ಅಮೆಜಾನ್‌ನಲ್ಲಿ ಹೊಸ OnePlus Nord 6 ಮೊಬೈಲ್‌ನ ಆಫರ್ ಬೆಲೆ ಎಷ್ಟು ಗೊತ್ತಾ? ಇಲ್ಲಿ ನೋಡಿ
ಒನ್‌ಪ್ಲಸ್ ನಾರ್ಡ್ 6 ಮೊಬೈಲ್ ಈಗ ಆಫರ್‌ನಲ್ಲಿ ಲಭ್ಯ
ಒನ್‌ಪ್ಲಸ್ ನಾರ್ಡ್ 6 ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ
ಒನ್‌ಪ್ಲಸ್ ಸಂಸ್ಥೆಯ ಈ ಫೋನ್ 9,000mAh ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ
ಜನಪ್ರಿಯ ಒನ್‌ಪ್ಲಸ್ ಮೊಬೈಲ್ ಬ್ರಾಂಡ್‌ನ ಹೊಸ OnePlus Nord 6 ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಕಂಪನಿಯ ಈ ಮೊಬೈಲ್ ಕ್ವಾಲ್ಕಮ್ Snapdragon 8s Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್ 9,000mAh ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದಿದೆ. ಅಲ್ಲದೇ ಈ ಫೋನ್ ಫ್ರೆಶ್ ಮಿಂಟ್, ಪಿಚ್ ಬ್ಲಾಕ್ ಮತ್ತು ಕ್ವಿಕ್ ಸಿಲ್ವರ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಒನ್‌ಪ್ಲಸ್ ನಾರ್ಡ್ 6 ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಜನಪ್ರಿಯ Vivo T5 Pro 5G ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ! ಆಕರ್ಷಕ ಫೀಚರ್ಸ್
OnePlus Nord 6 ಈಗ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ
ಮೀಡ್‌ರೇಂಜ್ ಬೆಲೆಯಲ್ಲಿ ಜೊತೆಗೆ ಕೆಲವು ಆಕರ್ಷಕ ಫೀಚರ್ಸ್ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ ಒನ್‌ಪ್ಲಸ್ ನಾರ್ಡ್ 6 ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಬೊಂಬಾಟ್ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 12GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 56,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 47,998 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಂದಹಾಗೆ ಈ ಮೊಬೈಲ್ ಫ್ರೆಶ್ ಮಿಂಟ್, ಪಿಚ್ ಬ್ಲಾಕ್ ಮತ್ತು ಕ್ವಿಕ್ ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಒನ್‌ಪ್ಲಸ್ ನಾರ್ಡ್ 6 ಫೀಚರ್ಸ್
ಇತ್ತೀಚಿನ ಒನ್‌ಪ್ಲಸ್ ನಾರ್ಡ್ 6 ಸ್ಮಾರ್ಟ್‌ಫೋನ್ 6.78 ಇಂಚಿನ 1.5k ಸೂಪರ್ AMOLED ಡಿಸ್‌ಪ್ಲೇಯ ಹೊಂದಿದ್ದು, ಇದು 1,272×2,772 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಇದರೊಂದಿಗೆ 165Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 1800 nits ಬ್ರೈಟ್ನೆಸ್ ಪಡೆದುಕೊಂಡಿದೆ. ಹಾಗೆಯೇ ಇದು ಕ್ವಾಲ್ಕಮ್ Snapdragon 8s Gen 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP66, IP68, IP69 ಮತ್ತು IP69K ರೇಟಿಂಗ್ ಸೌಲಭ್ಯ ಬೆಂಬಲಿಸುತ್ತದೆ.
ಒನ್‌ಪ್ಲಸ್ ನಾರ್ಡ್ 6 ಸ್ಮಾರ್ಟ್‌ಫೋನ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ LYT-600 CMOS ಸೆನ್ಸಾರ್ ಅನ್ನು ಹೊಂದಿದ್ದು ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್ 32MP ಕ್ಯಾಮೆರಾ ರಚನೆ ಒಳಗೊಂಡಿದೆ. ಹಾಗೆಯೇ ಈ ಫೋನ್ 9,000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸೌಲಭ್ಯ ಹೊಂದಿದೆ. ಇದಕ್ಕೆ ಪೂರಕವಾಗಿ 80W SuperVOOC ಚಾರ್ಜಿಂಗ್ ಜೊತೆಗೆ 27W ವೈರ್ಡ್ ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
