OnePlus 15 price drop
ಭಾರತದಲ್ಲಿ ಇಂದು ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬ್ರಾಂಡ್ ಮುಂಬರಲಿರುವ OnePlus 15R ಅನ್ನು ಸಂಜೆ ಬಿಡುಗಡೆಗೊಳಿಸಲಿದ್ದು ಇದರಡಿಯಲ್ಲಿ ಕಂಪನಿ ಈಗಾಗಲೇ ಲಭ್ಯವಿರುವ ಮತ್ತು ಸಿಕ್ಕಾಪಟ್ಟೆ ಮಾರಾಟವಾಗುತ್ತಿರುವ ಈ OnePlus 15 ಸ್ಮಾರ್ಟ್‌ಫೋನ್ ಮೇಲೆ ಅತ್ಯುತ್ತಮ ಬೆಲೆ ಕಡಿತಗೊಳಿಸಿ ಮಾರಾಟಕ್ಕೆ ಪಟ್ಟಿ ಮಾಡಿದೆ. ಈ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಪ್ರೀಮಿಯಂ ಫೀಚರ್ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಪ್ಯಾಕ್ ಮಾಡಲಾಗಿದೆ. ಆಸಕ್ತ ಬಳಕೆದಾರರು ಈ ಸ್ಮಾರ್ಟ್ಫೋನ್ ಅನ್ನು ಆಯ್ದ ಬ್ಯಾಕ್ ಕಾರ್ಡ್ ಬಳಸಿಕೊಂಡು ಬರೋಬ್ಬರಿ 4000 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ಹೆಚ್ಚುವರಿಯಾಗಿ ನಿಮ್ಮ ಹಳೆ ಸ್ಮಾರ್ಟ್ಫೋನ್ ಇದರೊಂದಿಗೆ ಬದಲಾಯಿಸಕೊಳ್ಳುವ ಮೂಲಕ ಮತ್ತಷ್ಟು ಜಬರ್ದಸ್ತ್ ಡೀಲ್ ಪಡೆಯಬಹುದು.
ಭಾರತದಲ್ಲಿ ಇಂದು ಅಮೆಜಾನ್ ಮೂಲಕ OnePlus 15 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ಅದ್ದೂರಿಯ ಮೆಮೊರಿ ರೂಪಾಂತರಗಳಲ್ಲಿ ಮಾರಾಟದಲ್ಲಿ ಲಭ್ಯವಿದೆ. ಇದನ್ನು ಬ್ಯಾಂಕ್ ಮತ್ತು ವಿನಿಮಯ ಆಫರ್ಗಳೊಂದಿಗೆ ಮಾರಾಟವಾಗುತ್ತಿದೆ. ಈ ಫೋನ್ Axis ಮತ್ತು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 4,000 ರೂಗಳ ತಕ್ಷಣದ ರಿಯಾಯಿತಿಯನ್ನು ಪಡೆಯಬಹುದು. ಈ ಫೋನ್ ಇನ್ಫೈನೈಟ್ ಬ್ಲಾಕ್, ಸ್ಯಾಂಡ್ ಸ್ಟಾರ್ಮ್ ಮತ್ತು ಅಲ್ಟ್ರಾ ವೈಲೆಟ್ ಬಣ್ಣಗಳಲ್ಲಿ ಲಭ್ಯವಿದೆ. ಇದು ಈಗಾಗಲೇ ಮಾರಾಟದಲ್ಲಿದೆ ಮತ್ತು ನೀವು ಇದನ್ನು Amazon.in ಮತ್ತು OnePlus.in ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು.
ಅಲ್ಲದೆ OnePlus 15 ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ OnePlus 15 ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 44,400 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: ಭಾರತದಲ್ಲಿ Ai+ Nova Flip ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಘೋಷಿಸಿದ ಕಂಪನಿ! ನಿರೀಕ್ಷಿತ ಫೀಚರ್ಗಳೇನು?
OnePlus 15 ಫೋನ್ 6.78 ಇಂಚಿನ LTPO AMOLED ಅತ್ಯುತ್ತಮ ಪ್ಯಾನೆಲ್‌ನೊಂದಿಗೆ 165Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಮತ್ತು ಅತ್ಯುತ್ತಮ ಹೊರಾಂಗಣ ಗೋಚರತೆಗಾಗಿ 1800nits ಹೆಚ್ಚಿನ ಬ್ರೈಟ್‌ನೆಸ್ ಮೋಡ್ ಬೆಂಬಲವನ್ನು ಹೊಂದಿದೆ. ಇದರ ಡಿಸ್ಪ್ಲೇ ವರ್ಧಿತ ವೀಕ್ಷಣೆ ಸೌಕರ್ಯಕ್ಕಾಗಿ TUV ರೈನ್‌ಲ್ಯಾಂಡ್ ಇಂಟೆಲಿಜೆಂಟ್ ಐ ಕೇರ್ 5.0 ಪ್ರಮಾಣೀಕರಿಸಲ್ಪಟ್ಟಿದೆ. ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು 50MP ಅಲ್ಟ್ರಾ-ವೈಡ್ ಆಂಗಲ್ ಸೆನ್ಸರ್‌ನೊಂದಿಗೆ ಜೋಡಿಸಲಾಗಿದೆ. ಇದರಲ್ಲಿ 3.5x ಆಪ್ಟಿಕಲ್ ಜೂಮ್ ಮತ್ತು 7x ಉತ್ತಮ-ಗುಣಮಟ್ಟದ ನಷ್ಟವಿಲ್ಲದ ಜೂಮ್‌ನೊಂದಿಗೆ 50MP ಟೆಲಿಫೋಟೋ ಸೆನ್ಸರ್ ಅನ್ನು ಹೊಂದಿದೆ.
ಈ ಫೋನ್ ಆಂಡ್ರಾಯ್ಡ್ 16 ಆಧಾರಿತ OxygenOS 16.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ Snapdragon 8 Elite Gen 5 ಮೂಲಕ ಚಾಲಿತವಾಗಿದ್ದು 16GB ವರೆಗಿನ LPDDR5X RAM ಅನ್ನು ಹೊಂದಿದೆ. ಫೋನ್ 120W SUPERVOOC ಫಾಸ್ಟ್ ಚಾರ್ಜಿಂಗ್ ಮತ್ತು 50W AIRVOOC ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 7300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.