Motorola razr 60 Ultra on First Sale
ಪ್ರಸ್ತುತ ಅಮೆಜಾನ್ ಮೂಲಕ ನಿಮಗೊಂದು ಪ್ರೀಮಿಯಂ ಮತ್ತು ಲೇಟೆಸ್ಟ್ ಅಡ್ವಾನ್ಸ್ ಫೀಚರ್ಗಳನ್ನು ಹೊಂದಿರುವ ಹೊಸ 5G ಪವರ್ಫುಲ್ ಫೀಚರ್ ಲೋಡೆಡ್ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಇದು ನಿಮ್ಮ ಜನಪ್ರಿಯ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. Motorola razr 60 Ultra ಸ್ಮಾರ್ಟ್ಫೋನ್ ಇಂದು ಮೊದಲ ಮಾರಾಟದಲ್ಲಿ ಲಭ್ಯವಿದೆ. ಪ್ರಸ್ತುತ ಅಮೆಜಾನ್ ಮೂಲಕ 99,999 ರೂಗಳಿಗೆ ಪಟ್ಟಿ ಮಾಡಲಾಗಿದೆ ಆದರೆ ಮೊದಲ ಮಾರಾಟದಲ್ಲಿ ಬರೋಬ್ಬರಿ ₹10,500 ರೂಗಳ ಡಿಸ್ಕೌಂಟ್‍ನೊಂದಿಗೆ ಲಭ್ಯವಿದೆ. ಇದರ ಮೇಲೆ ಲಭ್ಯವಿರುವ ಆಫರ್ ಬೆಲೆ, ಫೀಚರ್ ಮತ್ತು ವಿಶೇಷತೆಗಳ ಆಧಾರದ ಮೇಲೆ ಹೋಲಿಸಿ ಯಾವ ಫೀಚರ್ ಬೆಸ್ಟ್ ಕಮೆಂಟ್ ಮಾಡಿ ತಿಳಿಸಬಹುದು.
ಮೋಟೊರೋಲದ ಈ ಲೇಟೆಸ್ಟ್ ಫ್ಲಿಪ್ 5G ಸ್ಮಾರ್ಟ್ಫೋನ್ ಇಂದು ಅಮೆಜಾನ್ ಮೂಲಕ ಮೊದಲ ಮಾರಾಟಕ್ಕೆ ಬಂದಿದ್ದು ಅರಂಭ್ದಲ್ಲೇ ₹10,500 ರೂಗಳ ತ್ವರಿತ ಡಿಸ್ಕೌಂಟ್ ನೀಡುತ್ತಿದೆ. ಇದನ್ನು ಪಡೆಯಲು HDFC, Axis, Bank Of Baroda ಸೇರಿ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಈ ಡಿಸ್ಕೌಂಟ್ ಪಡೆಯಬಹುದು. ಪ್ರಸ್ತುತ ಈ ಫೋನ್ ಕೇವಲ ಒಂದೇ ಒಂದು ಮಾದರಿಯಲ್ಲಿ 16GB RAM ಮತ್ತು 512GB ಸ್ಟೋರೇಜ್ ಜೊತೆಗೆ ಈಗಾಗಲೇ ಮೇಲೆ ತಿಳಿಸಿರುವಂತೆ ₹99,999 ರೂಗಳಿಗೆ ಬಿಡುಗಡೆಗೊಳಿಸಿದ್ದು ಇದರ ಮೇಲೆ 10,500 ರೂಗಳ ಡಿಸ್ಕೌಂಟ್ ನಂತರ ಸುಮಾರು ₹89,499 ರೂಗಳಿಗೆ ಖರೀದಿಸಬಹುದು.
Moto Razr 60 Ultra ಸ್ಮಾರ್ಟ್ಫೋನ್ 6.96 ಇಂಚಿನ pOLED Foldable AMOLED ಡಿಸ್ಪ್ಲೇಯನ್ನು ಹೊಂದಿದ್ದು 2992 x 1224 (HD+) ರೆಸಲ್ಯೂಶನ್ ಹೊಂದಿದೆ. ಹೆಚ್ಚುವರಿಯಾಗಿ ಫೋನ್ 165Hz ರಿಫ್ರೇಶ್ ರೇಟ್ ಸಪೋರ್ಟ್ ಮಾಡುತ್ತದೆ. Moto Razr 60 Ultra ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಶೂಟರ್ ಮತ್ತು 50MP ಅಲ್ಟ್ರಾ ವೈಡ್ ಸೆನ್ಸರ್ ಜೊತೆಗೆ ಬರುತ್ತದೆ. ಇದರ ಕ್ರಮವಾಗಿ ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ: New Passport: ನಿಮಗೊಂದು ಹೊಸ ಪಾಸ್‌ಪೋರ್ಟ್ ಬೇಕಿದ್ದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ!
Moto Razr 60 Ultra ಸ್ಮಾರ್ಟ್ಫೋನ್ ಸಹ ಅದೇ Qualcomm Snapdragon 8 Elite ಪ್ರೊಸೆಸರ್‌ನೊಂದಿಗೆ ಆರಂಭಿಕ 16GB RAM ಆನ್‌ಬೋರ್ಡ್ ಮೆಮೊರಿಯೊಂದಿಗೆ ಮತ್ತು 512GB ಸ್ಟೋರೇಜ್ ಸ್ಟೋರೇಜ್ ಜೊತೆಗೆ ಈ ಫೋನ್ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ. Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್ 4700 mAh ಬ್ಯಾಟರಿಯನ್ನು ಹೊಂದಿದ್ದು ಬಾಕ್ಸ್ ಒಳಗೆ 68W ಚಾರ್ಜರ್ ಅನ್ನು ಹೊಂದಿದೆ. ಇದಲ್ಲದೆ ಫೋನ್ 30W ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ 5W ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.