Nothing Phone 3a Lite India launch
ಬ್ರಿಟಿಷ್ ಸ್ಮಾರ್ಟ್‌ಫೋನ್ ಕಂಪನಿಯಿಂದ ಬಂದಿರುವ ಹೊಸ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಆದ Nothing Phone 3a Lite ಅನ್ನು ಅಕ್ಟೋಬರ್‌ನಲ್ಲಿ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಈಗ ಈ ಸ್ಮಾರ್ಟ್ಫೋನ್ ಭಾರತದಲ್ಲೂ ಬಿಡುಗಡೆಗೆ ಸಜ್ಜಾಗಿದೆ. ಇದರ ಬಗ್ಗೆ ಕಂಪನಿ ಸ್ವತಃ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ‘Phone (3a) Lite + Coming soon to India’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಲಾಗಿದೆ. ಈ ಸ್ಮಾರ್ಟ್ಫೋನ್ Dimensity 7300 Pro ಚಿಪ್‌ಸೆಟ್ ಜೊತೆಗೆ 8GB RAM ಅನ್ನು ನೀಡಲಿದೆ. ಈ Nothing Phone 3a Lite ಫೋನ್ ನೋಟಿಫಿಕೇಷನ್‌ಗಳಿಗಾಗಿ ಹೊಸ ‘ಗ್ಲಿಫಿ ಲೈಟ್’ ಸಹ ಅಳವಡಿಸಿದ್ದು ಇದು ಮೂಲ ‘ಗ್ಲಿಫ್ ಇಂಟರ್ಫೇಸ್’ ಅನ್ನು ಬದಲಾಯಿಸುತ್ತದೆ.
Also Read: Mivi ಕಂಪನಿಯ 5.1ch Dolby Audio Soundbar ಈಗ ಸಿಕ್ಕಾಪಟ್ಟೆ ಡಿಸ್ಕೌಂಟ್‌ಗಳೊಂದಿಗೆ ಲಭ್ಯ!
ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿರುವ ನಥಿಂಗ್ ಇಂಡಿಯಾ ಈ ಸ್ಮಾರ್ಟ್ಫೋನ್ ಬಗ್ಗೆ ಒಂದು ಟೀಸರ್ ನೀಡಲಾಗಿದೆ. ಇದರಲ್ಲಿ ಲೈಟ್ನಿಂಗ್ ಯಾವಾಗಲೂ ಏನಾದರೂ ಹೆಚ್ಚಿನದರೊಂದಿಗೆ ಇರುತ್ತದೆ” ಎಂದು ಕಂಪನಿ ಪೋಸ್ಟ್ ಮಾಡಿದೆ. Nothing Phone 3a Lite ಹೆಚ್ಚುವರಿ ಕೊಡುಗೆಗಳೊಂದಿಗೆ ಸಿಗಬಹುದು ಎಂದು ಹೇಳುತ್ತದೆ. ಆದರೆ ಈ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ನ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಕಂಫಾರ್ಮ್ ಮಾಡಿಲ್ಲ ಅದರ ಬದಲಿದೆ ಶೀಘ್ರದಲ್ಲೇ ಬರಲಿದೆ ಎಂದು ಹೇಳಲಾಗಿದೆ. ಈ Nothing Phone 3a Lite ಭಾರತದಲ್ಲಿ ಬ್ಲಾಕ್ ಮತ್ತು ಬಿಳಿ ಎರಡೂ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಎಂದು ಟೀಸರ್ ಚಿತ್ರ ಹೇಳುತ್ತದೆ. ಇದು ಪ್ರಪಂಚದಾದ್ಯಂತ ಬಿಡುಗಡೆಯಾದ ಮಾದರಿಯಂತೆಯೇ ಫೀಚರ್ ಮತ್ತು ಸ್ಪೆಸಿಫಿಕೇಶನ್‌ಗಳೊಂದಿಗೆ ಬರುವ ಸಾಧ್ಯತೆಗಳಿವೆ.
ಈ ಫೋನ್ 6.77 ಇಂಚಿನ ಪೂರ್ಣ-HD+ (1,080 × 2,392 ಪಿಕ್ಸೆಲ್‌ಗಳು) ಫ್ಲೆಕ್ಸಿಬಲ್ AMOLED ಸ್ಕ್ರೀನ್ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 3,000 nits ಗರಿಷ್ಠ HDR ಬ್ರೈಟ್‌ನೆಸ್ (ಹೊಳಪು) ಹೊಂದಿದೆ. ಕ್ಯಾಮೆರಾ ವಿಷಯಕ್ಕೆ ಬಂದರೆ Nothing Phone 3a Lite ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ಹೇಳಿರದ ಮೂರನೇ ಸೆನ್ಸರ್ ಇವೆ.
ಇದು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 16MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಸಹ ನಿರೀಕ್ಷಿಸಬಹುದು. ಈ ಫೋನ್ ಡ್ಯುಯಲ್-ಸಿಮ್ ಜೊತೆಗೆ ಆಂಡ್ರಾಯ್ಡ್ 16 ಆಧಾರಿತ ನಥಿಂಗ್ ಓಎಸ್ 3.5 ನಲ್ಲಿ ಕೆಲಸ ಮಾಡುತ್ತದೆ. Nothing Phone 3a Lite ಸ್ಮಾರ್ಟ್ಫೋನ್ Dimensity 7300 Pro ಚಿಪ್‌ಸೆಟ್ ಜೊತೆಗೆ 8GB RAM ಮತ್ತು 256GB ವರೆಗಿನ ಇನ್‌ಬಿಲ್ಟ್ ಸ್ಟೋರೇಜ್ ಇದೆ. ಈ ಫೋನ್ ಮೈಕ್ರೊ SD ಕಾರ್ಡ್ ಹಾಕಿ 2TB ವರೆಗೆ ಸ್ಟೋರೇಜ್ ಅನ್ನು ಹೆಚ್ಚಿಸಲು ಸಪೋರ್ಟ್ ಮಾಡುತ್ತದೆ.
ಸ್ಮಾರ್ಟ್ಫೋನ್ Wi-Fi 6, ಬ್ಲೂಟೂತ್ 5.3, GPS, GLONASS, BDS, ಗೆಲಿಲಿಯೋ ಮತ್ತು QZSS ಇವೆ. ಈ ಫೋನ್ ದೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಹೊಂದಿದೆ. ಜೊತೆಗೆ ಮುಂಭಾಗ ಮತ್ತು ಹಿಂದಿನ ಪ್ಯಾನೆಲ್‌ಗಳಲ್ಲಿ ಪಾಂಡಾ ಗ್ಲಾಸ್ ಪ್ರೊಟೆಕ್ಷನ್ ನಿರೀಕ್ಷಿಸಬಹುದು. ಇದು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 5W ವೈರ್ಡ್ ರಿವರ್ಸ್ ಚಾರ್ಜಿಂಗ್ ಜೊತೆಗೆ 5,000mAh ಬ್ಯಾಟರಿಯನ್ನು ನಿರೀಕ್ಷಿಸಬಹುದು.