Motorola G85 5G
ಭಾರತದಲ್ಲಿ ಮೊಟೊರೊಲ (Motorola) ಹೊಸ ವರ್ಷಕ್ಕೂ ಮುಂಚೆ ತನ್ನ ಜನಪ್ರಿಯ Motorola G85 5G ಸ್ಮಾರ್ಟ್ ಫೋನ್ ಬಿಡುಗಡೆಯ ಬೆಲೆಯನ್ನು ಕಡಿತಗೊಳಿಸಿದೆ. ಈ ಸ್ಮಾರ್ಟ್ ಫೋನ್ Qualcomm Snapdragon 6s Gen 3 ಜೊತೆಗೆ ಮೂರು ವೆಜಿಟೇರಿಯನ್ ಲೆದರ್ ಫಿನಿಶ್ ಡಿಸೈನಿಂಗ್ಗಳಲ್ಲಿ ಫೋನ್ ಲಭ್ಯವಿದೆ. 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ Motorola G85 5G ಸ್ಮಾರ್ಟ್ ಫೋನ್ ಸಾಮಾನ್ಯ ಆರಂಭಿಕ ಬೆಲೆ 19,999 ರೂಗಳಾಗಿದ್ದು ಬ್ಯಾಂಕ್ ಆಫರ್ ಸೇರಿಸಿ ಒಟ್ಟು 4000 ರೂಗಳ ಬೆಲೆ ಕಡಿತಗೊಳಿಸಿದೆ. ಈ Motorola G85 5G ಅನ್ನು ಫ್ಲಿಪ್ಕಾರ್ಟ್ ಮೂಲಕ ಅತಿ ಕಡಿಮೆ ಬೆಲೆಗೆ ಖರೀದಿಸಲು ಈ ಕೆಳಗಿನ ಆಫರ್ ಒಮ್ಮೆ ಪರಿಶೀಲಿಸಬಹುದು.
ಮೊಟೊರೊಲ ಈ Motorola G85 5G ಸ್ಮಾರ್ಟ್ ಫೋನ್ಳಲ್ಲಿ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹17,999 ರೂಗಳಿಗೆ ಮತ್ತು ಇದರ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹19,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು HDFC ಮತ್ತು ಆಯ್ದ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯುವ ಮೂಲಕ ಕೇವಲ 15,999 ರೂಗಳಿಗೆ ಈ ಸ್ಮಾರ್ಟ್ ಫೋನ್ ಖರೀದಿಸಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. Motorola G85 5G ಸ್ಮಾರ್ಟ್ ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 12,000 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: Jio 5G Plan: ಪ್ರತಿದಿನ 2GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ಉಚಿತ! ಬೇರೆ ಪ್ರಯೋಜನ ಮತ್ತು ಬೆಲೆ ಎಷ್ಟು?
ಈ ಜನಪ್ರಿಯ Motorola G85 5G ಸ್ಮಾರ್ಟ್ ಫೋನ್ 6.7 ಇಂಚಿನ FHD+ ಪೋಲ್ಡ್ 120Hz ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಈ ಹ್ಯಾಂಡ್‌ಸೆಟ್ OIS ಜೊತೆಗೆ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಬರುತ್ತದೆ ಅದು ಹಿಂಭಾಗದಲ್ಲಿ ಮ್ಯಾಕ್ರೋ ಕ್ಯಾಮೆರಾದಂತೆ ದ್ವಿಗುಣಗೊಳ್ಳುತ್ತದೆ. ಅಲ್ಲದೆ ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ 32MP ಫ್ರಂಟ್ ಕ್ಯಾಮೆರಾ ಇದೆ.
ಈಗಾಗಲೇ ಮೇಲೆ ತಿಳಿಸಿರುವಂತೆ ಈ Motorola G85 5G ಸ್ಮಾರ್ಟ್ ಫೋನ್ ಪವರ್ಫುಲ್ Qualcomm Snapdragon 6s Gen 3 ಚಿಪ್‌ಸೆಟ್ ಜೊತೆಗೆ ಆಂಡ್ರಾಯ್ಡ್ 14 ಆಪರೇಟಿವ್ ಸಿಸ್ಟಮ್ ಔಟ್ ಆಫ್ ದಿ ಬಾಕ್ಸ್ ಬರುತ್ತದೆ. Motorola G85 5G ಸ್ಮಾರ್ಟ್ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಇದೆ. ನಾವು 33W ಟರ್ಬೊ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಪಡೆಯುತ್ತೇವೆ.