ನಾಳೆ Nothing Phone 4a ಸ್ಮಾರ್ಟ್‌ಫೋನ್ ಸರಣಿ ಸೇಲ್ ಪ್ರಾರಂಭ! ಫೀಚರ್ಸ್ ಹೀಗಿವೆ
ನಾಳೆ ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಫೋನ್ 4a ಸರಣಿಯ ಸೇಲ್ ಶುರು
ಈ ಸರಣಿಯ ಫೋನ್‌ಗಳು ಸ್ನಾಪ್‌ಡ್ರಾಗನ್ 7 ಸರಣಿಯ ಪ್ರೊಸೆಸರ್ ಹೊಂದಿವೆ
ನಥಿಂಗ್ ಫೋನ್ 4a ಸರಣಿಯ ಫೋನ್‌ಗಳು 5,400mAh ಬ್ಯಾಟರಿ ಪವರ್ ಹೊಂದಿದೆ
Nothing ಮೊಬೈಲ್ ಕಂಪನಿಯು ಇತ್ತೀಚಿಗೆ ಲಾಂಚ್ ಮಾಡಿರುವ Nothing Phone 4a ಸ್ಮಾರ್ಟ್‌ಫೋನ್ ಸರಣಿ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನಿನ ಮಾರಾಟ ನಾಳೆ (ಮಾರ್ಚ್ 13 ರಿಂದ) ಪ್ರಾರಂಭವಾಗಲಿದೆ. ಅಂದಹಾಗೆ ಈ ಸರಣಿಯು ನಥಿಂಗ್ ಫೋನ್ 4a ಮತ್ತು ನಥಿಂಗ್ ಫೋನ್ 4a ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಮೊಬೈಲ್‌ಗಳು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಸರಣಿಯ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿವೆ. ಹಾಗೆಯೇ ನಥಿಂಗ್ ಫೋನ್ 4a ನಾಲ್ಕು ಕಲರ್ ಆಯ್ಕೆ ಒಳಗೊಂಡಿದೆ. ಅದೇ ರೀತಿ ನಥಿಂಗ್ ಫೋನ್ 4a ಪ್ರೊ ಮಾಡೆಲ್ ಮೂರು ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ನಥಿಂಗ್ ಫೋನ್ 4a ಮತ್ತು ನಥಿಂಗ್ ಫೋನ್ 4a ಪ್ರೊ ಮೊಬೈಲ್‌ಗಳ ಸೇಲ್, ಬೆಲೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Amazon EPL 2026 ಸೇಲ್: OnePlus 15R ಈಗ ಸಖತ್ ಡಿಸ್ಕೌಂಟ್‌ನಲ್ಲಿ ಲಭ್ಯ
Nothing Phone 4a ಸರಣಿಯ ಸೇಲ್ ಅಪ್‌ಡೇಟ್ಸ್ ಇಲ್ಲಿದೆ
Nothing ಕಂಪನಿಯ ನಥಿಂಗ್ ಫೋನ್ 4a ಮತ್ತು ನಥಿಂಗ್ ಫೋನ್ 4a ಪ್ರೊ ಮೊಬೈಲ್‌ಗಳು ನಾಳೆ (ಮಾರ್ಚ್ 13 ರಿಂದ) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಮಧ್ಯಾಹ್ನ 12 ಗಂಟೆಗೆ ಮಾರಾಟ ಶುರು ಮಾಡಲಿವೆ. ನಥಿಂಗ್ ಫೋನ್ 4a ಮೊಬೈಲ್‌ನ 8GB RAM ಮತ್ತು 128GB ವೇರಿಯಂಟ್ ಬೆಲೆ 31,999ರೂ.ಗಳು ಆಗಿದೆ. ಹಾಗೆಯೇ 8GB+256GB ವೇರಿಯಂಟ್ ಬೆಲೆ 34,999 ರೂಗಳು ಆಗಿದೆ. ಇನ್ನು 12GB+256GB RAM ವೇರಿಯಂಟ್ ಬೆಲೆ 37,999 ರೂಗಳು ಆಗಿದೆ. ಇನ್ನು ಈ ಫೋನ್ ಬ್ಲ್ಯಾಕ್, ಬ್ಲೂ, ಪಿಂಕ್ ಮತ್ತು ವೈಟ್ ಕಲರ್ ಆಯ್ಕೆಯಲ್ಲಿ ಲಭ್ಯ. ಹಾಗೆಯೇ ನಥಿಂಗ್ ಫೋನ್ 4a ಪ್ರೊ ಮೊಬೈಲ್‌ನ 8GB+128GB ವೇರಿಯಂಟ್ ಬೆಲೆಯು 39,999 ರೂಗಳು ಆಗಿದೆ. ಹಾಗೆಯೇ 8GB+256GB ವೇರಿಯಂಟ್ ಬೆಲೆಯು 42,999 ರೂಗಳು ಆಗಿದೆ. ಇನ್ನು ಈ ಮೊಬೈಲ್ ಬ್ಲ್ಯಾಕ್, ಪಿಂಕ್ ಮತ್ತು ವೈಟ್ ಕಲರ್‌ನಲ್ಲಿ ಲಭ್ಯವಾಗಲಿದೆ.

ನಥಿಂಗ್ ಫೋನ್ 4a ಫೀಚರ್ಸ್
ನಥಿಂಗ್ ಫೋನ್ 4a ಫೋನ್ 6.78 ಇಂಚಿನ LTPS ಫ್ಲೆಕ್ಸಿಬಲ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್ ಜೊತೆಗೆ 4,500 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಇನ್ನು ಈ ಫೋನ್ Snapdragon 7s Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಹೊಂದಿದೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಈ ಮೊಬೈಲ್ 5,400mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ 50W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.
ಹಾಗೆಯೇ ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು OIS ಬೆಂಬಲಿತ 50MP ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50MP ಪೆರಿಸ್ಕೋಪ್ ಸೆನ್ಸಾರ್ ಹಾಗೂ 8MP ಅಲ್ಟ್ರಾವೈಡ್ ಸೆನ್ಸಾರ್ ಸಪೋರ್ಟ್ ಪಡೆದಿವೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ನಥಿಂಗ್ ಫೋನ್ 4a ಪ್ರೊ ಫೀಚರ್ಸ್
ನಥಿಂಗ್ ಫೋನ್ 4a ಪ್ರೊ ಮೊಬೈಲ್ 6.83 ಇಂಚಿನ 1.5K AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ 144Hz ವರೆಗೆ ರಿಫ್ರೆಶ್ ರೇಟ್ ಜೊತೆಗೆ 5,000 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಇನ್ನು ಈ ಫೋನ್ ಕ್ವಾಲ್ಕಾಮ್‌ನ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7 Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಹೊಂದಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಈ ಫೋನ್ 5,400mAh ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ 50W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.
ಹಾಗೆಯೇ ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು Sony LYT-700c ಬೆಂಬಲಿತ 50MP ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50MP ಟೆಲಿಫೋಟೋ ಸೆನ್ಸಾರ್ ಹಾಗೂ 8MP ಅಲ್ಟ್ರಾವೈಡ್ ಸೆನ್ಸಾರ್ ಸಪೋರ್ಟ್ ಪಡೆದಿವೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile