OnePlus ಸಂಸ್ಥೆಯ ಈ ಮೊಬೈಲ್‌ಗಳ ದರದಲ್ಲಿ ಹೆಚ್ಚಳ! ಖರೀದಿಸುವ ಮುನ್ನ ಹೊಸ ಬೆಲೆ ಗಮನಿಸಿ

HIGHLIGHTS

ಒನ್‌ಪ್ಲಸ್‌ N6x ಹಾಗೂ ಒನ್‌ಪ್ಲಸ್‌ N6 ಮೊಬೈಲ್‌ಗಳ ದರದಲ್ಲಿ ಏರಿಕೆ

ಒನ್‌ಪ್ಲಸ್‌ ನಾರ್ಡ್‌ 6, ನಾರ್ಡ್‌ CE6 ಹಾಗೂ ನಾರ್ಡ್‌ CE6 ಲೈಟ್‌ ಬೆಲೆಗಳಲ್ಲಿ ಹೆಚ್ಚಳ

ಒನ್‌ಪ್ಲಸ್‌ Nord 6 ಮೊಬೈಲ್‌ ಟಾಪ್‌ ಎಂಡ್‌ ಮಾಡೆಲ್‌ ಬೆಲೆಯಲ್ಲಿ 2,000 ರೂ.ಗಳ ಏರಿಕೆ

OnePlus ಸಂಸ್ಥೆಯ ಈ ಮೊಬೈಲ್‌ಗಳ ದರದಲ್ಲಿ ಹೆಚ್ಚಳ! ಖರೀದಿಸುವ ಮುನ್ನ ಹೊಸ ಬೆಲೆ ಗಮನಿಸಿ

ಲೀಡಿಂಗ್ ಮೊಬೈಲ್‌ ಬ್ರಾಂಡ್‌ಗಳ ಪೈಕಿ OnePlus ಕಂಪನಿಯು ಸಹ ಒಂದಾಗಿದೆ. ಕಂಪನಿಯ ಕೆಲವು ಮೊಬೈಲ್‌ಗಳು ದೇಶೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿವೆ. ಆದರೆ ಇದೀಗ ಒನ್‌ಪ್ಲಸ್‌ ಕಂಪನಿಯ OnePlus N6x, OnePlus N6, OnePlus Nord 6, OnePlus Nord CE6 ಮತ್ತು OnePlus Nord CE6 Lite ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್‌ ಏರಿಕೆ ಆಗಿದ್ದು ಖರೀದಿದಾರರು ಅಚ್ಚರಿಯಿಂದ ನೋಡುವಂತಾಗಿದೆ. ಒನ್‌ಪ್ಲಸ್‌ ಮೊಬೈಲ್‌ ಕಂಪನಿಯು ತನ್ನ N ಹಾಗೂ ನಾರ್ಡ್‌ ಸರಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡಿದೆ. ಈ ಮೊಬೈಲ್‌ಗಳ ಮಾಡೆಲ್‌ ಆದರಿಸಿ 1,000 ರೂ.ಗಳಿಂದ 2,000 ರೂ.ಗಳ ಏರಿಕೆ ಮಾಡಲಾಗಿದೆ. ಹಾಗಾದರೆ ಒನ್‌ಪ್ಲಸ್‌ ಕಂಪನಿಯ ಬೆಲೆ ಏರಿಕೆ ಕಂಡ ಸ್ಮಾರ್ಟ್‌ಫೋನ್‌ಗಳ ಹೊಸ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Vivo ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಏರಿಕೆ! ಹೊಸ ಬೆಲೆ ನೋಡಿ

OnePlus ಸಂಸ್ಥೆಯ ಈ ಫೋನ್‌ಗಳ ಬೆಲೆ ಏರಿಕೆ

ಭಾರತದಲ್ಲಿ ಒನ್‌ಪ್ಲಸ್‌ ಸಂಸ್ಥೆಯ N ಹಾಗೂ ನಾರ್ಡ್‌ ಸರಣಿಯ ಕೆಲವು ಮೊಬೈಲ್‌ಗಳ ಬೆಲೆಯಲ್ಲಿ ಏಕಾಏಕಿ ಏರಿಕೆ ಆಗಿದೆ. ಆ ಪೈಕಿ ಕಂಪನಿಯ ಒನ್‌ಪ್ಲಸ್‌ Nord 6 ಮೊಬೈಲ್‌ನ 8GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 44,999 ರೂ.ಗಳು ಆಗಿದ್ದರೆ, ಹೊಸ ಬೆಲೆ 46,999 ರೂ.ಗಳು ಆಗಿದೆ. ಇನ್ನು 12GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 50,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್‌ 52,999 ರೂ.ಗಳು ಆಗಿದೆ.

OnePlus Nord CE6 gets massive price discount on Amazon prime day 2026 sale
OnePlus Nord CE6

ಒನ್‌ಪ್ಲಸ್‌ ಸಂಸ್ಥೆಯ ಒನ್‌ಪ್ಲಸ್‌ Nord CE 6 ಮೊಬೈಲ್‌ನ 8GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 35,999 ರೂ.ಗಳು ಆಗಿದ್ದರೆ, ಹೊಸ ಬೆಲೆ 37,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 39,999 ರೂ.ಗಳು ಆಗಿದ್ದರೆ, ಹೊಸ ಬೆಲೆ 41,999 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಹಾಗೆಯೇ ಒನ್‌ಪ್ಲಸ್‌ ಕಂಪನಿಯ ಒನ್‌ಪ್ಲಸ್‌ Nord CE 6 Lite ಸ್ಮಾರ್ಟ್‌ಫೋನಿನ 6GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 25,999 ರೂ.ಗಳು ಆಗಿದ್ದರೆ, ಹೊಸ ಬೆಲೆ 28,999 ರೂ.ಗಳು ಆಗಿದೆ. ಇನ್ನು 8GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 27,999 ರೂ.ಗಳು ಆಗಿದ್ದರೆ, ಹೊಸ ಬೆಲೆ 30,999 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಅದೇ ರೀತಿ ಒನ್‌ಪ್ಲಸ್‌ ಕಂಪನಿಯ ಒನ್‌ಪ್ಲಸ್‌ N6x, ಸ್ಮಾರ್ಟ್‌ಫೋನಿನ 4GB + 64GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 19,999 ರೂ.ಗಳು ಆಗಿದ್ದರೆ, ಹೊಸ ಬೆಲೆ 20,999 ರೂ.ಗಳು ಆಗಿದೆ. ಇನ್ನು 4GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 20,999 ರೂ.ಗಳು ಆಗಿದ್ದರೆ, ಹೊಸ ಬೆಲೆ 22,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಇನ್ನು ಒನ್‌ಪ್ಲಸ್‌ ಕಂಪನಿಯ ಒನ್‌ಪ್ಲಸ್‌ N6 ಮೊಬೈಲ್‌ನ 4GB + 64GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 22,999 ರೂ.ಗಳು ಆಗಿದ್ದರೆ, ಹೊಸ ಬೆಲೆ 24,999 ರೂ.ಗಳು ಆಗಿದೆ. ಇನ್ನು 6GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 24,999 ರೂ.ಗಳು ಆಗಿದ್ದರೆ, ಹೊಸ ಬೆಲೆ 26,999 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile