ಒನ್‌ಪ್ಲಸ್ ಮೊಬೈಲ್ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ OnePlus 15R ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಆದರೆ ಇದೀಗ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದ್ದು ಗ್ರಾಹಕರು ಅಚ್ಚರಿಯಿಂದ ನೋಡುವಂತಾಗಿದೆ. OnePlus ಮೊಬೈಲ್ ಕಂಪನಿಯು ತನ್ನ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಫೋನಿನ ಹೊಸ ಬೆಲೆಯನ್ನು ಅಪ್‌ಡೇಟ್ ಮಾಡಿದೆ. ಅಂದಹಾಗೆ ಒನ್‌ಪ್ಲಸ್ 15R ಮೊಬೈಲ್‌ನ ಎಲ್ಲಾ ವೇರಿಯಂಟ್‌ಗಳ ಬೆಲೆಯಲ್ಲಿ 2,500 ರೂ.ಗಳ ಏರಿಕೆಯನ್ನು ಕಂಡಿದೆ. ಇನ್ನು 7400mAh ಬ್ಯಾಟರಿ ಸಪೋರ್ಟ್ ಪಡೆದಿರುವ ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗಾದರೆ ಒನ್‌ಪ್ಲಸ್ 15R ಫೋನಿನ ಹೊಸ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : ಅಗ್ಗದ ಬೆಲೆಯಲ್ಲಿ Lava Bold N2 Lite ಮೊಬೈಲ್ ಲಾಂಚ್! 5,000mAh ಬ್ಯಾಟರಿ ಸೌಲಭ್ಯ ಇದೆ
ಒನ್‌ಪ್ಲಸ್ 15R ಫೋನ್ ಬೆಲೆ ಏರಿಕೆ ಪಡೆದಿದೆ. ಇದು ಒನ್‌ಪ್ಲಸ್ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಬಿಗ್ ಶಾಕ್ ಎನಿಸಿದೆ. ಈ ಫೋನಿನ 12GB + 256GB ವೇರಿಯಂಟ್ ಹಳೆಯ ಬೆಲೆ 47,999 ರೂ.ಗಳ ಆಗಿದೆ. ಈ ವೇರಿಯಂಟ್ ಹೊಸ ದರ 50,499 ರೂ.ಗಳಿಗೆ ಲಭ್ಯ. ಹಾಗೆಯೇ 12GB + 512GB ವೇರಿಯಂಟ್ ಹಳೆಯ ಬೆಲೆ 52,999 ರೂ.ಗಳ ಆಗಿದೆ. ಈ ವೇರಿಯಂಟ್ ಹೊಸ ದರ 55,499 ರೂ.ಗಳು ಆಗಿದೆ.
ಒನ್‌ಪ್ಲಸ್ 15R ಮೊಬೈಲ್ 165Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.83 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 2800 x 1272 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಈ ಮೊಬೈಲ್ Snapdragon 8 Gen 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ Android 16 ಸಪೋರ್ಟ್ ಒಳಗೊಂಡಿದೆ. ಅಲ್ಲದೇ ಇದು 12GB + 256 GB ಹಾಗೂ 12GB + 512 GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಇನ್ನು ಒನ್‌ಪ್ಲಸ್ 15R ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಈ ಫೋನ್ 50MP ಪ್ರಾಥಮಿಕ ಕ್ಯಾಮೆರಾ ಹೊಂದಿರುವ ಜೊತೆಗೆ 8MP ಅಲ್ಟ್ರಾ ವೈಡ್ ಸೆನ್ಸಾರ್ ಸೆಕೆಂಡರಿ ಕ್ಯಾಮೆರಾ ಪಡೆದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 32MP ಕ್ಯಾಮೆರಾವನ್ನು ಒಳಗೊಂಡಿದೆ. 4K 120fps ವಿಡಿಯೋ ಸಪೋರ್ಟ್ ಸಹ ಇದೆ. ಅಲ್ಲದೇ ನೀರು ಹಾಗೂ ಧೂಳು ನಿರೋಧಕತೆಗಾಗಿ IP68/69 ರೇಟಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಈ ಫೋನ್ 7400 mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 80W SUPERVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.