Nothing Phone 4a Pro Specs to Price in India here what to expect
UK ಮೂಲದ Nothing ಮೊಬೈಲ್ ಕಂಪನಿಯು Nothing Phone 3a ಸರಣಿಯ ಉತ್ತರಾಧಿಕಾರಿಯಾಗಿ Nothing Phone 4a ಸರಣಿಯನ್ನು ಪರಿಚಯಿಸಲು ತಯಾರಿ ನಡೆಸಿರುವುದು ನಿಮಗೆ ತಿಳಿದ ಸಂಗತಿ ಆಗಿದೆ. ಆದರೆ Nothing Phone 4a ಸರಣಿಯ ಬಗ್ಗೆ ಇದೀಗ ಕೆಲವು ಹೊಸ ಲೀಕ್ ಅಪ್‌ಡೇಟ್ ಮಾಹಿತಿಗಳು ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಅಂದಹಾಗೆ ಈ ಮುಂಬರುವ ಹೊಸ ಸರಣಿಯು ಎರಡು ಮಾಡೆಲ್‌ಗಳ ಆಯ್ಕೆ ಒಳಗೊಂಡಿರಲಿದ್ದು, ಅವುಗಳು ಕ್ರಮವಾಗಿ Nothing Phone 4a ಮತ್ತು Nothing Phone 4a Pro ಮಾಡೆಲ್ ಆಗಿವೆ. ಬರಲಿರುವ ಈ ಮೊಬೈಲ್‌ಗಳು Snapdragon ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು AMOLED ಡಿಸ್‌ಪ್ಲೇ ಸಪೋರ್ಟ್ ಸಹ ಪಡೆದಿರಲಿವೆ. ಇನ್ನುಳಿದಂತೆ ಈ ಸರಣಿಯ ಬಿಡುಗಡೆ ಯಾವಾಗ, ನಿರೀಕ್ಷಿತ ಫೀಚರ್ಸ್ ಏನು ಎಂಬುದನ್ನು ಮುಂದೆ ನೋಡೋಣ.
Also Read : ಸದ್ಯದಲ್ಲೇ ಬರ್ತಿದೆ Infinix Note 60 ಸ್ಮಾರ್ಟ್‌ಫೋನ್ ಸರಣಿ! ಬಿಡುಗಡೆ ಮುನ್ನವೇ ಫೀಚರ್ಸ್ ಲೀಕ್
Nothing ಮೊಬೈಲ್ ಕಂಪನಿಯ ಮುಂಬರುವ ನೂತನ Nothing Phone 4a ಸರಣಿಯು ಮುಂದಿನ ತಿಂಗಳು ಗ್ಲೋಬಲ್ ಮಾರುಕಟ್ಟೆಗೆ ಅನಾವರಣ ಆಗಲಿದೆ ಎನ್ನಲಾಗಿದೆ. ಲೀಕ್ ಮಾಹಿತಿ ಪ್ರಕಾರ ಮಾರ್ಚ್ 5 ರಂದು ಅನಾವರಣ ಆಗುವ ಸಾಧ್ಯತೆಗಳು ಅಧಿಕ ಇವೆ ಎಂದು ಹೇಳಲಾಗಿದೆ. ಆದರೆ ನಥಿಂಗ್ ಮೊಬೈಲ್ ಕಂಪನಿಯು ಇನ್ನೂ ಅಧಿಕೃತವಾಗಿ ಲಾಂಚ್ ದಿನಾಂಕ ಬಹಿರಂಗಪಡಿಸಿಲ್ಲ. ಸಂಸ್ಥೆಯು ಮಧ್ಯಮ ಶ್ರೇಣಿಯ ವಿಭಾಗದ ಫೋನ್‌ಗಳತ್ತ ಹೆಚ್ಚು ಗಮನ ನೀಡಲಿದೆ.
ಮುಂಬರುವ Nothing Phone 4a ಮತ್ತು Nothing Phone 4a Pro ಈ ಎರಡು ಮಾಡೆಲ್ 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದ್ದು ಇದು 120Hz ರಿಫ್ರೆಶ್ ರೇಟ್ ನಲ್ಲಿಕೆಲಸ ಮಾಡಲಿವೆ ಎನ್ನಲಾಗಿದೆ. ಹಾಗೆಯೇ ಈ ಮಾಡೆಲ್‌ಗಳು 3000 nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆಯಬಹುದು. ಅಲ್ಲದೇ Nothing Phone 4a Pro ಮೊಬೈಲ್ Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಗಳು ಇವೆ ಹಾಗೂ 12GB RAM + 256GB ವರೆಗೂ ಸ್ಟೋರೇಜ್ ಆಯ್ಕೆಗಳನ್ನು ಪಡೆದಿರುವ ಸಾಧ್ಯತೆಗಳು ಇವೆ.
ಹಾಗೆಯೇ ಈ ಮೊಬೈಲ್ 5,080 mAh ಬ್ಯಾಟರಿ ಬ್ಯಾಕ್‌ಅಪ್ ಬಲವನ್ನು ಬೆಂಬಲಿಸಬಹುದು ಹಾಗೂ ಅದಕ್ಕೆ ಪೂರಕವಾಗಿ 50W ಫಾಸ್ಟ್ ಚಾರ್ಜಿಂಗ್ ಆಯ್ಕೆ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಇನ್ನು ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಸೌಲಭ್ಯ ಅನ್ನು ಪಡೆಯಬಹುದು ಎನ್ನಲಾಗಿದೆ. ನಥಿಂಗ್ ಮೊಬೈಲ್ ಕಂಪನಿಯ ಬರಲಿರುವ ಈ ನೂತನ ಫೋನ್ ಆಂಡ್ರಾಯ್ಡ್ 16 ಅನ್ನು ಆಧರಿಸಿದ ನಥಿಂಗ್ OS 4 ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ.