ಯುಕೆ ಮೂಲದ Nothing ಮೊಬೈಲ್ ಕಂಪನಿಯು ಮುಂದಿನ ವಾರ ಭಾರತದಲ್ಲಿ Nothing Phone 4a ಸರಣಿಯನ್ನು ಬಿಡುಗಡೆ ಮಾಡಲು ನಥಿಂಗ್ ಸಜ್ಜಾಗಿದೆ. ಅಂದಹಾಗೆ ಈ ಮುಂಬರುವ ಹೊಸ ಈ ನಥಿಂಗ್ ಫೋನ್ 4a ಸರಣಿಯು ನಥಿಂಗ್ ಫೋನ್ 4a ಹಾಗೂ ನಥಿಂಗ್ ಫೋನ್ 4a ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ನಥಿಂಗ್ ಫೋನ್ 4a ಸರಣಿಯ ಬಗ್ಗೆ ಲೀಕ್ ಅಪ್‌ಡೇಟ್ ಮಾಹಿತಿಗಳು ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಬರಲಿರುವ ಈ ಮೊಬೈಲ್‌ಗಳು Snapdragon ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು AMOLED ಡಿಸ್‌ಪ್ಲೇ ಸಪೋರ್ಟ್ ಸಹ ಪಡೆದಿರಲಿವೆ. ಹಾಗಾದರೆ ನಥಿಂಗ್ ಫೋನ್ 4a ಸರಣಿಯು ಬಿಡುಗಡೆ ಯಾವಾಗ, ನಿರೀಕ್ಷಿತ ಫೀಚರ್ಸ್ ಏನು ಎಂಬುದನ್ನು ಮುಂದೆ ನೋಡೋಣ.
Also Read : Airtel 979 ರೂ.ಗಳ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಜೊತೆಗೆ OTT ಸೌಲಭ್ಯ
Nothing ಮೊಬೈಲ್ ಕಂಪನಿಯ ಮುಂಬರುವ ನೂತನ Nothing Phone 4a ಸರಣಿಯು ಮುಂದಿನ ತಿಂಗಳು ಗ್ಲೋಬಲ್ ಮಾರುಕಟ್ಟೆಗೆ ಅನಾವರಣ ಆಗಲಿದೆ. ಈ ಸರಣಿಯು ಇದೇ ಮಾರ್ಚ್ 5 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಅಂದಹಾಗೆ ನಥಿಂಗ್ ಫೋನ್ 4a ಸರಣಿಯು ಪಿಂಕ್, ವೈಟ್ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳು ಇವೆ. ಇನ್ನು ಕಂಪನಿಯು ಈ ಸರಣಿಯ ಫೋನ್‌ಗಳ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ.
ಮುಂಬರುವ ನಥಿಂಗ್ ಫೋನ್ 4a ಮತ್ತು ನಥಿಂಗ್ ಫೋನ್ 4a ಪ್ರೊ ಈ ಎರಡು ಮಾಡೆಲ್‌ಗಳು 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, 120Hz ರಿಫ್ರೆಶ್ ರೇಟ್ ಸೌಲಭ್ಯದಲ್ಲಿ ಕೆಲಸ ಮಾಡಲಿವೆ ಎನ್ನಲಾಗಿದೆ. ಹಾಗೆಯೇ ಈ ಎರಡು ಫೋನ್‌ಗಳು 3000 nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದಿರುವ ನಿರೀಕ್ಷೆಗಳು ಇವೆ. ಅಲ್ಲದೇ ನಥಿಂಗ್ ಫೋನ್ 4a ಪ್ರೊ ಮೊಬೈಲ್ Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ ಹಾಗೂ 12GB RAM + 256GB ವರೆಗೂ ಸ್ಟೋರೇಜ್ ಆಯ್ಕೆಗಳನ್ನು ಪಡೆದಿರುವ ನಿರೀಕ್ಷೆಗಳು ಇವೆ.
ನಥಿಂಗ್ ಫೋನ್ 4a ಮೊಬೈಲ್ 5,080 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಬೆಂಬಲಿಸಬಹುದು ಹಾಗೂ ಅದಕ್ಕೆ ಪೂರಕವಾಗಿ 50W ಫಾಸ್ಟ್ ಚಾರ್ಜಿಂಗ್ ಆಯ್ಕೆ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಇನ್ನು ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಸೌಲಭ್ಯ ಅನ್ನು ಪಡೆಯಬಹುದು ಎನ್ನಲಾಗಿದೆ. ನಥಿಂಗ್ ಮೊಬೈಲ್ ಕಂಪನಿಯ ಬರಲಿರುವ ಈ ನೂತನ ಫೋನ್ ಆಂಡ್ರಾಯ್ಡ್ 16 ಅನ್ನು ಆಧರಿಸಿದ ನಥಿಂಗ್ OS 4 ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ.