oneplus n6x
ಜನಪ್ರಿಯ ಒನ್‌ಪ್ಲಸ್ ಮೊಬೈಲ್ ಕಂಪನಿಯು ಬಜೆಟ್ ಬೆಲೆಯಲ್ಲಿ ಹೊಸದಾಗಿ OnePlus N6x ಸ್ಮಾರ್ಟ್‌ಫೋನ್ ಅನ್ನು ಇಂದು (ಜುಲೈ 31 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬಜೆಟ್ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6000 ಸರಣಿ ಚಿಪ್‌ಸೆಟ್ ಪ್ರೊಸೆಸರ್ ಹೊಂದಿದೆ. ಅಲ್ಲದೇ 7,000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದೆ. ಇದರೊಂದಿಗೆ ಈ ಫೋನ್ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್ ಆಗಿದೆ. ಇನ್ನು ಈ ಫೋನ್ ಬರ್ಗಂಡಿ ರೆಡ್ ಮತ್ತು ಐಸ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹಾಗಾದರೇ ಒನ್‌ಪ್ಲಸ್ N6x ಮೊಬೈಲ್ ಬೆಲೆ, ಸೇಲ್ ಡೇಟ್ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
ಒನ್‌ಪ್ಲಸ್ ಕಂಪನಿಯ ಹೊಸ ಒನ್‌ಪ್ಲಸ್ N6x ಮೊಬೈಲ್ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳದಿದೆ. ಈ ನೂತನ ಫೋನಿನ 4GB RAM + 64GB ವೇರಿಯಂಟ್ ಬೆಲೆಯು 18,999 ರೂ.ಗಳು ಆಗಿದೆ. ಹಾಗೆಯೇ 4GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 20,999 ರೂ.ಗಳು ಆಗಿದೆ. ಇನ್ನು ಈ ಫೋನ್ ಆಗಸ್ಟ್ 4 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಮತ್ತು ಒನ್‌ಪ್ಲಸ್ ಆನ್‌ಲೈನ್ ಸ್ಟೋರ್ ಮೂಲಕ ಭಾರತದಲ್ಲಿ ಸೇಲ್‌ಗೆ ಬರಲಿದೆ. ಅಂದಹಾಗೆ ಈ ಮೊಬೈಲ್ ಬರ್ಗಂಡಿ ರೆಡ್ ಮತ್ತು ಐಸ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಒನ್‌ಪ್ಲಸ್ N6x ಫೋನ್ 6.8 ಇಂಚಿನ LCD HD+ ಡಿಸ್‌ಪ್ಲೇ ಅನ್ನು ಹೊಂದಿವೆ. ಇದರ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್ ಜೊತೆಗೆ 720 x 1,600 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಅಲ್ಲದೇ 900 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸಫೋರ್ಟ್ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6360 ಅಪೆಕ್ಸ್ ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ 4GB RAM + 64GB ಹಾಗೂ 4GB + 128GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಹಾಗೆಯೇ ಒನ್‌ಪ್ಲಸ್ N6x ಮೊಬೈಲ್ ಹಿಂಭಾಗದಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಅದು 13MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್ 7,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರುವ ಜೊತೆಗೆ 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 5W ವೈರ್ಡ್ ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲ ಹೊಂದಿದೆ.