ಫ್ಲಿಪ್‌ಕಾರ್ಟ್‌ನಲ್ಲಿ Motorola Edge 70 ಮೊದಲ ಮಾರಾಟ ಇಂದಿನಿಂದ ಶುರು! ಆಫರ್ ಬೆಲೆ ಮತ್ತು ಫೀಚರ್ಗಳೇನು?

Updated on 23-Dec-2025
HIGHLIGHTS

Motorola Edge 70 ಸ್ಮಾರ್ಟ್ಫೋನ್ ಪ್ರೀಮಿಯಂ ಮಧ್ಯಮ ಶ್ರೇಣಿಯ ವಿಭಾಗದ ಅತ್ಯುತ್ತಮ ಆಯ್ಕೆ.

Motorola Edge 70 ಸ್ಮಾರ್ಟ್ಫೋನ್ ನಾಳೆ ಅಂದರೆ 23ನೇ ಡಿಸೆಂಬರ್ 2025 ರಂದು ಮೊದಲ ಮಾರಾಟಕ್ಕೆ ಲಭ್ಯ.

Motorola Edge 70 ಫೋನ್‌ನ 8GB RAM ಮತ್ತು 256GB ಸ್ಟೋರೇಜ್ ವೆರಿಯಂಟ್‌ಗೆ ₹29,999 ಬೆಲೆ ನಿಗದಿಪಡಿಸಲಾಗಿದೆ.

ಪ್ರಸ್ತುತ ಮೊಟೊರೊಲ ಪ್ರಿಯರ ಕಾಯುವಿಕೆ ಮುಗಿದಿದೆ ಯಾಕೆಂದರೆ ಕೇವಲ 5.99 ಮಿಮೀ ದಪ್ಪವಿರುವ ವಿಶ್ವದ ಅತ್ಯಂತ ತೆಳುವಾದ 5G ಸ್ಮಾರ್ಟ್‌ಫೋನ್ ಎಂದು ಮಾರಾಟ ಮಾಡಲಾದ ಈ ಸ್ಮಾರ್ಟ್ಫೋನ್ ಪ್ರೀಮಿಯಂ ಮಧ್ಯಮ ಶ್ರೇಣಿಯ ವಿಭಾಗವನ್ನು ಸವಾಲು ಮಾಡಲು ಸಿದ್ಧವಾಗಿದೆ. ಅಂದರೆ ಸಿಕ್ಕಾಪಟ್ಟೆ ತೆಳುವಾದ 5G ಸ್ಮಾರ್ಟ್‌ಫೋನ್ ಎನಿಸಿಕೊಂಡಿರುವ Motorola Edge 70 5G ಸ್ಮಾರ್ಟ್ಫೋನ್ ನಾಳೆ ಅಂದರೆ 23ನೇ ಡಿಸೆಂಬರ್ 2025 ರಂದು ಭಾರತದಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಲಭ್ಯವಿರುತ್ತದೆ. ಈ ಅದ್ಭುತ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮತ್ತು ಮೊಟೊರೊಲ ಅಧಿಕೃತ ವೆಬ್‌ಸೈಟ್ ಮತ್ತು ನಿಮ್ಮ ಹತ್ತಿರದ ಪ್ರಮುಖ ಮೊಬೈಲ್ ಅಂಗಡಿಗಳಲ್ಲಿ ಸಿಗಲಿದೆ.

Also Read: Christmas Gifts 2025: ಈ ಕ್ರಿಸ್‌ಮಸ್‌ ಆಚರಣೆಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಅತ್ಯುತ್ತಮವಾದ ಗಿಫ್ಟ್ ನೀಡಬಹುದು

Motorola Edge 70 ಬೆಲೆ ಮತ್ತು ಆಫರ್‌ಗಳು

ಪ್ರೀಮಿಯಂ ಫೀಚರ್ಸ್ ಹೊಂದಿರುವ ಈ Motorola Edge 70 ಫೋನ್‌ನ 8GB RAM ಮತ್ತು 256GB ಸ್ಟೋರೇಜ್ ವೆರಿಯಂಟ್‌ಗೆ ₹29,999 ಬೆಲೆ ನಿಗದಿಪಡಿಸಲಾಗಿದೆ. ಆದರೆ ನಾಳೆ ನಡೆಯುವ ಮೊದಲ ಮಾರಾಟದಲ್ಲಿ ಗ್ರಾಹಕರಿಗೆ ಭರ್ಜರಿ ಲಾಭವಿದೆ! ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು (SBI ಮತ್ತು Axis Bank) ಬಳಸಿ ಖರೀದಿಸಿದರೆ ನಿಮಗೆ ₹1,000 ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಅಂದರೆ ಈ ಫೋನ್ ನಿಮಗೆ ಕೇವಲ ₹28,899 ಕ್ಕೆ ಸಿಗುತ್ತದೆ. ಅಷ್ಟೇ ಅಲ್ಲದೆ ಹಳೆಯ ಫೋನ್ ಎಕ್ಸ್‌ಚೇಂಜ್ ಮಾಡಿದರೆ ₹24,450 ವರೆಗೆ ರಿಯಾಯಿತಿ ಮತ್ತು ತಿಂಗಳಿಗೆ ₹5,000 ದಿಂದ ಪ್ರಾರಂಭವಾಗುವ ಸುಲಭ ನೋ-ವೆಚ್ಚ EMI ಸೌಲಭ್ಯ ಕೂಡ ಇದೆ. ನಾಳೆ ಮಧ್ಯಾಹ್ನ 12:00 ಗಂಟೆಗೆ ಈ ಸೇಲ್ ಶುರುವಾಗಲಿದ್ದು ಬೇಗ ಬುಕ್ ಮಾಡಿದರೆ ಒಳ್ಳೆಯದು.

Motorola Edge 70 ಫೀಚರ್ಸ್ ಮತ್ತು ವಿಶೇಷತೆಗಳು

ಈ ಫೋನಿನ ಅತಿ ದೊಡ್ಡ ವಿಶೇಷತೆ ಎಂದರೆ ಇದರ ಡಿಸೈನ್. ಇದು ಕೇವಲ 5.99mm ನಷ್ಟು ತೆಳುವಾಗಿದೆ ಕೈಯಲ್ಲಿ ಹಿಡಿಯಲು ತುಂಬಾ ಲೈಟ್ ವೈಟ್ ಆಗಿದೆ. ಇಷ್ಟು ತೆಳುವಾಗಿದ್ದರೂ 5,000mAh ಬ್ಯಾಟರಿ ನೀಡಲಾಗಿದೆ. ಇದಕ್ಕೆ ಸಾಥ್ ನೀಡಲು 68W ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಕೂಡ ಇದೆ. ಈ ಫೋನ್ ಹೊಸ Snapdragon 7 Gen 4 ಪ್ರೊಸೆಸರ್ ಮೂಲಕ ಕೆಲಸ ಮಾಡಲಿದೆ. ಅಲ್ಲದೆ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಸಕ್ಕತ್ ಸ್ಪೀಡ್ ಮಾಡಲಾಗಿದೆ. ಇದರ ಡಿಸ್‌ಪ್ಲೇ ಕೂಡ ಅದ್ಭುತವಾಗಿದೆ. ಇದು 6.7 ಇಂಚಿನ AMOLED ಸ್ಕ್ರೀನ್ ಮತ್ತು ಬಿಸಿಲಿನಲ್ಲಿ ಸ್ಪಷ್ಟವಾಗಿ ಕಾಣುವಂತೆ 4,500 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ ಮೂರು 50MP ಕ್ಯಾಮೆರಾಗಳಿವೆ ಅಂದರೆ ಮೇನ್ ಕ್ಯಾಮೆರಾ, ಅಲ್ಟ್ರಾ-ವೈಡ್ ಮತ್ತು ಸೆಲ್ಫಿ ಕ್ಯಾಮೆರಾ ಮೂರೂ ತಲಾ 50MP ಆಗಿದ್ದು 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಈ ಫೋನ್ ಆಂಡ್ರಾಯ್ಡ್ 16 ಆಧಾರಿತ Hello UI ನಲ್ಲಿ ಕೆಲಸ ಮಾಡುತ್ತಿದೆ. ಸ್ಲಿಮ್ ಆಗಿದ್ದರೂ ಈ ಫೋನ್ ತುಂಬಾ ಗಟ್ಟಿಮುಟ್ಟಾಗಿದೆ. ಇದು ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP68/IP69 ರೇಟಿಂಗ್ ಹೊಂದಿದೆ. ಇದು ನೋಡಲು ಸ್ಟೈಲಿಶ್ ಆಗಿ ಕಾಣುವ Lily Pad ಮತ್ತು Bronze Green ಬಣ್ಣಗಳಲ್ಲಿ ಸಿಗಲಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :