಾರಿಯಾಗಿದೆ. ಈ ಸ್ಮಾರ್ಟ್ಫೋನ್ ತುಂಬ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಅಂದ್ರೆ Dimensity 9500 ಚಿಪ್ ಮತ್ತು 7025mAh ಬ್ಯಾಟರಿಯೊಂದಿಗೆ ಪರಿಚಯವಾಗಿದೆ. ಹಾಗಾದ್ರೆ ಇದರ ಫೀಚರ್ ಮತ್ತು ವಿಶೇಷಣಗಳೊಂದಿಗೆ ಬೆಲೆ ಮತ್ತು ಆಫರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
OPPO Find X9 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ Flipkart ಮತ್ತು Amazon ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹74,999 ರೂಗಳಿಗೆ ಮತ್ತು ಇದರ ಮತ್ತೊಂದು 16GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹84,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 10% ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ ಈ OPPO Find X9 ಸ್ಮಾರ್ಟ್ಫೋನ್ 21 ನವೆಂಬರ್ 2025 ರಂದು ಫ್ಲಿಪ್ಕಾರ್ಟ್ ಮತ್ತು ಒಪ್ಪೋವಿನ ಸೈಟ್ ಮೂಲಕ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ.
Also Read: 200 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾ ನೀಡುವ ಬರದಸ್ತ್ Jio ಪ್ಲಾನ್!
OPPO Find X9 ಸ್ಮಾರ್ಟ್ಫೋನ್ 6.59 ಇಂಚಿನ AMOLED ಪ್ಯಾನಲ್ ಅನ್ನು 2760 x 1256 ಪಿಕ್ಸೆಲ್‌ಗಳೊಂದಿಗೆ ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ Corning Gorilla Glass Victus 2 ಗ್ಲಾಸ್ ಹೊಂದಿದೆ. OPPO Find X9 ಫೋನ್ ಕಾಮೆರದಲ್ಲಿ 50MP ಸೋನಿ LYT-808 ಸೆನ್ಸರ್ ಹೊಂದಿದ್ದು 50MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 50MP ಟೆಲಿಫೋಟೋ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ವಿಡಿಯೋ ರೆಕಾರ್ಡಿಂಗ್ ಮಾಡಲು 120fps ಅಲ್ಲಿ 4K Dolby Vision ಸಪೋರ್ಟ್ ಮಾಡುತ್ತದೆ. ಕೊನೆಯದಾಗಿ ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
OPPO Find X9 ಫೋನ್ MediaTek Dimensity 9500 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್ ಜೊತೆಗೆ ColorOS 16 ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, eSIM Support, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ OPPO Find X9 ಸ್ಮಾರ್ಟ್ಫೋನ್ 7025mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 5 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 6 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.