Nothing Phone 3a series
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲೇ ಅತಿ ವಿಶೇಷವಾಗಿ ವಿಶಿಷ್ಟ ಮಾದರಿಯ ಸ್ಮಾರ್ಟ್ಫೋನ್ಗಳನ್ನು ತಯಾರಿಸುವ ಸ್ಮಾರ್ಟ್ಫೋನ್ ಬ್ರಾಂಡ್ ನಥಿಂಗ್ (Nothing) ಈ ವರ್ಷ ತನ್ನ ಮುಂಬರಲಿರುವ ಹೊಸ Nothing Phone 3a Pro ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಲು ಪೂರ್ತಿಯಾಗಿ ಸಿದ್ದವಾಗಿದ್ದು ಇದರ ಬಗ್ಗೆ ಈಗಾಗಲೇ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಸಹ ಮಾಡಿದೆ.
ಈ ನಥಿಂಗ್ ಫೋನ್ ಲೇಟೆಸ್ಟ್ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಅತಿ ಕಡಿಮೆ ಕೈಗೆಟಕುವ ಬೆಲೆಗೆ ಪರಿಚಯಿಸುವ ನಿರೀಕ್ಷೆಗಳಿವೆ. ಹಾಗಾದ್ರೆ ಈ Nothing Phone 3a Pro ನಿರೀಕ್ಷಿತ ಬೆಲೆ, ಫಸ್ಟ್ ಲುಕ್ ಮತ್ತು ಬಿಡುಗಡೆ ಡೇಟ್‌ನೊಂದಿಗೆ ಫೀಚರ್ಗಳೇನು ಈವರೆಗೆ ನಮಗೆ ತಿಳಿದಿರುವ ಎಲ್ಲವನ್ನು ನೀವೂ ತಿಳಿಯಿರಿ.
ಈ ಮುಂಬರಲಿರುವ ನಥಿಂಗ್ ಸ್ಮಾರ್ಟ್ಫೋನ್ ಸ್ವತಃ ಪೋಸ್ಟ್ ಮಾಡಿರುವ ಆಧಾರದ ಮೇರೆಗೆ ಇದೆ 4ನೇ ಮಾರ್ಚ್ 2025 ರಂದು ಮಧ್ಯಾಹ್ನ 3:30 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದರ ಬಗ್ಗೆ ಈಗಾಗಲೇ ಮಾಹಿತಿ ನೀಡಿರುವ ಕಂಪನಿ ಈ ಸರಣಿಯಲ್ಲಿ Nothing Phone 3a ಮತ್ತು Nothing Phone 3a Pro ಎಂಬ ಎರಡು ಹೊಸ 5G ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಿದೆ ಎನ್ನುವುದು ವಿಶೇಷವಾಗಿದೆ. ನಥಿಂಗ್ ಅಧಿಕೃತವಾಗಿಯೇ ಇವುಗಳ ಟೀಸರ್ ಮತ್ತು ಪೋಸ್ಟರ್ ಗಳನ್ನು ಇಂಟರ್ನೆಟ್ ಮೂಲಕ ಹಾರಿಬಿಟ್ಟಿದೆ.
ಅಲ್ಲದೆ ನಥಿಂಗ್ ಸ್ಮಾರ್ಟ್ಫೋನ್ಗಳ ಬ್ರಾಂಡ್ ಅಂಬಾಸಿಡರ್ ಮತ್ತು ಬಾಲಿವುಡ್ ನಟನಾಗಿರುವ ರಣವೀರ್ ಸಿಂಗ್ (Ranveer Singh) ಜೊತೆಗೆ ಫೋಟೋ ಶೂಟ್ ಮಾಡಲಾಗಿದೆ. ಪ್ರಸ್ತುತ ಈ ಮುಂಬರಲಿರುವ Nothing Phone 3a Pro ಸ್ಮಾರ್ಟ್ಫೋನ್ ಬೆಲೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ.
Also Read: ಮುಂಬರಲಿರುವ POCO M7 5G ಸ್ಮಾರ್ಟ್ಫೋನ್ ಲಾಂಚ್ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಆದರೂ Nothing Phone 3a Pro ಸ್ಮಾರ್ಟ್ಫೋನ್ ಹೊಸ ಲುಕ್ ಮತ್ತು ವಿನ್ಯಾಸದೊಂದಿಗೆ ಮತ್ತು ಹರಿದಾಡುತ್ತಿರುವ ವರದಿಗಳ ಪ್ರಕಾರ ಫೋನ್ ಒಟ್ಟು ಎರಡು ರೂಪಣತರಗಳಲ್ಲಿ ಬರಲಿದ್ದು ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ಮೂಲಕ ನಿರೀಕ್ಷಿಸಬಹುದು. ಇದರ ಅನುಸಾರವಾಗಿ ಮತ್ತು ಈಗಾಗಲೇ ಲಭ್ಯವಿರುವ Nothing Phone (2a) Plus ಆಧಾರದ ಮೇರೆಗೆ ಈ ಮುಂಬರಲಿರುವ Nothing Phone 3a Pro ಸ್ಮಾರ್ಟ್ಫೋನ್ ಸುಮಾರು 30,000 ರೂಗಳಿಗೆ ನಿರೀಕ್ಷಿಸಬಹುದು.
ಈ ಮುಂಬರಲಿರುವ Nothing Phone 3a Pro ಸ್ಮಾರ್ಟ್ಫೋನ್ ಹಿಂದಿನ ಮಾದರಿಗಳಲ್ಲಿ ಕಂಡುಬರುವ ಲಂಬ ಕ್ಯಾಮೆರಾ ಮಾಡ್ಯೂಲ್‌ಗಿಂತ ಭಿನ್ನವಾಗಿ Nothing Phone 3a Pro ಸಮತಲ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರಬಹುದು. ಈ ಸ್ಮಾರ್ಟ್‌ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಸೆಟಪ್ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 50MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರಬಹುದು.
ಟೆಲಿಫೋಟೋ ಲೆನ್ಸ್ 3x ಆಪ್ಟಿಕಲ್ ಜೂಮ್ ಮತ್ತು 60x ಹೈಬ್ರಿಡ್ ಜೂಮ್ ಅನ್ನು ಬೆಂಬಲಿಸುತ್ತದೆ ಎಂದು ವದಂತಿಗಳಿವೆ. ಹುಡ್ ಅಡಿಯಲ್ಲಿ Nothing Phone 3a Pro ಫೋನ್ 3a ಪ್ರೊ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್ ಅನ್ನು ಪ್ಯಾಕ್ ಮಾಡುತ್ತದೆ ಎಂದು ವದಂತಿಗಳಿವೆ. ಈ ಪ್ರೊಸೆಸರ್ ಅನ್ನು ಅಡ್ರಿನೊ 810 GPU ಜೊತೆಗೆ ಜೋಡಿಸುವ ನಿರೀಕ್ಷೆಯಿದೆ. ಈ ಸ್ಮಾರ್ಟ್ಫೋನ್ ಸುಮಾರು 5500 mAh ಬ್ಯಾಟರಿಯೊಂದಿಗೆ ನಿರೀಕ್ಷಿಸಲಾಗಿದೆ.