Motorola Signature India Launch
ಮುಂಬರುವ ಮೊಟೊರೊಲಾ ಸಿಗ್ನೇಚರ್ ಸ್ಮಾರ್ಟ್‌ಫೋನ್‌ನಿಂದ ಹೊಸ ಸಂಚಲನ ಮೂಡಿಸಲು ಭಾರತದಲ್ಲಿ ಮೊಟೊರೊಲಾ ಸಜ್ಜಾಗಿದೆ. ತನ್ನ ಅತ್ಯಂತ ಪ್ರೀಮಿಯಂ ಫೋನ್ ಆದ ಮೊಟೊರೊಲಾ ಸಿಗ್ನೇಚರ್ (Motorola Signature) ಸರಣಿಯನ್ನು ಪರಿಚಯಿಸಲು ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಪ್ರತ್ಯೇಕ ಪೇಜ್ ಲೈವ್ ಆಗಿದ್ದು ಇದು ಕೇವಲ ಒಂದೇ ಒಂದು ಸ್ಮಾರ್ಟ್ಫೋನ್ ಒಂದೇ ಮಾದರಿಯಲ್ಲಿ ಬರುವ ನಿರೀಕ್ಷೆ. ಇದೊಂದು ಐಷಾರಾಮಿ ಲೈಫ್‌ಸ್ಟೈಲ್ ಅನುಭವವನ್ನು ನೀಡಲಿದೆ ಎಂದು ಕಂಪನಿ ಹೇಳಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮೋಟೋರೋಲಾದ ಅಧಿಕೃತ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ಚಿಲ್ಲರೆ ಪಾಲುದಾರರ ಮೂಲಕ ಖರೀದಿಗೆ ಲಭ್ಯವಿರುತ್ತದೆ.
Also Read: Instagram Reels Update: ಈಗ ಕನ್ನಡ ಸೇರಿ 5 ಭಾಷೆಗಳಲ್ಲಿ ಲಿಪ್ ಸಿಂಕ್ ಮತ್ತು ವಾಯ್ಸ್ ಅನುವಾದ ಫೀಚರ್ ಪರಿಚಯ!
ಮೊಟೊರೊಲಾ ಸಿಗ್ನೇಚರ್ ಬಿಡುಗಡೆ ದಿನಾಂಕ ಖಚಿತ ಬಿಡುಗಡೆಯ ದಿನಾಂಕ ದೃಢೀಕರಿಸಲಾಗಿದೆ. ಮೊಟೊರೊಲಾ ಸಂಸ್ಥೆಯು ಈ ಬಹುನಿರೀಕ್ಷಿತ ಫೋನ್ ಅನ್ನು ಭಾರತದಲ್ಲಿ 23ನೇ ಜನವರಿ 2026 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು. ಈ ಫೋನ್ ವಿಶೇಷವಾಗಿ ಸಿಗ್ನೇಚರ್ ಕ್ಲಬ್ ಎಂಬ ವಿಶಿಷ್ಟ ಸೇವೆಗೆ ಬರಲಿದೆ. ಈ ಫೋನ್ ಖರೀದಿಸುವ ಗ್ರಾಹಕರು ಅಂದರೆ 24/7 ಹೆಲ್ಪ್‌ಲೈನ್ ಸೌಲಭ್ಯವಿದ್ದು ಹೋಟೆಲ್ ಬುಕಿಂಗ್, ಟ್ರಾವೆಲ್ ಪ್ಲಾನ್ ಮತ್ತು ವೆಲ್ನೆಸ್ ಸೇವೆಗಳಿಗೆ ಸಹಾಯ ಸಿಗಲಿದೆ. ಆರಂಭಿಕ ಕೊಡುಗೆ ಗ್ರಾಹಕರಿಗೆ ಸುಮಾರು 6,000 ರೂಪಾಯಿ ಬೆಲೆಯ ಸರ್ವಿಸ್ ಬುಕಿಂಗ್ ಸೌಲಭ್ಯ ಉಚಿತವಾಗಿ ಸಿಗುವ ಸಾಧ್ಯತೆಯಿದೆ.
ಸುಂದರ ವಿನ್ಯಾಸ ಮತ್ತು ಡಿಸ್‌ಪ್ಲೇ ಈ ಫೋನ್ ನೋಡುವುದಕ್ಕೆ ತುಂಬಾ ಸ್ಟೈಲಿಶ್ ಆಗಿದ್ದು ಕೇವಲ 6.99mm ನಷ್ಟು ತೆಳುವಾಗಿದೆ (ಸ್ಲಿಮ್). ಇದರ ತೂಕ ಸುಮಾರು 186 ಗ್ರಾಂ ಇರಲಿದೆ. ಕೈಯಲ್ಲಿ ಹಿಡಿಯಲು ತುಂಬಾ ಕಂಫರ್ಟ್ ಆಗಿರುತ್ತದೆ. ಇದರಲ್ಲಿ 6.8 ಇಂಚಿನ ದೊಡ್ಡ ಅಮೋಲೆಡ್ (AMOLED) ಡಿಸ್‌ಪ್ಲೇ ನೀಡಲಾಗುತ್ತದೆ. ಅತಿ ವೇಗದ ಅಂದರೆ 165Hz ರಿಫ್ರೆಶ್ ರೇಟ್ ಮತ್ತು ದಾಖಲೆ ಮಟ್ಟದ 6,200 ನಿಟ್ಸ್ ಬ್ರೈಟ್‌ನೆಸ್ ಸೂಚಕ ಬಿಸಿಲಿನಲ್ಲೂ ಸ್ಕ್ರೀನ್ ತುಂಬಾ ಸ್ಪಷ್ಟವಾಗಿ ಕಾಣುತ್ತದೆ ಕಾಣಿಸಿಕೊಳ್ಳುತ್ತದೆ. ಇದು ಪ್ಯಾಂಟೋನ್ (Pantone) ಕಲರ್ ಫಿನಿಶ್‌ನಲ್ಲಿ ಲಭ್ಯವಿರಲಿದೆ.
ಬಲಿಷ್ಠ ಪ್ರೊಸೆಸರ್ ಮತ್ತು ಪರ್ಫಾರ್ಮೆನ್ಸ್ ವೇಗದ ಕೆಲಸಕ್ಕಾಗಿ ಈ ಫೋನ್‌ನಲ್ಲಿ ಕ್ವಾಲ್ಕಾಮ್ ಕಂಪನಿಯು ಹೊಸದಾದ ಸ್ನಾಪ್‌ಡ್ರಾಗನ್ 8 ಜನ್ 5 ಚಿಪ್‌ಸೆಟ್ ಬಳಸಲಾಗಿದೆ. ಇದು ಭಾರಿ ಗೇಮಿಂಗ್ ಮತ್ತು ಮಲ್ಟಿ-ಟಾಸ್ಕಿಂಗ್ ಮಾಡಲು ಸಹಕಾರಿ. 16GB ವರೆಗೆ RAM ಮತ್ತು 1TB ವರೆಗೆ ಸ್ಟೋರೇಜ್ ಆಯ್ಕೆ ಇರುತ್ತದೆ. ಫೋನ್ ಬಿಸಿಯಾಗದಂತೆ ತಡೆಯಲು ‘ಆರ್ಕ್ಟಿಕ್ ಮೆಶ್’ ಕೂಲಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ವಿಶೇಷವೆಂದರೆ ಈ ಫೋನ್ ಮುಂದಿನ 7 ವರ್ಷಗಳವರೆಗೆ ಆಂಡ್ರಾಯ್ಡ್ ಅಪ್‌ಡೇಟ್‌ಗಳನ್ನು ಪಡೆಯಲಿದೆ ಎಂದು ಕಂಪನಿ ಭರವಸೆ ನೀಡಿದೆ.
ಅದ್ಭುತ ಕ್ಯಾಮೆರಾ ಮತ್ತು ಬ್ಯಾಟರಿ ಇದೆ ಫೋಟೋಗ್ರಾಫಿ ಇಷ್ಟಪಡುವವರಿಗಾಗಿ ಇದರಲ್ಲಿ ಮೂರು 50MP ಕ್ಯಾಮೆರಾಗಳ ಸೆಟಪ್. ಮುಖ್ಯ ಕ್ಯಾಮೆರಾ 50MP Sony LYTIA ಸೆನ್ಸರ್ ಹೊಂದಿದ್ದು ಇದರಲ್ಲಿ 8K ವಿಡಿಯೋ ರೆಕಾರ್ಡ್ ಮಾಡಬಹುದು. ಇದರ ಜೊತೆಗೆ 50MP ಅಲ್ಟ್ರಾ-ವೈಡ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ನೀಡಲಾಗಿದೆ. ಸೆಲ್ಫಿಗಾಗಿಯೂ 50MP ಕ್ಯಾಮೆರಾ ಮುಂಭಾಗದಲ್ಲಿದೆ. ಇನ್ನು ವಿಷಯಕ್ಕೆ ಬಂದರೆ 5,200mAh ಬ್ಯಾಟರಿ ಇದೆ ಇದನ್ನು ಚಾರ್ಜ್ ಮಾಡಲು 90W ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿದೆ.
ಮುಂಬರುವ ಮೊಟೊರೊಲಾ ಸಿಗ್ನೇಚರ್ ಸ್ಮಾರ್ಟ್‌ಫೋನ್ ನಿರೀಕ್ಷಿತ ಬೆಲೆ ನೋಡುವುದಾದರೆ ಈ ಫೋನ್‌ನ ಅಧಿಕೃತ ಬೆಲೆ 23ನೇ ಜನವರಿ 2026 ರಂದು ತಿಳಿಯಲಿದೆ. ಆದರೆ ಮೂಲಗಳ ಪ್ರಕಾರ ಇದರ ಆರಂಭಿಕ ಬೆಲೆ ಸುಮಾರು ₹65,000 ರಿಂದ ₹70,000 ಇರಬಹುದು. ಹೈ-ಎಂಡ್ ಮಾಡೆಲ್ (16GB/1TB) ಬೆಲೆ ಸುಮಾರು ₹80,000 ದಾಟುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಐಫೋನ್ ಮತ್ತು ಸ್ಯಾಮ್‌ಸಂಗ್ ಫೋನ್‌ಗಳಿಗೆ ಟಕ್ಕರ್ ನೀಡಿ ಮೊಟೊರೊಲಾ ಈ ಬಾರಿ ಒಂದು ಬಲಿಷ್ಠ ‘ಸಿಗ್ನೇಚರ್’ ಫೋನ್ ಹೊತ್ತು ತರುವ ನಿರೀಕ್ಷೆಗಳಿವೆ.