ಭಾರತದಲ್ಲಿ OnePlus Nord 6 5G ಬಿಡುಗಡೆಗೆ ದಿನಾಂಕ ಫಿಕ್ಸ್! ಫೀಚರ್ಸ್ ನೋಡಿ
ಏಪ್ರಿಲ್ 7 ರಂದು ಒನ್‌ಪ್ಲಸ್ ನಾರ್ಡ್ 6 5G ಭಾರತದಲ್ಲಿ ಲಾಂಚ್
ಒನ್‌ಪ್ಲಸ್ ನಾರ್ಡ್ 6 5G ಫೋನ್ 9,000mAh ಬ್ಯಾಟರಿ ಪಡೆದಿರಲಿದೆ
ಮುಂಬರುವ ಈ ಮೊಬೈಲ್ ಸ್ನಾಪ್‌ಡ್ರಾಗನ್ 8s Gen 4 ಪ್ರೊಸೆಸರ್ ಒಳಗೊಂಡಿರಲಿದೆ
ಒನ್‌ಪ್ಲಸ್ ಕಂಪನಿಯು ತನ್ನ ನೂತನ OnePlus Nord 6 5G ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದು ಇದೀಗ ಬಿಡುಗಡೆ ದಿನಾಂಕವನ್ನು ಸಂಸ್ಥೆಯು ದೃಢಪಡಿಸಿದೆ. ಅಂದಹಾಗೆ ಒನ್‌ಪ್ಲಸ್ ನಾರ್ಡ್ 5 ಫೋನ್ ಉತ್ತರಾಧಿಕಾರಿ ಆಗಿ ಒನ್‌ಪ್ಲಸ್ ನಾರ್ಡ್ 6 5G ಎಂಟ್ರಿ ಕೊಡಲಿದೆ. ಬರಲಿರುವ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಪ್ರೊಸೆಸರ್ ಹೊಂದಿರುವ ಜೊತೆಗೆ 9,000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಬಹುತೇಕ ಖಚಿತವಾಗಿದೆ. ಹಾಗೆಯೇ ಈ ಮೊಬೈಲ್ ಫ್ರೆಶ್ ಮಿಂಟ್, ಹೊಲೊಗ್ರಾಫಿಕ್ ಕ್ವಿಕ್ ಸಿಲ್ವರ್ ಮತ್ತು ಪಿಚ್ ಬ್ಲ್ಯಾಕ್ ಬಣ್ಣಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ. ಹಾಗಾದರೆ ಒನ್‌ಪ್ಲಸ್ ನಾರ್ಡ್ 6 5G ಮೊಬೈಲ್‌ನ ಲಾಂಚ್ ಡೇಟ್, ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
SurveyAlso Read : Vivo X200 ಮೊಬೈಲ್ ಬೆಲೆಯಲ್ಲಿ ಸಖತ್ ಇಳಿಕೆ! ನೀವು ಖರೀದಿ ಮಾಡ್ತೀರಾ?
OnePlus Nord 6 5G ಮೊಬೈಲ್ ಬಿಡುಗಡೆಯ ಮಾಹಿತಿ
ಒನ್‌ಪ್ಲಸ್ ಸಂಸ್ಥೆಯ ಮುಂಬರುವ ನೂತನ ಒನ್‌ಪ್ಲಸ್ ನಾರ್ಡ್ 6 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಮೊಬೈಲ್ ಇದೇ ಏಪ್ರಿಲ್ 7 ರಂದು ಸಂಜೆ 7 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಬಿಡುಗಡೆ ಬಳಿಕ ಅಮೆಜಾನ್ ತಾಣದಲ್ಲಿ ಈ ಫೋನ್ ಖರೀದಿಗೆ ಲಭ್ಯವಿರುತ್ತದೆ. ಅಂದಹಾಗೆ ಈ ಫೋನ್ ಫ್ರೆಶ್ ಮಿಂಟ್, ಹೊಲೊಗ್ರಾಫಿಕ್ ಕ್ವಿಕ್ ಸಿಲ್ವರ್ ಮತ್ತು ಪಿಚ್ ಬ್ಲ್ಯಾಕ್ ಬಣ್ಣಗಳಲ್ಲಿ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಇನ್ನು ಈ ಮೊಬೈಲ್ ಬೆಲೆ ಭಾರತದಲ್ಲಿ 35,000 ರೂ.ಗಳಿಂದ 40,000 ರೂ.ಗಳ ರೇಂಜ್‌ನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಒನ್‌ಪ್ಲಸ್ ನಾರ್ಡ್ 6 5G ನಿರೀಕ್ಷಿತ ಫೀಚರ್ಸ್
ಮುಂಬರುವ ಹೊಸ ಒನ್‌ಪ್ಲಸ್ ನಾರ್ಡ್ 6 5G ಮೊಬೈಲ್ 6.1.5K AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದರ ಸ್ಕ್ರೀನ್ 165Hz ರಿಫ್ರೆಶ್ ರೇಟ್ ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ಡಿಸ್‌ಪ್ಲೇಯು 3,600 nits ವರೆಗೆ ಗರಿಷ್ಠ ಬ್ರೈಟ್ನೆಸ್ ಮತ್ತು 3,840Hz PWM ಡಿಮ್ಮಿಂಗ್ ಪಡೆದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿರಲಿದೆ. ಅಲ್ಲದೇ 80W ಫಾಸ್ಟ್ ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 9,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ.
ಹಾಗೆಯೇ ಒನ್‌ಪ್ಲಸ್ ನಾರ್ಡ್ 6 5G ಮೊಬೈಲ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ ಎನ್ನಲಾಗಿದೆ. ಹಾಗೆಯೇ ಫೋನಿನ ಬ್ಯಾಟರಿ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 2.5 ದಿನಗಳ ವರೆಗೆ ಬಾಳಿಕೆ ಬರಲಿದೆ ಎನ್ನಲಾಗಿದೆ. ಇನ್ನು ಈ ಫೋನ್ 12GB RAM ಹಾಗೂ 256GB ಸ್ಟೋರೇಜ್ ವೇರಿಯಂಟ್‌ನ ಆಯ್ಕೆ ಪಡೆದಿರುವ ನಿರೀಕ್ಷೆಗಳು ಇವೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile