Motorola G96 5G Price Cut new
ಮೊಟೊರೊಲಾ ಕಂಪನಿಯು Motorola G96 5G ಫೋನ್ ಬಿಡುಗಡೆ ಮಾಡುವ ಮೂಲಕ ಮೊಬೈಲ್ ಹೊಸ ಸಂಚಲನ ಮೂಡಿಸಿದೆ. ಅತ್ಯಂತ ದುಬಾರಿ ಫೋನ್‌ಗಳಲ್ಲಿ ಮಾತ್ರ ಇರುವಂತಹ ಫೀಚರ್‌ಗಳನ್ನು ಇದು ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ನೀಡುತ್ತಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್ನಲ್ಲಿ (Flipkart) ಬ್ಯಾಂಕ್ ಆಫರ್‌ಗಳ ಜೊತೆಗೆ ಈ ಫೋನ್ ಪ್ರಸ್ತುತ ಆರಂಭಿಕ ಮಾದರಿಯನ್ನು 19,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಲಿಮಿಟೆಡ್ ಸಮಯಕ್ಕೆ ಇದನ್ನು ನೀವು ಕೇವಲ ₹15,499 ಆಸುಪಾಸಿನಲ್ಲಿ ಪಡೆಯಬಹುದು. ಈ ಫೋನ್ ನೋಡಲು ತುಂಬಾ ಸ್ಟೈಲಿಶ್ ಆಗಿದ್ದು ಹಿಂಭಾಗದಲ್ಲಿ ವೆಗನ್ ಲೆದರ್ ಫಿನಿಶ್ ಹೊಂದಿದೆ. ಜೊತೆಗೆ ಈ ಫೋನ್ IP68 ರೇಟಿಂಗ್ ಹೊಂದಿರುವುದರಿಂದ ನೀರು ಮತ್ತು ಧೂಳಿನಿಂದ ಸುರಕ್ಷಿತವಾಗಿದೆ.
ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 2500 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ Motorola G96 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಸುಮಾರು 15,499 ರೂಗಳ ವರೆಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು. ಅಲ್ಲದೆ ಮೋಟೋರೋಲ ಸ್ಮಾರ್ಟ್ಫೋನ್ ಮೇಲೆ ಫ್ಲಿಪ್‌ಕಾರ್ಟ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Motorola G96 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2000 ರೂಗಳ ಗ್ಯಾರಂಟಿ ಮತ್ತು ಹೆಚ್ಚುವರಿಯಾಗಿ ಸುಮಮರು ₹18,750 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಈ ಫೋನಿನ ಪ್ರಮುಖ ಆಕರ್ಷಣೆ ಎಂದರೆ Motorola G96 5G ಫೋನ್ 6.67 ಇಂಚಿನ 3D ಕರ್ವ್ಡ್ pOLED ಡಿಸ್ಪ್ಲೇ . ಈ ಡಿಸ್ಪ್ಲೇ ಫೋನಿನ ಅಂಚುಗಳವರೆಗೂ ಹರಡಿಕೊಂಡಿದ್ದು ವಿಡಿಯೋ ನೋಡುವಾಗ ಮತ್ತು ಗೇಮ್ ಆಡುವಾಗ ಅದ್ಭುತ ಅನುಭವ. ಇದು 144Hz ರಿಫ್ರೆಶ್ ರೇಟ್ ಹೊಂದಿದ್ದು ಫೋನ್ ಬಳಸಿದಾಗ ತುಂಬಾ ಸ್ಮೂತ್ ಆಗಿ ಕಾರ್ಯನಿರ್ವಹಿಸುತ್ತದೆ. ಬಿಸಿಲಿನಲ್ಲೂ ಕೂಡ ಸ್ಕ್ರೀನ್ ಸ್ಪಷ್ಟವಾಗಿ ಕಾಣುವಂತೆ ಮಾಡಲು 1,600 ನಿಟ್ಸ್ ಬ್ರೈಟ್‌ನೆಸ್ ನೀಡಲಾಗಿದೆ. ಅಷ್ಟೇ ಅಲ್ಲದೆ ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಅಳವಡಿಸಲಾಗಿದೆ. ವಿಶೇಷವೆಂದರೆ ವಾಟರ್ ಟಚ್ 2.0 ತಂತ್ರಜ್ಞಾನವು ನಿಮ್ಮ ಕೈ ಒದ್ದೆಯಾಗಿದ್ದರೂ ಸಹ ಸರಿಯಾಗಿ ಕೆಲಸ ಮಾಡುತ್ತದೆ.
ಫೋಟೋ ಪ್ರಿಯರಿಗಾಗಿ ಈ ಫೋನ್‌ನಲ್ಲಿ ಉತ್ತಮ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಮುಖ್ಯವಾಗಿ ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಹೊಂದಿದೆ. ಇದು 4K ಹೈ-ರೆಸಲ್ಯೂಶನ್ ವಿಡಿಯೋಗಳನ್ನು ರೆಕಾರ್ಡ್ ಮಾಡಬಲ್ಲದು. ಇನ್ನು ಫೋನಿನ ಹಿಂಭಾಗದಲ್ಲಿ 50MP Sony LYTIA 700C ಮೇನ್ ಕ್ಯಾಮೆರಾ ಇದೆ ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ ಹೊಂದಿದೆ. ನೀವು ಚಲಿಸುವಾಗ ಫೋಟೋ ಅಥವಾ ವಿಡಿಯೋ ತೆಗೆದರೂ ಸಹ ಅದು ಮಂಜಾಗದೆ ತುಂಬಾ ಸ್ಪಷ್ಟವಾಗಿ ಬರುತ್ತದೆ. ಇದರ ಜೊತೆಗೆ ಒಂದು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಕೂಡ ಇದ್ದು ಇದು ವಿಶಾಲವಾದ ದೃಶ್ಯಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ.
ಈ ಫೋನ್‌ನಲ್ಲಿ Qualcomm Snapdragon 7s Gen 2 ಪ್ರೊಸೆಸರ್ ಅನ್ನು ಬಳಸಲಾಗಿದೆ. ಇದು ಫೋನ್ ಹ್ಯಾಂಗ್ ಆಗದಂತೆ ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ 8GB RAM ಇದೆ ಇದನ್ನು RAM ಬೂಸ್ಟ್ ತಂತ್ರಜ್ಞಾನದ ಮೂಲಕ 24GB ವರೆಗೆ ಹೆಚ್ಚಿಸಬಹುದು. ಸ್ಟೋರೇಜ್ ವಿಚಾರಕ್ಕೆ ಬಂದರೆ 128GB ಮತ್ತು 256GB ಆಯ್ಕೆಗಳಿವೆ. ದಿನವಿಡೀ ಫೋನ್ 5500mAh ನ ದೊಡ್ಡ ಬ್ಯಾಟರಿ ಕೊಡುಗೆ. ಇದು ಸತತವಾಗಿ 42 ಗಂಟೆಗಳ ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ. ಫೋನ್ ಚಾರ್ಜ್ ಮಾಡಲು ಬಾಕ್ಸ್‌ನಲ್ಲೇ 33W ಟರ್ಬೋಪವರ್ ಚಾರ್ಜರ್ ಅನ್ನು ನೀಡಲಾಗುತ್ತದೆ.