OnePlus 15 ಹೊಸ 4K ವಿಡಿಯೋ ರೆಕಾರ್ಡಿಂಗ್ ಮತ್ತು Snapdragon ಚಿಪ್‌ನೊಂದಿಗೆ ಬಿಡುಗಡೆಯಾಗಲಿದೆ!

Updated on 22-Oct-2025
HIGHLIGHTS

ಮುಂಬರಲಿರುವ OnePlus 15 ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್.

OnePlus 15 ಸ್ಮಾರ್ಟ್ಫೋನ್ 4K ವಿಡಿಯೋ ರೆಕಾರ್ಡಿಂಗ್ ಮತ್ತು Snapdragon ಚಿಪ್‌ನೊಂದಿಗೆ ಬರಲಿದೆ.

OnePlus 15 ಸ್ಮಾರ್ಟ್ಫೋನ್ ಇದೇ 27ನೇ ಅಕ್ಟೋಬರ್ 2025 ರಂದು ಚೀನಾದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

OnePlus 15 India Launch: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲು ಕಂಪನಿಯು ಸಿದ್ಧತೆ ನಡೆಸಿದೆ. ಸ್ಮಾರ್ಟ್ಫೋನ್ ಇದೆ 27ನೇ ಅಕ್ಟೋಬರ್ ರಂದು ಚೀನಾದಲ್ಲಿ ಬಿಡುಗಡೆಯಾದ ತಕ್ಷಣ ಈ ಹೊಸ ಫೋನ್ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ಖಚಿತಪಡಿಸಲು ಕಂಪನಿಯು ಒಂದು ವಿಶೇಷ ಮೈಕ್ರೋಸೈಟ್ ಆರಂಭಿಸಿದೆ. ಈ ಹೊಸ ಫ್ಲಾಗ್‌ಶಿಪ್ ಫೋನ್ ಹಳೆಯ ಮಾದರಿಯ ದೊಡ್ಡ ಬದಲಾವಣೆಗಳನ್ನು ತರಲಿದೆ. ಇದು ಅತಿ ಪವರ್ಫುಲ್ Qualcomm Snapdragon 8 Elite Gen 5 ಪ್ರೊಸೆಸರ್‌ನೊಂದಿಗೆ ಬರುವ ಭಾರತದ ಮೊದಲ ಫೋನ್ ಆಗಿರುತ್ತದೆ ಮತ್ತು ಭಾರತೀಯ ಬಳಕೆದಾರರಿಗೆ ವಿಶೇಷವಾಗಿ ರೂಪಿಸಲಾಗಿದೆ. ಸ್ಮಾರ್ಟ್ಫೋನ್ Android 16 ಆಧಾರಿತ OxygenOS 16 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಲಿದೆ.

OnePlus 15 ನಿರೀಕ್ಷಿತ ಬೆಲೆ ಎಷ್ಟು?

ಚೀನಾದಲ್ಲಿ ಬಿಡುಗಡೆಯಾದ ನಂತರ OnePlus 15 ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತು ಭಾರತದಲ್ಲಿ ನವೆಂಬರ್ ಅಥವಾ ಡಿಸೆಂಬರ್ 2025 ರಲ್ಲೇ ಹೊರಬರುವ ನಿರೀಕ್ಷೆಯಿದೆ. ಕಂಪನಿಯು ಅಕ್ಟೋಬರ್ 29ರಂದು “ವಿಶೇಷವಾದದ್ದನ್ನು” ಘೋಷಣೆ ಸೂಚಿಸಿದೆ. ಇದು ಬಹುಶಃ ಭಾರತದಲ್ಲಿ ಫೋನ್ ಬಿಡುಗಡೆ ದಿನಾಂಕ ಮತ್ತು ಮೊದಲು ಆರ್ಡರ್ ಮಾಡುವ ವಿವರಗಳನ್ನು ಹೇಳಬಹುದು. ಈಗಾಗಲೇ ಒನ್‌ಪ್ಲಸ್ ಇಂಡಿಯಾ ವೆಬ್‌ಸೈಟ್ ಅಲ್ಲಿ ಮಾಹಿತಿ ಅಪ್ಡೇಟ್ ಮಾಡಲಾಗಿದ್ದು ಇದರ ಬೆಲೆಯ ವಿಚಾರದಲ್ಲಿ OnePlus 15 ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಬರಲಿದೆ. ಇದರ ಆರಂಭಿಕ ಬೆಲೆ ಭಾರತದಲ್ಲಿ ಅಂದಾಜು Rs. 70,000 ರಿಂದ Rs. 75,000 ನಡುವೆ ಇರಬಹುದು ಎಂದು ನಿರೀಕ್ಷೆಗಳಿವೆ.

Also Read: 43 Inch Smart TV: ಫ್ಲಿಪ್‌ಕಾರ್ಟ್‌ನಲ್ಲಿ ಹೊಸ QLED ಗೂಗಲ್ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಗೆ ಲಭ್ಯ!

ಒನ್‌ಪ್ಲಸ್ 15 ನಿರೀಕ್ಷಿತ ಫೀಚರ್ಗಳೇನು?

OnePlus 15 ಹೊಸ ಜನರೇಷನ್ ಅತ್ಯುತ್ತಮ ಪ್ರೊಸೆಸರ್ ಆದ Snapdragon 8 Elite Gen 5 ಚಿಪ್ ಅನ್ನು ಲಭ್ಯ. ಇದು ಫೋನ್‌ನ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ಫೋನ್‌ನ ಇನ್ನೊಂದು ದೊಡ್ಡ ವೈಶಿಷ್ಟ್ಯವನ್ನು ಹೊಂದಿದೆ. ಇದು ಹಳೆಯ ಮಾದರಿ ಸಾಕಷ್ಟು ದೊಡ್ಡದಾಗಿದೆ. ಈ ದೊಡ್ಡ ಬ್ಯಾಟರಿಗೆ ವೇಗವಾಗಿ ಚಾರ್ಜ್ ಮಾಡಿದರು 120W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಇರಲಿದೆ. ಇದರ ಜೊತೆಗೆ ಫೋನ್ನಲ್ಲಿ 165Hz ರಿಫ್ರೆಶ್ ರೇಟ್ ಹೊಂದಿರುವ 1.5K BOE Flexible Oriental OLED ಡಿಸ್ಪ್ಲೇ ಇರಲಿದೆ.

Also Read: BSNL Limited Offer: ಬಿಎಸ್ಎನ್ಎಲ್ ಜಬರ್ದಸ್ತ್ ಪ್ಲಾನ್ ಪೂರ್ತಿ 1 ವರ್ಷಕ್ಕೆ ಅನ್ಲಿಮಿಟೆಡ್ ಕರೆ ಮತ್ತು ಬರೋಬ್ಬರಿ 730GB ಡೇಟಾ!

ಇದು ಸ್ಕ್ರೀನ್ ಮೇಲೆ ಬರುವ ದೃಶ್ಯಗಳನ್ನು ಅತಿ ವೇಗವಾಗಿ ಮತ್ತು ಸ್ಪಷ್ಟವಾಗಿ ತೋರಿಸುತ್ತದೆ. ಇದು ಆಡುವವರಿಗೆ ಮತ್ತು ವಿಡಿಯೋ ನೋಡುವವರಿಗೆ ಉತ್ತಮ ಅನುಭವ ನೀಡಲಿದೆ. ಈ ಸ್ಮಾರ್ಟ್ಫೋನ್ ಹೊಸ ವಿನ್ಯಾಸದ ಚೌಕಾಕಾರದ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮೂರು 50MP ಸೆನ್ಸಾರ್‌ಗಳು ಇರಲಿದೆ ಆಪ್ಟಿಕಲ್ ಝೂಮ್ ಸಾಮರ್ಥ್ಯದ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಸಹ ಇರುತ್ತದೆ.

ಫೋನ್ ಹಳೆಯ Hasselblad ಬದಲಾಗಿ OnePlus ತನ್ನದೇ ಆದ DetailMax ಎಂಬ ಹೊಸ ಇಮೇಜ್ ಎಂಜಿನ್ ಅನ್ನು ಬಳಸುವ ನಿರೀಕ್ಷೆಯಿದೆ. ಸಾಫ್ಟ್ವೇರ್ ಬಗ್ಗೆ ಹೇಳುವುದಾದರೆ ಭಾರತೀಯ ಮಾದರಿಯು OxygenOS 16 ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಹೊಸ OnePlus AI ವೈಶಿಷ್ಟ್ಯಗಳನ್ನು ಒಳಗೊಂಡಿದ್ದು ಫೋನ್ ಅನ್ನು ಇನ್ನಷ್ಟು ಸ್ಮಾರ್ಟ್ ಆಗಿ ಮತ್ತು ವೇಗವಾಗಿ ಬಳಸಲು ಸಹಾಯ ಮಾಡುತ್ತದೆ. ಈ ಹೊಸ ಆಪರೇಟಿಂಗ್ ಸಿಸ್ಟಮ್‌ನಿಂದ ಬಳಕೆದಾರರು ಸುಲಭವಾಗಿ ಮತ್ತು ವೇಗವಾಗಿ ಫೋನ್ ಬಳಸುವ ಅನುಭವ ಪಡೆಯಲಿದ್ದಾರೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :