ಇಂದು Nothing Phone 4b ಮೊಬೈಲ್‌ ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ನೋಡಿ

HIGHLIGHTS

ಇಂದು (ಜು.7) ನಥಿಂಗ್ ಮೊಬೈಲ್‌ 4b ಸ್ಮಾರ್ಟ್‌ಫೋನ್‌ ಲಾಂಚ್

ನಥಿಂಗ್ ಫೋನ್‌ 4b ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ

ನಥಿಂಗ್ ಫೋನ್‌ 4b ಫೋನ್‌ ಬ್ಲ್ಯಾಕ್‌, ವೈಟ್‌ ಹಾಗೂ ಪರ್ಪಲ್‌ ಕಲರ್ ಆಯ್ಕೆಯಲ್ಲಿ ಬರಲಿದೆ

ಇಂದು Nothing Phone 4b ಮೊಬೈಲ್‌ ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ನೋಡಿ

Nothing ಮೊಬೈಲ್ ಕಂಪನಿಯು ಭಾರತದಲ್ಲಿ ಹೊಸದಾಗಿ Nothing Phone 4b ಮೊಬೈಲ್‌ ಅನ್ನು ಇಂದು (ಜುಲೈ 7 ರಂದು) ಲಾಂಚ್ ಮಾಡಲು ಸಜ್ಜಾಗಿದೆ. ಈ ಹೊಸ ಸ್ಮಾರ್ಟ್‌ಫೋನ್ ಜೊತೆಗೆ ನಥಿಂಗ್ ಫೋನ್‌ ಆರ್‌ಸಿಬಿ ಎಡಿಷನ್‌ ಮೊಬೈಲ್ ಪರಿಚಯಿಸುವುದು ಪಕ್ಕಾ ಎನ್ನಲಾಗಿದೆ. ಅಂದಹಾಗೆ ಎಂಟ್ರಿ ಕೊಡಲಿರುವ ಈ ಮೊಬೈಲ್‌ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ದೃಢಪಡಿಸಲಾಗಿದೆ. ಇನ್ನು ಮುಂಬರುವ ಈ ಹೊಸ ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹಾಗೂ ಬ್ಲ್ಯಾಕ್‌, ವೈಟ್‌ ಹಾಗೂ ಪರ್ಪಲ್‌ ಕಲರ್‌ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹಾಗಾದರೆ ನಥಿಂಗ್ ಫೋನ್‌ 4b ಮೊಬೈಲ್‌ನ ಲಾಂಚ್‌ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : AI ದುರುಪಯೋಗ ತಡೆಗೆ ಹೊಸ ಕಾನೂನು ತರಲು ಕೇಂದ್ರ ಸರ್ಕಾರ ಸಜ್ಜು!

ಇಂದು Nothing Phone 4b ಲಾಂಚ್

ನಥಿಂಗ್ ಮೊಬೈಲ್‌ ಕಂಪನಿಯ ಹೊಸ ನಥಿಂಗ್ ಫೋನ್‌ 4b ಮೊಬೈಲ್‌ ಇಂದು (ಜುಲೈ 7 ರಂದು) ಮಧ್ಯಾಹ್ನ 3:30 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಕಾರ್ಯಕ್ರಮದಲ್ಲಿಯೇ ನಥಿಂಗ್ ಕಂಪನಿಯು ಭಾರತೀಯ ಮಾರುಕಟ್ಟೆಗಳಲ್ಲಿ ಆರ್‌ಸಿಬಿ ಆವೃತ್ತಿಯ ನಥಿಂಗ್‌ ಫೋನ್ 4b ಮೊಬೈಲ್‌ ಅನ್ನು ಸಹ ಲಾಂಚ್ ಮಾಡಲಿದೆ. ಇನ್ನು ನಥಿಂಗ್ ಫೋನ್‌ 4b ಸ್ಮಾರ್ಟ್‌ಫೋನ್‌ ಬ್ಲ್ಯಾಕ್‌, ವೈಟ್‌ ಹಾಗೂ ಪರ್ಪಲ್‌ ಕಲರ್‌ನಲ್ಲಿ ಲಭ್ಯವಾಗಲಿದೆ. ಇನ್ನು ಆರ್‌ಸಿಬಿ ಎಡಿಷನ್‌ ರೆಡ್‌ ಶೆಡ್‌ ಕಲರ್‌ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಫೋನಿನ ಬೆಲೆಯ ಬಗ್ಗೆ ಸಂಸ್ಥೆಯು ಇನ್ನು ಅಧಿಕೃತ ಮಾಹಿತಿ ಹೊರಹಾಕಿಲ್ಲ.

Nothing Phone 4b

ನಥಿಂಗ್ ಫೋನ್‌ 4b ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಸದ್ಯಕ್ಕೆ ನಥಿಂಗ್ ಫೋನ್‌ 4b ಹಾಗೂ ನಥಿಂಗ್ ಫೋನ್‌ 4b ಆರ್‌ಸಿಬಿ ಎಡಿಷನ್‌ ಫೋನಿನ ಸಂಪೂರ್ಣ ಫೀಚರ್ಸ್‌ಗಳ ಕುರಿತು ಕಂಪನಿಯು ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಅದಾಗ್ಯೂ, ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ ಎಂಬುದು ಈಗಾಗಲೇ ದೃಢಪಟ್ಟಿದೆ. ಇದರ ಜೊತೆಗೆ ಈ ಫೋನ್‌ನಲ್ಲಿ ಸುಧಾರಿತ AI (ಕೃತಕ ಬುದ್ಧಿಮತ್ತೆ) ಆಧಾರಿತ ಆಯ್ಕೆಗಳ ಬೆಂಬಲ ಪಡೆದಿರಲಿದೆ ಎಂದು ಹೇಳಲಾಗಿದೆ. ಈ ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರುವ ನಿರೀಕ್ಷೆಗಳು ಇವೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile