OnePlus Nord 6 with 9000mAh battery launched in India Check price sale specification
OnePlus ಕಂಪನಿಯ ಬಹುನಿರೀಕ್ಷಿತ OnePlus Nord 6 ಸ್ಮಾರ್ಟ್‌ಫೋನ್ ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಕೆಲವು ಪವರ್‌ಫುಲ್ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಟ್ಟಿದೆ. ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರುವ ಜೊತೆಗೆ 9,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಒನ್‌ಪ್ಲಸ್ ನಾರ್ಡ್ 6 ಫೋನಿನ ಪ್ರಮುಖ ಹೈಲೈಟ್ಸ್ ಆಗಿದೆ. ಅಲ್ಲದೇ ಈ ಫೋನಿನ ಡಿಸ್‌ಪ್ಲೇಯು 165Hz ವರೆಗೆ ರಿಫ್ರೆಶ್ ರೇಟ್ ಒಳಗೊಂಡಿದೆ. ಇದರೊಂದಿಗೆ ಈ ಮೊಬೈಲ್ ಫ್ರೆಶ್ ಮಿಂಟ್, ಪಿಚ್ ಬ್ಲಾಕ್ ಮತ್ತು ಕ್ವಿಕ್ ಸಿಲ್ವರ್ ಬಣ್ಣಗಳ ಆಯ್ಕೆಯೊಂದಿಗೆ ಲಗ್ಗೆ ಇಟ್ಟಿದೆ. ಹಾಗಾದರೇ ಒನ್‌ಪ್ಲಸ್ ನಾರ್ಡ್ 6 ಮೊಬೈಲ್‌ನ ಬೆಲೆ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
Also Read : Lenovo ಕಂಪನಿಯಿಂದ ಹೊಸ ಲ್ಯಾಪ್‌ಟಾಪ್‌ಗಳ ಬಿಡುಗಡೆ! ಬೆಲೆ ನೋಡಿ
ಒನ್‌ಪ್ಲಸ್ ಸಂಸ್ಥೆಯ ನೂತನ ಒನ್‌ಪ್ಲಸ್ ನಾರ್ಡ್ 6 ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ನಲ್ಲಿ ಮಾರುಕಟ್ಟೆ ಪ್ರವೇಶ ಮಾಡಿದೆ. ಈ ಮೊಬೈಲ್‌ನ 8GB RAM + 256GB ವೇರಿಯಂಟ್ ಬೆಲೆಯು 38,999 ರೂ.ಗಳು ಆಗಿದೆ. ಅದೇ ರೀತಿ 12GB RAM + 256GB ವೇರಿಯಂಟ್ ಬೆಲೆಯು 41,999 ರೂ.ಗಳು ಆಗಿದೆ. ಇನ್ನು ಆಕ್ಸಸ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 3,000 ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ದೊರೆಯುತ್ತದೆ. ಇನ್ನು ಈ ಫೋನ್ ಇದೇ ಏಪ್ರಿಲ್ 9 ರಿಂದ ಮಧ್ಯಾಹ್ನ 12 ಗಂಟೆಗೆ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಈ ಮೊಬೈಲ್ ಫ್ರೆಶ್ ಮಿಂಟ್, ಪಿಚ್ ಬ್ಲಾಕ್ ಮತ್ತು ಕ್ವಿಕ್ ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ಹೊಸ ಒನ್‌ಪ್ಲಸ್ ನಾರ್ಡ್ 6 ಸ್ಮಾರ್ಟ್‌ಫೋನ್ 6.78 ಇಂಚಿನ 1.5k ಸೂಪರ್ AMOLED ಡಿಸ್‌ಪ್ಲೇಯ ಹೊಂದಿದ್ದು, ಇದು 1,272×2,772 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಇದರೊಂದಿಗೆ 165Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 1800 nits ಬ್ರೈಟ್ನೆಸ್ ಪಡೆದುಕೊಂಡಿದೆ. ಹಾಗೆಯೇ ಇದು ಕ್ವಾಲ್ಕಮ್ Snapdragon 8s Gen 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP66, IP68, IP69 ಮತ್ತು IP69K ರೇಟಿಂಗ್ ಸೌಲಭ್ಯ ಬೆಂಬಲಿಸುತ್ತದೆ.
ಒನ್‌ಪ್ಲಸ್ ನಾರ್ಡ್ 6 ಸ್ಮಾರ್ಟ್‌ಫೋನ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ LYT-600 CMOS ಸೆನ್ಸಾರ್ ಅನ್ನು ಹೊಂದಿದ್ದು ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 32MP ಕ್ಯಾಮೆರಾ ರಚನೆ ಒಳಗೊಂಡಿದೆ. ಹಾಗೆಯೇ ಈ ಫೋನ್ 9,000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸೌಲಭ್ಯ ಹೊಂದಿದೆ. ಇದಕ್ಕೆ ಪೂರಕವಾಗಿ 80W SuperVOOC ಚಾರ್ಜಿಂಗ್ ಜೊತೆಗೆ 27W ವೈರ್ಡ್ ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.