ಮಾರುಕಟ್ಟೆಗೆ ಬಂದೇ ಬಿಡ್ತು Motorola Edge 70 Max ಸ್ಮಾರ್ಟ್‌ಫೋನ್‌! ಪ್ರೀಮಿಯಂ ಫೀಚರ್ಸ್‌

HIGHLIGHTS

ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಫೋನ್‌ ಆಂಡ್ರಾಯ್ಡ್‌ 16 ಓಎಸ್‌ ಹೊಂದಿದೆ

ಈ ಹೊಸ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸೌಲಭ್ಯ ಪಡೆದುಕೊಂಡಿದೆ

ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಫೋನ್‌ ಸ್ನಾಪ್‌ಡ್ರಾಗನ್ 8 ಜೆನ್ 5 ಪ್ರೊಸೆಸರ್‌ ಒಳಗೊಂಡಿದೆ

ಮಾರುಕಟ್ಟೆಗೆ ಬಂದೇ ಬಿಡ್ತು Motorola Edge 70 Max ಸ್ಮಾರ್ಟ್‌ಫೋನ್‌! ಪ್ರೀಮಿಯಂ ಫೀಚರ್ಸ್‌

ಜನಪ್ರಿಯ ಮೊಟೊರೊಲಾ ಮೊಬೈಲ್‌ ಕಂಪನಿಯು ಹೊಸದಾಗಿ Motorola Edge 70 Max ಮೊಬೈಲ್‌ ಅನ್ನು ಇಂದು (ಜುಲೈ 15 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಲಗ್ಗೆ ಇಟ್ಟಿರುವ ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 5 ಚಿಪ್‌ಸೆಟ್ ಪ್ರೊಸೆಸರ್‌ ಪಡೆದುಕೊಂಡಿದೆ. ಅಲ್ಲದೇ ಈ ಫೋನ್‌ 7,100mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಹಾಗೆಯೇ ಇದು ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಫೋನ್‌ ಪ್ಯಾಂಟೋನ್ ಆಕ್ವಾ ಗ್ರೇ, ಪ್ಯಾಂಟೋನ್ ಡಾರ್ಕ್ ಶ್ಯಾಡೋ ಮತ್ತು ಪ್ಯಾಂಟೋನ್ ಐಸ್ ಮೆಲ್ಟ್ ಕಲರ್‌ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶಿಸಿದೆ. ಹಾಗಾದರೇ ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio ಟೆಲಿಕಾಂನ ಈ ಬಜೆಟ್‌ ಪ್ಲಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಖಚಿತ

Motorola Edge 70 Max ಮೊಬೈಲ್‌ ಬೆಲೆ ಹಾಗೂ ಲಭ್ಯತೆ

ಮೊಟೊ ಕಂಪನಿಯ ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಮೊಬೈಲ್‌ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳದಿದೆ. ಈ ಮೊಬೈಲ್‌ನ 8GB RAM + 256GB ಸ್ಟೋರೇಜ್‌ ವೇರಿಯಂಟ್‌ 54,999 ರೂ.ಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ 12GB + 256GB ಸ್ಟೋರೇಜ್‌ನ ಟಾಪ್‌ ಎಂಡ್‌ ವೇರಿಯಂಟ್‌ 59,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್‌ ಪ್ಯಾಂಟೋನ್ ಆಕ್ವಾ ಗ್ರೇ, ಪ್ಯಾಂಟೋನ್ ಡಾರ್ಕ್ ಶ್ಯಾಡೋ ಮತ್ತು ಪ್ಯಾಂಟೋನ್ ಐಸ್ ಮೆಲ್ಟ್ ಕಲರ್‌ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶಿಸಿದೆ. ಇನ್ನು ಈ ಫೋನ್‌ ಜುಲೈ 20 ರಂದು ಫ್ಲಿಪ್‌ಕಾರ್ಟ್ ಹಾಗೂ ಮೊಟೊರೊಲಾ ಆನ್‌ಲೈನ್‌ ಸ್ಟೋರ್‌ ಮೂಲಕ ಮಾರಾಟಕ್ಕೆ ಬರಲಿದೆ.

Motorola Edge 70 Max
Motorola Edge 70 Max

ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಮೊಬೈಲ್‌ ಫೀಚರ್ಸ್‌

ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಮೊಬೈಲ್‌ 6.8 ಇಂಚಿನ QHD+ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 144Hz ರಿಫ್ರೆಶ್ ರೇಟ್‌ ಜೊತೆಗೆ 7,000 nits ವರೆಗಿನ ಗರಿಷ್ಠ ಬ್ರೈಟ್ನೆಸ್‌ ಅನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 5 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 8GB RAM + 256GB ಹಾಗೂ 12GB + 256GB ವೇರಿಯಂಟ್‌ಗಳ ಆಯ್ಕೆ ಒಳಗೊಂಡಿದೆ. ಹಾಗೆಯೇ ಇದು ಇತ್ತೀಚಿನ ಆಂಡ್ರಾಯ್ಡ್‌ 16 ಆಧಾರಿತ ಹಲೋ UI ನೊಂದಿಗೆ ಕಾರ್ಯನಿರ್ವಹಿಸಲಿದೆ.

ಹಾಗೆಯೇ ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಮೊಬೈಲ್‌ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ LYT-600 ಸೆನ್ಸಾರ್‌ ಅನ್ನು ಹೊಂದಿದ್ದು, ದ್ವಿತೀಯ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಅಲ್ಲದೇ ಇದು 7,100mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 25W ವೈರ್‌ಲೆಸ್‌ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile