ಶೀಘ್ರದಲ್ಲೇ ಭಾರತದಲ್ಲಿ Motorola Edge 70 Pro+ ಬಿಡುಗಡೆ! ಬೊಂಬಾಟ್ ಕ್ಯಾಮೆರಾ
ಸದ್ಯದಲ್ಲೇ ಭಾರತದಲ್ಲಿ ಮೊಟೊರೊಲಾ ಎಡ್ಜ್ 70 ಪ್ರೊ+ ಬಿಡುಗಡೆ
ಮೊಟೊರೊಲಾ ಎಡ್ಜ್ 70 ಪ್ರೊ+ ಫೋನ್ 50MP ಕ್ಯಾಮೆರಾ ರಚನೆ ಪಡೆದಿರಲಿದೆ
ಮೊಟೊದ ಈ ಫೋನ್ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡಿರಲಿದೆ
ಮೊಟೊರೊಲಾ ಕಂಪನಿಯು ಇತ್ತೀಚಿಗೆ ಮೊಟೊರೊಲಾ ಎಡ್ಜ್ 70 ಪ್ರೊ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಅದರ ಮುಂದುವರಿದ ಭಾಗವಾಗಿ ಮೊಟೊ ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ Motorola Edge 70 Pro+ ಅನ್ನು ಪರಿಚಯಿಸಲು ಸಜ್ಜಾಗಿದೆ. ಲೀಕ್ ಮಾಹಿತಿ ಪ್ರಕಾರ ಮುಂಬರುವ ಹೊಸ ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್ ಕಾರ್ಯಕ್ಷಮತೆ, ಕ್ಯಾಮೆರಾ ಅಪ್‌ಗ್ರೇಡ್‌ಗಳು ಮತ್ತು ಪ್ರೀಮಿಯಂ ವಿನ್ಯಾಸದ ಮಿಶ್ರಣದೊಂದಿಗೆ ಲಗ್ಗೆ ಇಡಲಿದೆ. ಇನ್ನು ಈ ಮೊಬೈಲ್ ಟೆಲಿಫೋಟೋ ಲೆನ್ಸ್, ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿರಲಿದೆ ಎನ್ನಲಾಗಿದೆ. ಹಾಗಾದರೆ ಮೊಟೊರೊಲಾ ಎಡ್ಜ್ 70 ಪ್ರೊ+ ಫೋನಿನ ಬಿಡುಗಡೆ ದಿನಾಂಕ, ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : ಸ್ಮಾರ್ಟ್‌ಫೋನಿನಲ್ಲಿ ಡಿಲೀಟ್ ಆದ Photos ಮರಳಿ ಪಡೆಯುವುದು ಸುಲಭ! ಈ ವಿಧಾನ ಉತ್ತಮ
Motorola Edge 70 Pro+ ಲಾಂಚ್ ದಿನಾಂಕ
ಮೊಟೊ ಕಂಪನಿಯ ಮೊಟೊರೊಲಾ ಎಡ್ಜ್ 70 ಪ್ರೊ+ ಸ್ಮಾರ್ಟ್‌ಫೋನ್ ಇದೇ ಮೇ 2026 ರ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಅಧಿಕೃತವಾಗಿ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ, ಮುಂದಿನ ಕೆಲವು ವಾರಗಳಲ್ಲಿ ಲಾಂಚ್ ಡೇಟ್ ಘೋಷಣೆ ಆಗಬಹುದು ಎನ್ನಲಾಗಿದೆ. ಇನ್ನು ಈ ಫೋನ್ ಬೆಲೆಯು ಸುಮಾರು 50,000 ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಮೊಟೊರೊಲಾ ಎಡ್ಜ್ 70 ಪ್ರೊ+ ಫೀಚರ್ಸ್ ಹೀಗಿವೆ
ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್ 6.8 ಇಂಚಿನ ಕ್ವಾಡ್ ಕರ್ವ್ಡ್ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್ 1.5K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್ ಅನ್ನು ಪಡೆದಿರಲಿದೆ. ಇದರೊಂದಿಗೆ ಈ ಫೋನ್ MediaTek Dimensity 8500 ಎಕ್ಸ್‌ಟ್ರೀಮ್ ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ 16GB RAM ಆಯ್ಕೆಯ ವೇರಿಯಂಟ್ ಪಡೆದಿರುವ ನಿರೀಕ್ಷೆ ಇದೆ.
ಹಾಗೆಯೇ ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇರಲಿದ್ದು, ಇನ್ನೊಂದು ಕ್ಯಾಮೆರಾವು 50MP ಅಲ್ಟ್ರಾ ವೈಡ್ ಸೆನ್ಸಾರ್ ಪಡೆದಿರಲಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 90W ವೈರ್ಡ್ ಚಾರ್ಜಿಂಗ್ ಅನ್ನು ಪಡೆದುಕೊಂಡಿರಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile