Nothing Phone 3a Pro ಸ್ಮಾರ್ಟ್ಫೋನ್ ಬಿಡುಗಡೆ! ಆಫರ್ ಬೆಲೆ ಎಷ್ಟು ಮತ್ತು ಟಾಪ್ 5 ಫೀಚರ್ಗಳೇನು ತಿಳಿಯಿರಿ!

Updated on 04-Mar-2025
HIGHLIGHTS

Nothing Phone 3a Pro ಆರಂಭಿಕ 128GB ಸ್ಟೋರೇಜ್ ಕೇವಲ 27,999 ರೂಗಳಿಗೆ ಬಿಡುಗಡೆಯಾಗಿದೆ.

ನಥಿಂಗ್ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ತನ್ನ ಲೇಟೆಸ್ಟ್ Nothing Phone 3a Pro Series ಅನಾವರಣಗೊಂಡಿದೆ.

Nothing Phone 3a Pro ಫೋನ್ Qualcomm Snapdragon, eSIM, ಮತ್ತು 50MP ಸೇಲ್ಫಿ ಕ್ಯಾಮೆರಾದೊಂದಿಗೆ ಪರಿಚಯ.

Nothing Phone 3a Pro officially launched: ನಥಿಂಗ್ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ಭಾರತದಲ್ಲಿ ತನ್ನ ಲೇಟೆಸ್ಟ್ Nothing Phone 3a Pro Series ಬಿಡುಗಡೆಗೊಳಿಸಿದೆ. ಪ್ರಸ್ತುತ ಈ ಲೇಖನದಲ್ಲಿ ನಾನು ನಿಮಗೆ Nothing Phone 3a Pro ಬಗ್ಗೆ ವಿವರವಾಗಿ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇನೆ. Nothing Phone 3a Pro ಸ್ಮಾರ್ಟ್ಫೋನ್ ಅನೇಕ ಹೊಸ ಫೀಚರ್ಗಳೊಂದಿಗೆ ಅತ್ಯುತ್ತಮ ಬೆಲೆಯೊಂದಿಗೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.

ಇದರ ವಿಶೇಷತೆಗಳನ್ನು ನೋಡುವುದಾದರೆ ಫೋನ್ Qualcomm Snapdragon, eSIM, ಮತ್ತು 50MP ಸೇಲ್ಫಿ ಕ್ಯಾಮೆರಾದೊಂದಿಗೆ ಹತ್ತಾರು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬಿಡುಗಡೆಯಾಗಿದೆ. ಹಾಗಾದ್ರೆ Nothing Phone 3a Pro ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಟಾಪ್ 5 ಫೀಚರ್ಗಳೇನು ಎಲ್ಲವನ್ನು ಇಲ್ಲಿ ತಿಳಿಯಬಹುದು.

Also Read: Nothing Phone 3a ಅಧಿಕೃತವಾಗಿ ಬಿಡುಗಡೆ! ಆಫರ್ ಬೆಲೆ ಎಷ್ಟು ಮತ್ತು ಟಾಪ್ 5 ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ

Nothing Phone 3a Pro ಡಿಸ್ಪ್ಲೇ ವಿವರಗಳು:

ಈ ಸ್ಮಾರ್ಟ್ಫೋನ್ ಫೀಚರ್ಗಳಲ್ಲಿ ಮೊದಲನೇಯದಾಗಿ ಇದರ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ Nothing Phone 3a Pro ಸ್ಮಾರ್ಟ್ಫೋನ್ ಪಾಂಡಾ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಷನ್‌ನೊಂದಿಗೆ 6.77 ಇಂಚಿನ ಫ್ಲೆಕ್ಸಿಬಲ್ AMOLED ಡಿಸ್ಪ್ಲೇಯನ್ನು ಹೊಂದಿದೆ. Nothing Phone 3a Pro ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ ಮತ್ತು 480Hz ಟಚ್ ಸಂಪ್ಲೆಯಿಂಗ್ ಜೊತೆಗೆ FHD 1080 x 2392 ಸ್ಕ್ರೀನ್ ರೆಸಲ್ಯೂಷನ್ ಹೊಂದಿದೆ.

Nothing Phone 3a Pro officially launched

Nothing Phone 3a Pro ಕ್ಯಾಮೆರಾ ವಿವರಗಳು:

ಈ Nothing Phone 3a Pro ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ 50MP ಪ್ರೈಮರಿ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸರ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸರ್ (EIS) ಜೊತೆಗೆ f/1.88 ಅಪರ್ಚರ್ ಸ್ಯಾಮ್‍ಸಂಗ್ ಲೆನ್ಸ್ ಹೊಂದಿದೆ. ಮತ್ತೊಂದು 50MP ಸ್ಯಾಮ್‍ಸಂಗ್ ಲೆನ್ಸ್ 60x ಅಲ್ಟ್ರಾ ಜೂಮ್ f/2.0 ಅಪರ್ಚರ್ ಜೊತೆಗೆ ಟೆಲಿಫೋಟೋ ಲೆನ್ಸ್ ಹೊಂದಿದೆ. ಮತ್ತೊಂದು 8MP ಸೋನಿ ಲೆನ್ಸ್ ಅಲ್ಟ್ರಾ ವೈಡ್ ಸೆನ್ಸರ್ f/2.2 ಅಪರ್ಚರ್ ಜೊತೆಗೆ ಬರುತ್ತದೆ. ಕೊನೆಯದಾಗಿ ಇದರ ಮುಂಭಾಗದಲ್ಲಿ 50MP ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ನೀಡಲಾಗಿದೆ.

Nothing Phone 3a Pro ಹಾರ್ಡ್ವೇರ್ ವಿವರಗಳು:

ಈ ಸ್ಮಾರ್ಟ್ಫೋನ್ ಸುಮಾರು 20GB ವರೆಗಿನ ವರ್ಚುಯಲ್ RAM ಜೊತೆಗೆ ಬರುವ ಅತ್ಯುತ್ತಮ ಸ್ಮಾರ್ಟ್ಫೋನ್ ಆಗಿದೆ. ಈ ಸ್ಮಾರ್ಟ್ಫೋನ್ ಒಟ್ಟು ಮೂರು 8GB + 128GB, 8GB + 256GB ಮತ್ತು 12GB + 256GB ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಆದರೆ ಭಾರತಕ್ಕೆ ಕೇವಲ 8GB RAM ಮತ್ತು 256GB ಸ್ಟೋರೇಜ್ ಮಾತ್ರ ಲಭ್ಯವಾಗಲಿದೆ. ಅಲ್ಲದೆ ಸ್ಮಾರ್ಟ್ಫೋನ್ 3 ವರ್ಷದ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷದ ಸೆಕ್ಯುಟಿರಿ ಅಪ್ಡೇಟ್ ನೀಡುತ್ತದೆ.

Nothing Phone 3a Pro ಸ್ಮಾರ್ಟ್ಫೋನ್ Qualcomm Snapdragon 7s Gen 3 ಚಿಪ್‌ಸೆಟ್‌ನೊಂದಿಗೆ Nothing OS 3.1 ಆಧಾರಿತ ಆಂಡ್ರಾಯ್ಡ್ 15 ಮೂಲಕ ನಡೆಯುತ್ತದೆ. ಅಲ್ಲದೆ ಹೆಚ್ಚುವರಿಯಾಗಿ Nothing Phone 3a Pro ಹೊಸ eSIM ಫೀಚರ್ ಹೊಂದಿದೆ ಆದರೆ ಭಾರತೀಯರಿಗೆ ಇದರ ಪ್ರಯೋಜನವನ್ನು ಪಡೆಯಬಹುದು. ಅಲ್ಲದೆ 2 HD ಆಡಿಯೋ ಮೈಕ್ ಮತ್ತು 2 ಸ್ಟೀರಿಯೋ ಸ್ಪೀಕರ್ ಹೊಂದಿದೆ.

Nothing Phone 3a Pro officially launched

Nothing Phone 3a Pro ಬ್ಯಾಟರಿ ಮತ್ತು ಕನೆಕ್ಟಿವಿಟಿ ವಿವರಗಳು:

ಇದರ ಬ್ಯಾಟರಿ ಮತ್ತು ಕನೆಕ್ಟಿವಿಟಿ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ನಿಮಗೆ NFC with Google Pay support, Bluetooth 5.4, Wi-Fi 6, GPS, Glyph Interface Sensors, In-display Fingerprint Sensor, Front Ambient Light Sensor, Accelerometer, Electronic Compass, Gyroscope, Proximity Sensor ಜೊತೆಗೆ ಫೋನ್ ಪವರ್ ನೀಡಲು 5000mAh ಬ್ಯಾಟರಿಯನ್ನು ಬರೋಬ್ಬರಿ 50W ಫಾಸ್ಟ್ ಚಾರ್ಜರ್ ಜೊತೆಗೆ ಬಿಡುಗಡೆಗೊಳಿಸಿದೆ.

Nothing Phone 3a Pro ಆಫರ್ ಬೆಲೆ ಮತ್ತು ಲಭ್ಯತೆಯ ವಿವರಗಳು:

ಕೊನೆಯದಾಗಿ Nothing Phone 3a Pro ಸ್ಮಾರ್ಟ್ಫೋನ್ ಭಾರತದಲ್ಲಿ ಕೇವಲ ಮೂರು ರೂಪಾಂತರದಲ್ಲಿ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 27,999 ರೂಗಳಿಗೆ ಮತ್ತು ಇದರ ಕ್ರಮವಾಗಿ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 29,999 ರೂಗಳಿಗೆ ಮತ್ತು ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 31,999 ರೂಗಳಿಗೆ ಬಿಡುಗಡೆಯಾಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ 15ನೇ ಮಾರ್ಚ 2025 ರಿಂದ ಫ್ಲಿಪ್ಕಾರ್ಟ್ ಮೂಲಕ ಮೊದಲ ಮಾರಾಟಕ್ಕೆ ಬರಲಿದೆ.

ಅಲ್ಲದೆ HDFC Bank, IDFC First Bank ಮತ್ತು OneCard ಬಳಸಿಕೊಂಡು ಬಳಕೆದಾರರು 2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಅಷ್ಟೇಯಲ್ಲದೆ ಒಂದು ದಿನದ ವಿನಿಮಯ ಆಫರ್ ಅಡಿಯಲ್ಲಿ ಸುಮಾರು 3000 ರೂಗಳ ವರೆಗೆ ಡಿಸ್ಕೌಂಟ್ ಸಹ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :