ವೇಗದ ಪ್ರೊಸೆಸರ್‌ ಇರುವ OnePlus 13 ಮೊಬೈಲ್‌ ಈಗ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಭ್ಯ!

HIGHLIGHTS

ಅಮೆಜಾನ್‌ನಲ್ಲಿ ಒನ್‌ಪ್ಲಸ್‌ 13 ಮೊಬೈಲ್‌ಗೆ ಆಕರ್ಷಕ ಆಫರ್‌

ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಪಡೆದಿದೆ

ಒನ್‌ಪ್ಲಸ್‌ ಸಂಸ್ಥೆಯ ಈ ಫೋನ್‌ Snapdragon 8 Elite ಪ್ರೊಸೆಸರ್‌ ಹೊಂದಿದೆ

ವೇಗದ ಪ್ರೊಸೆಸರ್‌ ಇರುವ OnePlus 13 ಮೊಬೈಲ್‌ ಈಗ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಭ್ಯ!

OnePlus ಕಂಪನಿಯ OnePlus 13 ಮೊಬೈಲ್‌ ಪ್ರಿಮಿಯಂ ರೇಂಜ್‌ ಜೊತೆಗೆ ಬಿಗ್ ಬ್ಯಾಟರಿ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಪ್ರಸ್ತುತ ಈ ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಸಖತ್‌ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್‌ ಮೂಲಕ ಈ ಮೊಬೈಲ್‌ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಈ ಮೊಬೈಲ್‌ Snapdragon 8 Elite ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಹ ಪಡೆದಿದೆ. ಅಲ್ಲದೇ ಈ ಫೋನ್‌ ಮಿಡ್ನೈಟ್ ಓಷನ್, ಬ್ಲ್ಯಾಕ್ ಎಕ್ಲಿಪ್ಸ್ ಮತ್ತು ಆರ್ಕ್ಟಿಕ್ ಡಾನ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಬಜೆಟ್‌ ಬೆಲೆಯಲ್ಲಿ ಹೊಸ Moto G77 Power ಬಿಡುಗಡೆ! 7,000mAh ಬ್ಯಾಟರಿ ವಿಶೇಷ

OnePlus 13 ಬೆಲೆಯಲ್ಲಿ ಆಕರ್ಷಕ ಇಳಿಕೆ

ಆಕರ್ಷಕ ಫೀಚರ್ಸ್‌ಗಳ ಮೂಲಕ ಮೊಬೈಲ್‌ ಪ್ರಿಯರ ಗಮನ ಸೆಳೆದಿರುವ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ ಸದ್ಯ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಬೊಂಬಾಟ್‌ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ 12GB RAM + 256GB ಸ್ಟೋರೇಜ್ ವೇರಿಯಂಟ್‌ ಬೆಲೆ 72,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್‌ 57,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್‌ ಮಿಡ್ನೈಟ್ ಓಷನ್, ಬ್ಲ್ಯಾಕ್ ಎಕ್ಲಿಪ್ಸ್ ಮತ್ತು ಆರ್ಕ್ಟಿಕ್ ಡಾನ್ ಆಕರ್ಷಕ ಕಲರ್‌ ಆಯ್ಕೆಯಲ್ಲಿ ಖರೀದಿ ಲಭ್ಯವಿದೆ.

oneplus 13

ಒನ್‌ಪ್ಲಸ್‌ 13 ಮೊಬೈಲ್‌ನ ಫೀಚರ್ಸ್‌

ಒನ್‌ಪ್ಲಸ್‌ 13 ಮೊಬೈಲ್‌ 120Hz ವರೆಗೆ ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.82 ಇಂಚಿನ QHD+ LTPO 3K ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 4,500 ನಿಟ್ಸ್‌ ಗರಿಷ್ಠ ಬ್ರೈಟ್ನೆಸ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 1080 x 2424 ಪಿಕ್ಸೆಲ್‌ಗಳ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಈ ಮೊಬೈಲ್‌ Snapdragon 8 Elite ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಇದು 24GB RAM ಮತ್ತು 1TB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

ಹಾಗೆಯೇ ಒನ್‌ಪ್ಲಸ್‌ 13 ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದರ ಸೆಕೆಂಡರಿ ಕ್ಯಾಮೆರಾವು 50MP ಹಾಗೂ ತೃತೀಯ ಕ್ಯಾಮೆರಾ ಸಹ 50MP ಸೆನ್ಸಾರ್‌ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್‌ 32MP ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್‌ 6,000 mAh ಬ್ಯಾಟರಿ ಸೌಲಭ್ಯ ಪಡೆದಿರುವ ಜೊತೆಗೆ 100W ವೇಗದ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile