Nothing Phone 3a Series First Sale
Nothing Phone (3a) Series First Sale: ಜನಪ್ರಿಯ ನಥಿಂಗ್ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ Nothing Phone (3a) Series ಫೋನ್ಗಳನ್ನು ಇಂದು ಅಧಿಕೃತವಾಗಿ ಮೊದಲ ಮಾರಾಟಕ್ಕೆ ಬರಲಿದೆ. ಕಂಪನಿ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್‌ನಲ್ಲಿ Nothing Phone 3a ಮತ್ತು Nothing Phone 3a Pro ಫೋನ್ಗಳನ್ನು ಇಂದು ಮಧ್ಯಾಹ್ನ 12:00 ಗಂಟೆಯಿಂದ ಶುರುವಾಗಲಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಮೊದಲ ಮಾರಾಟದ ಆಫರ್ ಬೆಲೆ ಡಿಸ್ಕೌಂಟ್ ಮತ್ತು ಖರೀದಿಸುವ ಮುಂಚೆ ತಿಳಿಯಲೇಬೇಕಾದ ಫೀಚರ್ ಮತ್ತು ವಿಶೇಷತೆ ಎಲ್ಲವನ್ನು ಈ ಕೆಳಗೆ ಪರಿಶೀಲಿಸಬಹುದು.
ಭಾರತದಲ್ಲಿ Nothing Phone (3a) Series ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಗ್ರಾಹಕರು ಎಲ್ಲಾ ಪ್ರಮುಖ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿಕೊಂಡು ನಥಿಂಗ್ ಫೋನ್ 3a ಸರಣಿಯ ಎಲ್ಲಾ ಕಾನ್ಸಿಗರೇಶನ್‌ಗಳ ಮೇಲೆ 2,000 ರೂ.ಗಳ ತಕ್ಷಣದ ರಿಯಾಯಿತಿಯನ್ನು ಪಡೆಯಬಹುದು. Nothing Phone 3a ಅನ್ನು ವಿವಿಧ ದೇಶಗಳಲ್ಲಿ ನೀಡಲಾಗುತ್ತದೆ. ಮೊದಲ ದಿನದ ಮಾರಾಟದ ಸಮಯದಲ್ಲಿ ಹಳೆಯ ಸ್ಮಾರ್ಟ್ಫೋನ್ ವಿನಿಮಯ ಮಾಡಿಕೊಳ್ಳುವಾಗ ನಥಿಂಗ್ ಮತ್ತು ಪ್ಲಿಪ್‌ಕಾರ್ಟ್ ಹೆಚ್ಚುವರಿಯಾಗಿ 3,000 ರೂಗಳ ರಿಯಾಯಿತಿಯನ್ನು ಸಹ ಪಡೆಯಬಹುದು.
Also Read: 43 ಇಂಚಿನ Bezel Less ಸ್ಮಾರ್ಟ್ ಟಿವಿ ಕೇವಲ ₹12,999 ರೂಗಳಿಗೆ ಮಾರಾಟ! ಆಫರ್ ಬೆಲೆ ಮತ್ತು ಫೀಚರ್ಗಳೇನು?
Nothing Phone 3a ಸ್ಮಾರ್ಟ್ಫೋನ್ 6.77 ಇಂಚಿನ ಫ್ಲೆಕ್ಸಿಬಲ್ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಮತ್ತು 480Hz ಟಚ್ ಸಂಪ್ಲೆಯಿಂಗ್ ಜೊತೆಗೆ FHD 1080 x 2392 ಸ್ಕ್ರೀನ್ ರೆಸಲ್ಯೂಷನ್ ಹೊಂದಿದೆ. ಟ್ರಿಪಲ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ 50MP ಪ್ರೈಮರಿ ಕ್ಯಾಮೆರಾ ಮತ್ತೊಂದು 50MP ಟೆಲಿಫೋಟೋ ಲೆನ್ಸ್ ಕೊನೆಯದಾಗಿ 8MP ಸೋನಿ ಲೆನ್ಸ್ ಅಲ್ಟ್ರಾ ವೈಡ್ ಸೆನ್ಸರ್ ಹೊಂದಿದೆ. ಸ್ಮಾರ್ಟ್ಫೋನ್ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಸೆನ್ಸರ್ ನೀಡಲಾಗಿದೆ.
Nothing Phone 3a ಸ್ಮಾರ್ಟ್ಫೋನ್ Qualcomm Snapdragon 7s Gen 3 ಚಿಪ್‌ಸೆಟ್‌ನೊಂದಿಗೆ Nothing OS 3.1 ಆಧಾರಿತ ಆಂಡ್ರಾಯ್ಡ್ 15 ಮೂಲಕ ನಡೆಯುತ್ತದೆ. ಅಲ್ಲದೆ ಫೋನ್ 3 ವರ್ಷದ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷದ ಸೆಕ್ಯುಟಿರಿ ಅಪ್ಡೇಟ್ ನೀಡುತ್ತದೆ. ಫೋನ್ ಪವರ್ ನೀಡಲು 5000mAh ಬ್ಯಾಟರಿಯನ್ನು ಬರೋಬ್ಬರಿ 50W ಫಾಸ್ಟ್ ಚಾರ್ಜರ್ ಜೊತೆಗೆ ಬಿಡುಗಡೆಗೊಳಿಸಿದೆ. ಅದೇ Nothing Phone 3a Pro ಫೋನ್ ಫೀಚರ್ ವಿಶೇಷತೆಗಳು ಸಹ ಎಲ್ಲ ಇದೆ ರೀತಿ ಹೊಂದಿದ್ದು ಕೇವಲ ಲುಕ್ ಡಿಸೈನ್ ಜೊತೆಗೆ ಸೆಲ್ಫಿಗಾಗಿ 50MP ಹೊಂದಿರುವುದಷ್ಟೇ ವ್ಯತ್ಯಾಸವಾಗಿದೆ.