ದೇಶೀಯ ಮಾರುಕಟ್ಟೆಗೆ ಇಂದು ಎಂಟ್ರಿ ಕೊಡಲಿದೆ Oppo F33 Pro 5G ಸ್ಮಾರ್ಟ್‌ಫೋನ್ ಸರಣಿ!
ಇಂದು (ಏಪ್ರಿಲ್ 15 ರಂದು) ಒಪ್ಪೋ F33 ಪ್ರೊ ಮೊಬೈಲ್ ಸರಣಿ ಬಿಡುಗಡೆ
7,000mAh ಬ್ಯಾಟರಿ ಒಪ್ಪೋ F33 ಪ್ರೊ ಫೋನ್ ಸರಣಿಯ ಹೈಲೈಟ್ ಎನ್ನಲಾಗಿದೆ
ಒಪ್ಪೋ ಸಂಸ್ಥೆಯ ಈ ಹೊಸ ಸರಣಿಯು ಮೂರು ಬಣ್ಣಗಳ ಆಯ್ಕೆಯಲ್ಲಿ ಎಂಟ್ರಿ ಕೊಡಲಿದೆ
Oppo ಕಂಪನಿಯ ಹೊಸ Oppo F33 Pro 5G ಸ್ಮಾರ್ಟ್‌ಫೋನ್ ಸರಣಿಯು ಇಂದು (ಏಪ್ರಿಲ್ 15 ರಂದು) ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ನೂತನ ಸರಣಿಯು ಒಪ್ಪೋ F33 5G ಹಾಗೂ ಒಪ್ಪೋ F33 ಪ್ರೊ 5G ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಈ ಸರಣಿಯ ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ತಾಣದಲ್ಲಿ ಮೈಕ್ರೋಪೇಜ್ ಲೈವ್ ಆಗಿದೆ. ವಿಶೇಷ ಅಂದ್ರೆ ಈ ಸರಣಿಯು 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಹೈಲೈಟ್ ಆಗಿದೆ. ಹಾಗೆಯೇ ಈ ಫೋನ್ 50MP ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಇದು ಮಿಸ್ಟಿ ಫಾರೆಸ್ಟ್, ಸ್ಟಾರಿ ಬ್ಲೂ ಮತ್ತು ಫ್ಯಾಶನ್ ಕಲರ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ. ಹಾಗಾದರೆ ಒಪ್ಪೋ F33 ಪ್ರೊ ಮೊಬೈಲ್ ಸರಣಿಯ ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : 5000mAh ಬ್ಯಾಟರಿ ಇರುವ ಈ ಮೊಬೈಲ್ ಜಸ್ಟ್ 8,999 ರೂ.ಗಳಿಗೆ ಲಭ್ಯ! ಬೆಸ್ಟ್ ಆಫರ್ ಇದೆ
Oppo F33 Pro 5G ಸರಣಿ ಇಂದು ಲಾಂಚ್
ಒಪ್ಪೋ ಕಂಪನಿಯು ಮಾರುಕಟ್ಟೆಗೆ ಹೊಸದಾಗಿ ಒಪ್ಪೋ F33 ಪ್ರೊ 5G ಸರಣಿಯನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ನೂತನ ಸ್ಮಾರ್ಟ್‌ಫೋನ್ ಸರಣಿಯನ್ನು ಇಂದು (ಏಪ್ರಿಲ್ 15 ರಂದು) ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ದೃಢಪಡಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮಿಸ್ಟಿ ಫಾರೆಸ್ಟ್, ಸ್ಟಾರಿ ಬ್ಲೂ ಮತ್ತು ಫ್ಯಾಶನ್ ಕಲರ್ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಅಧಿಕ. ಈ ಸರಣಿಯ ಫೋನ್‌ಗಳ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಹೊರಹಾಕಿಲ್ಲ.

ಒಪ್ಪೋ F33 ಪ್ರೊ 5G ಫೋನಿನ ನಿರೀಕ್ಷಿತ ಫೀಚರ್ಸ್
ನೂತನ ಒಪ್ಪೋ F33 ಪ್ರೊ 5G ಮೊಬೈಲ್ ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ರಚನೆ ಪಡೆದುಕೊಂಡಿದೆ. ಅಲ್ಲದೇ ಇದು ಫ್ಲಾಟ್ ಬ್ಯಾಕ್ ಮತ್ತು ಫ್ಲಾಟ್ ಫ್ರೇಮ್ ವಿನ್ಯಾಸ ಸಹ ಹೊಂದಿರಲಿದೆ. ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಇದು ಒಳಗೊಂಡಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ಇದರ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಪಡೆದಿರುವುದು ಕನ್ಫರ್ಮ್ ಎನ್ನಲಾಗಿದೆ.
ಇನ್ನು ಒಪ್ಪೋ F33 ಪ್ರೊ 5G ಫೋನ್ AI ಪೋರ್ಟ್ರೇಟ್ ಗ್ಲೋ ಜೊತೆಗೆ ನ್ಯಾಚುರಲ್ ಲೈಟ್, ಫ್ಲ್ಯಾಶ್‌ಲೈಟ್, ರಿಮ್ ಲೈಟ್ ಮತ್ತು ಸ್ಟುಡಿಯೋ ಲೈಟ್ ಕ್ಯಾಮೆರಾ ಎಫೆಕ್ಟ್ ನಂತಹ ಆಯ್ಕೆಗಳನ್ನು ಸಹ ಪಡೆದಿರುವುವ ನಿರೀಕ್ಷೆಗಳು ಇವೆ. ಮುಂಬರುವ ಈ ಫೋನ್ ಆಂಡ್ರಾಯ್ಡ್ ಆಧಾರಿತ ColorOS ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP69K ರೇಟಿಂಗ್ ಸೌಲಭ್ಯ ಪಡೆದುಕೊಂಡಿರಲಿದೆ. ಈ ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಹಾಗೂ ವಾಲ್ಯೂಮ್ ಕಂಟ್ರೋಲ್ ಆಯ್ಕೆಗಳನ್ನು ನೀಡಲಾಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile