Motorola Edge 60 launch soon In India
Motorola Edge 60 Launch Confirmed: ಮೊಟೊರೊಲಾ ತನ್ನ ಮುಂಬರಲಿರುವ Motorola Edge 60 ಸ್ಮಾರ್ಟ್ಫೋನ್ ಭಾರತದಲ್ಲಿ 10ನೇ ಜೂನ್ 2025 ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ. ಅಲ್ಲದೆ ಕಂಪನಿ ಅಧಿಕೃತವಾಗಿ ಈ ಸ್ಮಾರ್ಟ್ಫೋನ್ ಹೆಸರನ್ನು ದೃಢೀಕರಿಸಲಾಗಿಲ್ಲವಾದರೂ ಇದರ ಡಿಸೈನ್ ಮತ್ತು ಲುಕ್ ಆಧಾರದ ಮೇರೆಗೆ ಇದು Motorola Edge 60 ಎಂದು ಸೂಚಿಸುತ್ತದೆ. ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುವುದನ್ನು ಕಂಫಾರ್ಮ್ ಮಾಡಿದೆ. ಕಂಪನಿ ಇದರ ಪ್ರೈಮರಿ ಕ್ಯಾಮೆರಾವನ್ನು 50MP ನೀಡಿದ್ದು ಡಾರ್ಕ್ ಬಣ್ಣಗಳಲ್ಲಿ ಪರಿಚಯಿಸಲು ಸಜ್ಜಾಗಿದೆ. ಪ್ರಸ್ತುತ ಈ Motorola Edge 60 ಸ್ಮಾರ್ಟ್ಫೋನ್ ಬಗ್ಗೆ ನಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಮುಂಬರಲಿರುವ ಈ ಮೋಟೋರೋಲ 5G ಸ್ಮಾರ್ಟ್ಫೋನ್ ಬಗ್ಗೆ ಅನೇಕ ಟಿಪ್‌ಸ್ಟಾರ್ ಈಗಾಗಲೇ ಪೋಸ್ಟ್ ಮಾಡಿದ್ದಾರೆ. ಮೋಟೋರೋಲ ಕಂಪನಿ ಈ ಬಾರಿ ಮುಖ್ಯವಾಗಿ ಕ್ಯಾಮೆರಾ ವಿಭಾಗವನ್ನು ಗಮನದಲ್ಲಿಟ್ಟುಕೊಂಡು Motorola Edge 60 ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ ಎನ್ನುವುದನ್ನು ಅಧಿಕೃತ ಪೋಸ್ಟ್ ಮೂಲಕ ತಿಳಿಯಬಹುದು. ಅಲ್ಲದೆ ಈ ಮೋಟೋರೋಲ ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಸುಮಾರು 25,000 ರೂಗಳಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Nothing Upcoming Launch: ಮುಂಬರಲಿರುವ Nothing Headphone 1 ಬಿಡುಗಡೆಗೆ ಡೇಟ್ ಕಂಫಾರ್ಮ್ ಆಗಿದೆ!
Motorola Edge 60 ಸ್ಮಾರ್ಟ್ ಫೋನ್ 6.7 ಇಂಚಿನ pOLED ಕ್ವಾಡ್-ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದ್ದು 10-ಬಿಟ್ ಕಲರ್ ಡೆಪ್ತ್ ಹೊಂದಿದೆ. ಬಣ್ಣ ಮತ್ತು ಚರ್ಮದ ಟೋನ್ ನಿಖರತೆಗಾಗಿ ಇದು ಪ್ಯಾಂಟೋನ್ ಮೌಲ್ಯೀಕರಿಸಲ್ಪಟ್ಟಿದೆ. ಉತ್ತಮ ಆಡಿಯೊಗಾಗಿ ಇದು ಡಾಲ್ಬಿ ಅಟ್ಮಾಸ್ ಅನ್ನು ಸಹ ಬೆಂಬಲಿಸುವುದಾಗಿ ನಿರೀಕ್ಷಿಸಲಾಗಿದೆ.
Motorola Edge 60 ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವುದಾಗಿ ನಿರೀಕ್ಷಿಸಲಾಗಿದೆ. ಹಿಂಭಾಗದ ಕ್ಯಾಮೆರಾ ಸೆಟಪ್ 50MP ಸೋನಿ LYTIA 700C ಮುಖ್ಯ ಸಂವೇದಕ, 50MP ಅಲ್ಟ್ರಾ-ವೈಡ್ ಮತ್ತು ಮ್ಯಾಕ್ರೋ ಕ್ಯಾಮೆರಾ, ಮತ್ತು 3x ಆಪ್ಟಿಕಲ್ ಜೂಮ್ ಮತ್ತು 30x ಸೂಪರ್ ಜೂಮ್‌ನೊಂದಿಗೆ 10MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ ಫೋನ್ 50MP ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.
Motorola Edge 60 ಸ್ಮಾರ್ಟ್ ಫೋನ್ IP68 ಮತ್ತು IP69 ನೀರು ಮತ್ತು ಧೂಳು ನಿರೋದಿಗೆ ಬರುತ್ತದೆ. ಕೊನೆಯದಾಗಿ ಇದರ ಬ್ಯಾಟರಿ ಆಯ್ಕೆಗಳು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತವೆ. ಒಂದು ಆವೃತ್ತಿಯು 5500mAh ಬ್ಯಾಟರಿಯೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ.