OnePlus N6 ಸ್ಮಾರ್ಟ್‌ಫೋನ್‌ ಇದೇ ಜುಲೈ 4 ರಿಂದ ಖರೀದಿಗೆ ಲಭ್ಯ! ಆಫರ್‌ ಬೆಲೆ ನೋಡಿ

HIGHLIGHTS

ಇದೇ ಜುಲೈ 4 ರಂದು ಒನ್‌ಪ್ಲಸ್‌ N6 ಮೊಬೈಲ್ ಖರೀದಿಗೆ ಲಭ್ಯ

ಒನ್‌ಪ್ಲಸ್‌ N6 ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6000 ಪ್ರೊಸೆಸರ್‌ ಹೊಂದಿದೆ

ಈ ನೂತನ ಮೊಬೈಲ್‌ ಬ್ಲೂ ಸರ್ಫ್, ಕಂಟ್ರಿ ಏರ್ ಮತ್ತು ಸಿಲೂಯೆಟ್ ಕಲರ್ ಆಯ್ಕೆ ಪಡೆದಿದೆ

OnePlus N6 ಸ್ಮಾರ್ಟ್‌ಫೋನ್‌ ಇದೇ ಜುಲೈ 4 ರಿಂದ ಖರೀದಿಗೆ ಲಭ್ಯ! ಆಫರ್‌ ಬೆಲೆ ನೋಡಿ

ಇತ್ತೀಚಿಗೆ ಹೊಸದಾಗಿ ಬಿಡುಗಡೆ ಆಗಿರುವ OnePlus N6 ಸ್ಮಾರ್ಟ್‌ಫೋನ್ ಬಜೆಟ್‌ ದರದ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅಂದಹಾಗೆ ಈ ಮೊಬೈಲ್‌ ಇದೇ ಜುಲೈ 4 ರಂದು ಭಾರತೀಯ ಮಾರುಕಟ್ಟೆಯಲ್ಲಿ ಸೇಲ್‌ ಶುರು ಮಾಡಲಿದೆ. ಈ ನೂತನ ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6000 ಸರಣಿಯ ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿರುವ ಜೊತೆಗೆ 8,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಅಲ್ಲದೇ ಈ ಮೊಬೈಲ್‌ನ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್‌ ಹೊಂದಿದೆ. ಅಲ್ಲದೇ ಈ ಮೊಬೈಲ್‌ ಬ್ಲೂ ಸರ್ಫ್, ಕಂಟ್ರಿ ಏರ್ ಮತ್ತು ಸಿಲೂಯೆಟ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಹಾಗಾದರೇ ಒನ್‌ಪ್ಲಸ್‌ N6 ಫೋನಿನ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Samsung Galaxy S26 Plus ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ! ಇದು ಸೀಮಿತ ಅವಧಿಯ ಆಫರ್‌

OnePlus N6 ಮೊಬೈಲ್‌ ಸೇಲ್ ಮಾಹಿತಿ

ಭಾರತದಲ್ಲಿ ಒನ್‌ಪ್ಲಸ್‌ ಕಂಪನಿಯ ನೂತನ ಒನ್‌ಪ್ಲಸ್‌ N6 ಮೊಬೈಲ್‌ ಇದೇ ಜುಲೈ 4 ರಿಂದ ಅಮೆಜಾನ್ ಇ ಕಾಮರ್ಸ್‌ ಮೂಲಕ ಮಾರಾಟಕ್ಕೆ ಬರಲಿದೆ. ಈ ಮೊಬೈಲ್‌ನ 4GB RAM + 128GB ಸ್ಟೋರೇಜ್‌ ವೇರಿಯಂಟ್‌ 22,999 ರೂ.ಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಮಾಡೆಲ್‌ 24,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಸೇಲ್‌ನಲ್ಲಿ ಆರಂಭಿಕ ರಿಯಾಯಿತಿ ಕೊಡುಗೆ ಲಭ್ಯವಾಗಲಿದೆ. ಅಂದಹಾಗೆ ಇನ್ನು ಈ ಮೊಬೈಲ್‌ ಮೂರು ಬಣ್ಣಗಳ ಆಯ್ಕೆ ಪಡೆದಿದ್ದು ಅವುಗಳು ಕ್ರಮವಾಗಿ ಬ್ಲೂ ಸರ್ಫ್, ಕಂಟ್ರಿ ಏರ್ ಮತ್ತು ಸಿಲೂಯೆಟ್ ಆಗಿವೆ.

OnePlus N6

ಒನ್‌ಪ್ಲಸ್‌ N6 ಮೊಬೈಲ್‌ ಫೀಚರ್ಸ್‌

ಒನ್‌ಪ್ಲಸ್‌ N6 ಮೊಬೈಲ್‌ 6.75 ಇಂಚಿನ HD LCD ಟಚ್‌ಸ್ಕ್ರೀನ್ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಜೊತೆಗೆ 1,200 nits ವರೆಗಿನ ಗರಿಷ್ಠ ಬ್ರೈಟ್ನೆಸ್‌ ಅನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6000 ಸರಣಿಯ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM + 128GB ಹಾಗೂ 6GB RAM + 128GB ವೇರಿಯಂಟ್‌ಗಳ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಇದು ಇತ್ತೀಚಿನ Android 16 ಆಧಾರಿತ OxygenOS 16 ನೊಂದಿಗೆ ಕಾರ್ಯನಿರ್ವಹಿಸಲಿದೆ.

ಹಾಗೆಯೇ ಒನ್‌ಪ್ಲಸ್‌ N6 ಮೊಬೈಲ್‌ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, 10x ಡಿಜಿಟಲ್ ಜೂಮ್ ಅನ್ನು ನೀಡುತ್ತದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಈ ಮೊಬೈಲ್‌ 1080p/60 fps ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಪ್ರಮುಖ ಹೈಲೈಟ್‌ಯೆಂದರೆ ಇದು 8,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ 45W ಟರ್ಬೊಪವರ್ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile