OPPO A5 Pro 5G Launch Date Confirmed
OPPO A5 Pro 5G India launch date confirmed: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿ ಒಪ್ಪೋ (OPPO) ತನ್ನ ಮುಂಬರಲಿರುವ OPPO A5 Pro 5G ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದೆ. ಅಲ್ಲದೆ ಬಿಡುಗಡೆಗೂ ಮುಂಚೆಯೇ ಒಂದಿಷ್ಟು ಇಂಟ್ರೆಸ್ಟಿಂಗ್ ಫೀಚರ್ಗಳನ್ನು ಕಂಪನಿ ಬಿಡುಗಡೆಗೊಳಿಸಿದೆ. ಈ OPPO A5 Pro 5G ಸ್ಮಾರ್ಟ್ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು ಈಗ ಭಾರತದ ಬಾರಿಯಾಗಿದೆ. ಈ OPPO A5 Pro 5G ಸ್ಮಾರ್ಟ್ಫೋನ್ ಇದೆ 24ನೇ ಏಪ್ರಿಲ್ 2025 ರಂದು ಮಧ್ಯಾಹ್ನ 12 ಗಂಟೆಗೆ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ (Flipkart) ಮೂಲಕ ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.
ಈ OPPO A5 Pro 5G ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದಾದರೆ ಫೋನ್ IP69 ಪ್ರೊಟೆಕ್ಷನ್‌ನೊಂದಿಗೆ AI Linkboost 2.0 ಅನ್ನು ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್ಫೋನ್ MediaTek Dimensity 7300 ಪವರ್ಫುಲ್ ಪ್ರೊಸೆಸರ್ನೊಂದಿಗೆ ಬರಲಿದ್ದು ಬ್ಯಾಟರಿ ಸಹ ದೊಡ್ಡ ಬ್ಯಾಟರಿಯನ್ನು ನಿರೀಕ್ಷಿಸಲಾಗಿದೆ.
ಈ OPPO A5 Pro 5G ಸ್ಮಾರ್ಟ್ಫೋನ್ ಅದೇ ಸುಮಾರು 5800mAh ಬ್ಯಾಟರಿಯನ್ನು 45W ಫಾಸ್ಟ್ ಚಾರ್ಜ್ ಜೊತೆಗೆ ನಿರೀಕ್ಷಿಸಲಾಗಿದೆ. ಡಿಸ್ಪ್ಲೇಯಲ್ಲಿ ಫೋನ್ 6.67 ಇಂಚಿನ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್‌ನೊಂದಿಗೆ ನಿರೀಕ್ಷಿಸಲಾಗಿದೆ. ಆದರೆ ಪ್ರಸ್ತುತ ಇವುಗಳ ಕಂಫಾರ್ಮ್ ಫೀಚರ್ಗಳನ್ನು ತಿಳಿಯಲು ಇನ್ನೂ ಕೆಲವು ದಿನ ಕಾಯಬೇಕಿದೆ.
Also Read: 7000mAh ಬ್ಯಾಟರಿಯ OPPO K13 5G ಸ್ಮಾರ್ಟ್ಫೋನ್ ಬಿಡುಗಡೆ! ಆಫರ್ ಬೆಲೆ ಮತ್ತು ಟಾಪ್ ಫೀಚರ್ಗಳೇನು?
ಈ ಮುಂಬರಲಿರುವ OPPO A5 Pro 5G ಸ್ಮಾರ್ಟ್ ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಫೋನ್ ಒಟ್ಟು ಎರಡು ಮಾದರಿಗಳಲ್ಲಿ ಬರುವ ನಿರೀಕ್ಷೆಗಳಿವೆ. ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಸುಮಾರು 13,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ 14,999 ರೂಗಳಿಗೆ ನಿರೀಕ್ಷಿಸಲಾಗಿದೆ.
OPPO A5 Pro 5G ಸ್ಮಾರ್ಟ್ ಫೋನ್ ಪ್ರತ್ಯೇಕವಾಗಿ Flipkart ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ. ಅಲ್ಲದೆ ಸ್ಮಾರ್ಟ್ಫೋನ್ ಬ್ಯಾಂಕ್ ಆಫರ್ಗಳೊಂದಿಗೆ ಸುಮಾರು 1000 ರೂಗಳ ಡಿಸ್ಕೌಂಟ್ ನೀಡಬಹುದು. ಅಲ್ಲದೆ ಇದರ ಮೇಲೆ ವಿನಿಮಯ ಆಫರ್ ಜೊತೆಗೆ ಬರಬಹುದು.