68W ಟರ್ಬೊಪವರ್ ಚಾರ್ಜಿಂಗ್ ಇರುವ Motorola Edge 70 Fusion ಫೋನ್ ಬೆಲೆಯಲ್ಲಿ ಇಳಿಕೆ!
ಅಮೆಜಾನ್‌ನಲ್ಲಿ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಬಿಗ್ ಡಿಸ್ಕೌಂಟ್‌ನಲ್ಲಿ ಲಭ್ಯ
ಮೊಟೊರೊಲಾ ಎಡ್ಜ್ 70 ಫ್ಯೂಷನ್ ಸ್ಮಾರ್ಟ್‌ಫೋನ್ 32MP ಸೆಲ್ಫಿ ಕ್ಯಾಮೆರಾ ರಚನೆ ಪಡೆದಿದೆ
ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ 7,000mAh ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ
Motorola ಸಂಸ್ಥೆಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ Motorola Edge 70 Fusion ಮೊಬೈಲ್ ಬಿಗ್ ಬ್ಯಾಟರಿ ಹಾಗೂ ಕ್ಯಾಮೆರಾ ಫೀಚರ್ ಮೂಲಕ ಈಗಾಗಲೇ ಗ್ರಾಹಕರ ಮನ ಗೆದ್ದಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಅತ್ಯುತ್ತಮ ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಈ ಮೊಬೈಲ್ ಸ್ನಾಪ್‌ಡ್ರಾಗನ್ 7s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್ 7,000mAh ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದಿದೆ. ಅಲ್ಲದೇ ಈ ಫೋನ್ ಬ್ಲೂ ಸರ್ಫ್, ಕಂಟ್ರಿ ಏರ್ ಮತ್ತು ಸಿಲೂಯೆಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Jio ಟೆಲಿಕಾಂನ 399 ರೂ.ಗಳ ಪ್ಲಾನ್‌ನಲ್ಲಿ ಅಧಿಕ ಡೇಟಾ ಜೊತೆಗೆ ಜಬರ್ದಸ್ತ್ ಓಟಿಟಿ ಪ್ರಯೋಜನ!
Motorola Edge 70 Fusion ಬೆಲೆಯಲ್ಲಿ ಬಿಗ್ ಡಿಸ್ಕೌಂಟ್
ಅತ್ಯುತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್ ಸೇರಿದಂತೆ ಆಕರ್ಷಕ ಫೀಚರ್ಸ್ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿರುವ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಫೋನ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 42,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 26,749 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಫೋನ್ ಬ್ಲೂ ಸರ್ಫ್, ಕಂಟ್ರಿ ಏರ್ ಮತ್ತು ಸಿಲೂಯೆಟ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯ.

ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ ಫೀಚರ್ಸ್
ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ 6.78 ಇಂಚಿನ 1.5K ಕ್ವಾಡ್ ಕರ್ವ್ಡ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 44Hz ರಿಫ್ರೆಶ್ ರೇಟ್ ಜೊತೆಗೆ 5,200 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 7s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 8GB + 256GB ಹಾಗೂ 12GB + 256GB ವೇರಿಯಂಟ್‌ಗಳ ಆಯ್ಕೆಗಳನ್ನು ಒಳಗೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 7000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸಪೋರ್ಟ್ ಜೊತೆಗೆ 68W ಟರ್ಬೊಪವರ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.
ಅದೇ ರೀತಿ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ ಇದರ ಪ್ರಾಥಮಿಕ ಕ್ಯಾಮೆರಾವು 50MP ಸೋನಿ LYT-710 ಸೆನ್ಸಾರ್ ಆಗಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 13MP ಅಲ್ಟ್ರಾ ವೈಡ್ ಕ್ಯಾಮೆರಾ ಅನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಪಡೆದುಕೊಂಡಿದೆ. ಈ ಮೊಬೈಲ್ ಎಲ್ಲಾ ಕ್ಯಾಮೆರಾಗಳಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಹೊಂದಿದೆ. ಇದರೊಂದಿಗೆ ಫೋನ್ ಡಾಲ್ಬಿ ಅಟ್ಮೋಸ್ ಮತ್ತು ಹೈ-ರೆಸ್ ಆಡಿಯೋ ಸಪೋರ್ಟ್ ಜೊತೆಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
