ಅಗ್ಗದ ಬೆಲೆಯಲ್ಲಿ Lava Bold N2 Lite ಮೊಬೈಲ್‌ ಲಾಂಚ್‌! 5,000mAh ಬ್ಯಾಟರಿ ಸೌಲಭ್ಯ ಇದೆ

HIGHLIGHTS

ಲಾವಾ ಈ ಹೊಸ ಫೋನ್‌ 90Hz ವರೆಗೆ ರಿಫ್ರೆಶ್ ರೇಟ್‌ ಒಳಗೊಂಡಿದೆ

ಲಾವಾ ಬೋಲ್ಡ್‌ N2 ಲೈಟ್‌ ಫೋನ್‌ Unisoc 9863A ಪ್ರೊಸೆಸರ್‌ ಹೊಂದಿದೆ

ಲಾವಾ ಬೋಲ್ಡ್‌ N2 ಲೈಟ್‌ ಮೊಬೈಲ್‌ ಕೋಲಾರ್ ಗೋಲ್ಡ್ ಮತ್ತು ನೀಲಗಿರಿ ಬ್ಲೂ ಕಲರ್‌ ಆಯ್ಕೆ ಪಡೆದಿದೆ

ಅಗ್ಗದ ಬೆಲೆಯಲ್ಲಿ Lava Bold N2 Lite ಮೊಬೈಲ್‌ ಲಾಂಚ್‌! 5,000mAh ಬ್ಯಾಟರಿ ಸೌಲಭ್ಯ ಇದೆ

ಲಾವಾ ಮೊಬೈಲ್‌ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇಂದು (ಮಾರ್ಚ್ 31 ರಂದು) ಮತ್ತೊಂದು ಅಗ್ಗದ ಮೊಬೈಲ್‌ ಅನ್ನು ಬಿಡುಗಡೆ ಮಾಡಿದೆ. ಅದುವೇ Lava Bold N2 Lite ಸ್ಮಾರ್ಟ್‌ಫೋನ್‌. ಈ ನೂತನ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ Unisoc 9863A ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಎಂಟ್ರಿ ಲೆವೆಲ್‌ ಮೊಬೈಲ್‌ 5,000mAh ಬ್ಯಾಟರಿ ಸಪೋರ್ಟ್‌ ಒಳಗೊಂಡಿರುವ ಜೊತೆಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಅಲ್ಲದೇ ಇದರ ಡಿಸ್‌ಪ್ಲೇಯು 90Hz ರಿಫ್ರೆಶ್‌ ರೇಟ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ ಆಕರ್ಷಕ ಕೋಲಾರ್ ಗೋಲ್ಡ್ ಮತ್ತು ನೀಲಗಿರಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದೆ. ಹಾಗಾದರೆ ಲಾವಾ ಬೋಲ್ಡ್‌ N2 ಲೈಟ್‌ ಮೊಬೈಲ್‌ನ ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಭಾರತದಲ್ಲಿ iQOO 15 Apex ಎಡಿಷನ್‌ ಮೊಬೈಲ್‌ ಬಿಡುಗಡೆ! ಬೆಲೆ ಎಷ್ಟು ನೋಡಿ

Lava Bold N2 Lite ಬೆಲೆ ಹಾಗೂ ಲಭ್ಯತೆ

ದೇಶಿಯ ಮೊಬೈಲ್‌ ಮಾರುಕಟ್ಟೆ ಪ್ರವೇಶಿಸಿರುವ ಲಾವಾ ಬೋಲ್ಡ್‌ N2 ಲೈಟ್‌ ಮೊಬೈಲ್‌ ಎಂಟ್ರಿ ಲೆವೆಲ್‌ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದೆ. ಈ ಹೊಸ ಲಾವಾ ಬೋಲ್ಡ್‌ N2 ಲೈಟ್‌ ಮೊಬೈಲ್‌ನ 3GB RAM + 64GB ಸ್ಟೋರೇಜ್ ವೇರಿಯಂಟ್‌ ಬೆಲೆ 7,399 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್‌ ಕೋಲಾರ್ ಗೋಲ್ಡ್ ಮತ್ತು ನೀಲಗಿರಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನು ಈ ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ 10 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಮೂಲಕ ಮಾರಾಟಕ್ಕೆ ಬರಲಿದೆ. ಗ್ರಾಹಕರು ಈ ಫೋನ್‌ ಅನ್ನು 400 ರೂ.ಗಳ ಕೂಪನ್ ರಿಯಾಯಿತಿಯೊಂದಿಗೆ ಪಡೆಯಬಹುದು.

Lava Bold N2 Lite

ಲಾವಾ ಬೋಲ್ಡ್‌ N2 ಲೈಟ್‌ ಫೀಚರ್ಸ್‌ ಹೀಗಿವೆ

ಹೊಸ ಲಾವಾ ಬೋಲ್ಡ್‌ N2 ಲೈಟ್‌ ಮೊಬೈಲ್‌ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್‌ 90Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 720×1,600 ಪಿಕ್ಸೆಲ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದರೊಂದಿಗೆ ಈ ಫೋನ್‌ ಆಕ್ಟಾ ಕೋರ್ Unisoc 9863A ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದೆ.

ಹಾಗೆಯೇ ಲಾವಾ ಬೋಲ್ಡ್‌ N2 ಲೈಟ್‌ ಮೊಬೈಲ್‌ ಹಿಂಭಾಗದಲ್ಲಿ LED ಫ್ಲ್ಯಾಷ್‌ನೊಂದಿಗೆ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇದರ ಮೊದಲ ಕ್ಯಾಮೆರಾವು 13MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್‌ 5 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 10W ವೈರ್ಡ್ ಚಾರ್ಜಿಂಗ್‌ ಅನ್ನು ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo