OPPO F35 and Oppo F35 Pro price leaked ahead of India Launch 5 October
ಒಪ್ಪೋ ಕಂಪನಿಯು ಇದೀಗ ನೂತನವಾಗಿ OPPO F35 ಫೋನ್ ಸರಣಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೊಬೈಲ್ ಸರಣಿಯು ಅತೀ ಶೀಘ್ರದಲ್ಲೇ (ಅಕ್ಟೋಬರ್ 5 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಮೊಬೈಲ್ ಸರಣಿ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಅದಾಗ್ಯೂ, ಈ ನೂತನ ಸರಣಿಯು ಒಪ್ಪೋ F35 ಹಾಗೂ ಒಪ್ಪೋ F35 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಈ ಮೊಬೈಲ್ ಸರಣಿಯು 50MP ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಹಾಗಾದರೇ ಒಪ್ಪೋ F35 ಮೊಬೈಲ್ ಸರಣಿಯ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : Vi ಟೆಲಿಕಾಂನ ಜಸ್ಟ್ 299 ರೂ.ಗಳ ಪ್ಲಾನ್‌ನಲ್ಲಿ ಏನುಂಟು ಏನಿಲ್ಲ ಇಲ್ಲಿದೆ ಮಾಹಿತಿ
ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿರುವ ಒಪ್ಪೋ F35 ಮೊಬೈಲ್ ಸರಣಿಯು ಎರಡು ವೇರಿಯಂಟ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳಿವೆ. ಅಂದಹಾಗೆ ಈ ಮೊಬೈಲ್ ಸರಣಿಯು ಇದೇ ಅಕ್ಟೋಬರ್ 5 ರಂದು ಭಾರತೀಯ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಒಪ್ಪೋ F35 ಸರಣಿಯು 8GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರಲಿದೆ. ಇನ್ನು ಈ ಸರಣಿಯ ಹೈ ಎಂಡ್ ವೇರಿಯಂಟ್ ಬೆಲೆಯು 67,999 ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಇದು ಪರ್ಪಲ್, ಲ್ಯಾವೆಂಡರ್ ಮತ್ತು ವೈಟ್ ಕಲರ್ ಆಯ್ಕೆಯನ್ನು ಪಡೆದಿರಲಿದೆ.
ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಡಲಿರುವ ಒಪ್ಪೋ F35 ಪ್ರೊ ಸ್ಮಾರ್ಟ್‌ಫೋನ್ 6.78-ಇಂಚಿನ 1.5K LTPS OLED ಡಿಸ್‌ಪ್ಲೇ ಹೊಂದಿರಲಿದ್ದು, ಇದರೊಂದಿಗೆ ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಪಡೆದಿರಲಿದೆ. ಹಾಗೆಯೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 4 Gen 5 ಅಥವಾ MediaTek Dimensity 7360 Max ಪ್ರೊಸೆಸರ್ ಪವರ್ ಪಡೆದಿರಲಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ 8,000mAh ಅಥವಾ 10,000mAh ಬ್ಯಾಟರಿಯನ್ನು ಪಡೆದಿರಲಿದ್ದು, ದೀರ್ಘಾವಧಿ ಬ್ಯಾಕ್‌ಅಪ್ ಒದಗಿಸಲಿದೆ ಎನ್ನಲಾಗಿದೆ.
ಒಪ್ಪೋ F35 ಪ್ರೊ ಸ್ಮಾರ್ಟ್‌ಫೋನ್ ಹಿಂಬದಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಹಾಗೂ ಸೆಕೆಂಡರಿ ಕ್ಯಾಮೆರಾವು 8MP ಕ್ಯಾಮೆರಾ ಸೌಲಭ್ಯದಲ್ಲಿ ಇರುವ ನಿರೀಕ್ಷೆಗಳು ಇವೆ. ಈ ಸರಣಿಯು IP66/ IP68/ IP69K ರೇಟಿಂಗ್ ಸೌಲಭ್ಯದೊಂದಿಗೆ ನೀರು ಮತ್ತು ಧೂಳಿನ ವಿರುದ್ಧದ ರಕ್ಷಣಾ ಪ್ರಮಾಣೀಕರಣವನ್ನು ಪಡೆಯುವ ಸಾಧ್ಯತೆಯಿದೆ.