ಟ್ರಿಪಲ್ ಕ್ಯಾಮೆರಾ ಇರುವ Motorola Edge 60 Pro ಮೊಬೈಲ್‌ಗೆ ಈಗ ಭಾರೀ ಡಿಸ್ಕೌಂಟ್!
ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ ಬೆಲೆಯಲ್ಲಿ ಈಗ ಭಾರೀ ಇಳಿಕೆ
ಮೊಟೊರೊಲಾದ ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಆಯ್ಕೆ ಹೊಂದಿದೆ
ಮೊಟೊದ ಈ ಮೊಬೈಲ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ
ದೇಶೀಯ ಮಾರುಕಟ್ಟೆಯಲ್ಲಿ ಮೊಟೊರೊಲಾ ಫೋನ್‌ಗಳಿಗೆ ಬೇಡಿಕೆ ಇದೆ. ಅವುಗಳ ಪೈಕಿ Motorola Edge 60 Pro ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ಸೆಳೆದಿದೆ. ಸದ್ಯ ಈ ಫೋನ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಭರ್ಜರಿ ಬೆಲೆ ಇಳಿಕೆ ಪಡೆದುಕೊಂಡು ಮತ್ತೆ ಗ್ರಾಹಕರನ್ನು ಆಕರ್ಷಿಸಿದೆ. ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಫೋನ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಕಂಪನಿಯ ಈ ಮೊಬೈಲ್ MediaTek Dimensity 8350 ಎಕ್ಸ್‌ಟ್ರಿಮ್ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದಿದೆ. ಇನ್ನು ಈ ಮೊಬೈಲ್ ಆಕರ್ಷಕ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಮೊಟೊರೊಲಾ ಎಡ್ಜ್ 60 ಪ್ರೊ ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : JioHotstar ಚಂದಾದಾರಿಕೆ ಪಡೆದ Airtel ಸಂಸ್ಥೆಯ ಬೆಸ್ಟ್ ಪ್ರೀಪೇಯ್ಡ್ ಪ್ಲಾನ್‌ಗಳು
Motorola Edge 60 Pro ದರದಲ್ಲಿ ಭಾರೀ ಇಳಿಕೆ
ಬಜೆಟ್ ಬೆಲೆಯಲ್ಲಿ ಆಕರ್ಷಕ ಫೀಚರ್ಸ್ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ ಸದ್ಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಬೊಂಬಾಟ್ ಡಿಸ್ಕೌಂಟ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 36,999 ರೂ.ಗಳು ಆಗಿದ್ದು ಆದರೆ ಬ್ಯಾಂಕ್ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 29,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಸ್ಮಾರ್ಟ್‌ಫೋನ್ ಪ್ಯಾಂಟೋನ್ ಡ್ಯಾಜ್ಲಿಂಗ್ ಬ್ಲೂ, ಪ್ಯಾಂಟೋನ್ ಶ್ಯಾಡೋ, ಪ್ಯಾಂಟೋನ್ ಸ್ಪಾರ್ಕ್ಲಿಂಗ್ ಗ್ರೇಪ್ ಮತ್ತು ಪ್ಯಾಂಟೋನ್ ವಾಲ್ನಟ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

ಮೊಟೊರೊಲಾ ಎಡ್ಜ್ 60 ಪ್ರೊ ಫೀಚರ್ಸ್ ಮಾಹಿತಿ
ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ ಡಿಸ್‌ಪ್ಲೇಯು 6.7 ಇಂಚಿನ ಕರ್ವ್ಡ pOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಹೊಂದಿದ್ದು ಜೊತೆಗೆ 4,500 nits ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಇನ್ನು ಈ ಮೊಬೈಲ್ MediaTek Dimensity 8350 ಎಕ್ಸ್‌ಟ್ರಿಮ್ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ 8GB RAM + 256GB ಹಾಗೂ 512GB ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಹಾಗೆಯೇ ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಹಾಗೂ ತೃತೀಯ ಕ್ಯಾಮೆರಾ ಸಹ 10MP ಸೆನ್ಸಾರ್ ಬಲ ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್ 50MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 6,000mAh ಬ್ಯಾಟರಿ ಜೊತೆಗೆ 90W ವೈರ್ಡ್ ಚಾರ್ಜಿಂಗ್ ವ್ಯವಸ್ಥೆ ಪಡೆದಿದೆ. ಅಲ್ಲದೇ 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
