12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ Motorola Edge 50 Fusion ಮೊದಲ ಮಾರಾಟ ಶುರು!

Updated on 22-May-2024
HIGHLIGHTS

Motorola Edge 50 Fusion ಸ್ಮಾರ್ಟ್ಫೋನ್ ಲೇಟೆಸ್ಟ್ ಮತ್ತು ಹೆಚ್ಚು ಆಕರ್ಷಕ ಕಣ್ಣು ಕುಕ್ಕುವಂತಹ ಡಿಸೈನಿಂಗ್‌ನೊಂದಿಗೆ ಬರುತ್ತದೆ.

Motorola Edge 50 Fusion ಸ್ಮಾರ್ಟ್ಫೋನ್ 12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ pOLED ಡಿಸ್ಪ್ಲೇಯನ್ನು ಹೊಂದಿದೆ.

ಇಂದು 22ನೇ ಮೇ 2024 ರಂದು ಇದರ ಮೊದಲ ಮಾರಾಟ ಶುರುವಾಗಿದ್ದು ಇದರ ಬೆಲೆ ಮತ್ತು ಆಫರ್ಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯಿರಿ.

ಮೊಟೊರೊಲಾ ಭಾರತದಲ್ಲಿ ಕಳೆದ ವಾರ ಅಂದ್ರೆ 16ನೇ ಮೇ 2024 ರಂದು ಅಧಿಕೃತವಾಗಿ ಬಿಡುಗಡೆಯಾದ Motorola Edge 50 Fusion ಸ್ಮಾರ್ಟ್ಫೋನ್ ಇಂದು ತನ್ನ ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಈ Motorola Edge 50 Fusion ಸ್ಮಾರ್ಟ್ಫೋನ್ ಲೇಟೆಸ್ಟ್ ಮತ್ತು ಹೆಚ್ಚು ಆಕರ್ಷಕ ಕಣ್ಣು ಕುಕ್ಕುವಂತಹ ಡಿಸೈನಿಂಗ್‌ನೊಂದಿಗೆ ಬೆಸ್ಟ್ ಫೀಚರ್ಗಳನ್ನು ಅಂದ್ರೆ 12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ pOLED ಡಿಸ್ಪ್ಲೇಯನ್ನು ಈ ಸ್ಮಾರ್ಟ್ಫೋನ್ ಹೊಂದಿದೆ. ಭಾರತದಲ್ಲಿ ಇಂದು 22ನೇ ಮೇ 2024 ರಂದು ಇದರ ಮೊದಲ ಮಾರಾಟ ಶುರುವಾಗಿದ್ದು ಇದರ ಬೆಲೆ ಮತ್ತು ಆಫರ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.

Also Read: Reliance Jio ಈ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳಲ್ಲಿ ಉಚಿತ Netflix, Disney Hotstar ಮತ್ತು Amazon Prime ಲಭ್ಯ!

Motorola Edge 50 Fusion ಮೊದಲ ಮಾರಾಟ ಶುರುವಾಗಿದೆ

ಭಾರತದಲ್ಲಿ ಮೋಟೊರೋಲದ ಈ ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. Motorola Edge 50 Fusion ಬೆಲೆ ಮತ್ತು ಮೊದಲ ಮಾರಾಟದ ಬಗ್ಗೆ ನೋಡುವುದುದಾದರೆ ಮೊದಲಿಗೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹24,999 ರೂಗಳಾಗಿವೆ. ಇದರ ಕ್ರಮವಾಗಿ ಸ್ಮಾರ್ಟ್ಫೋನ್ 12GB LPDDR5 RAM ಜೊತೆಗೆ 256GB UFS 2.2 ಸ್ಟೋರೇಜ್ ಅನ್ನು ಒಳಗೊಂಡಿದೆ. Motorola Edge 50 Fusion ಸ್ಮಾರ್ಟ್ಫೋನ್ ಅನ್ನು ನೀವು ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು. ಇದರೊಂದಿಗೆ ಸ್ಮಾರ್ಟ್ಫೋನ್ ಮೊದಲ ಮಾರಾಟದ ಕೊಡುಗೆಯಾಗಿ ICICI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ EMI ಆಯ್ಕೆಯೊಂದಿಗೆ ಖರೀದಿಸಿದರೆ ತ್ವರಿತ 2000 ರೂಗಳ ಡಿಸ್ಕೌಂಟ್ ಪಡೆಯಬಹುದು.

Motorola Edge 50 Fusion first sale in India, check price and offers 2024 – Digit Kannada

ಮೋಟೊ Edge 50 Fusion ಫೀಚರ್ ಮತ್ತು ವಿಶೇಷಣಗಳೇನು?

ಈ ಲೇಟೆಸ್ಟ್ Motorola Edge 50 Fusion 144Hz ರಿಫ್ರೆಶ್ ರೇಟ್‌ನ 6.7 ಇಂಚಿನ pOLED 3D ಕರ್ವ್ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು 1600 nits ನ ಗರಿಷ್ಠ ಹೊಳಪಿನ ಮಟ್ಟದೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. ಆದರೆ ಇದು ಧೂಳು ಮತ್ತು ನೀರಿನ ವಿರುದ್ಧ ಪ್ರತಿರೋಧಕ್ಕಾಗಿ IP68 ಎಂದು ರೇಟ್ ಮಾಡಲಾಗಿದೆ. ಕ್ಯಾಮೆರಾಕ್ಕಾಗಿ ಸ್ಮಾರ್ಟ್ಫೋನ್ 50MP ಪ್ರೈಮರಿ ಸೆನ್ಸರ್ (Sony LYTIA 700C) ಮತ್ತು ಹಿಂಭಾಗದಲ್ಲಿ 13MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಸೆನ್ಸರ್ ಹೊಂದಿದೆ. ಅಲ್ಲದೆ ಇದರ ಡಿಸ್ಪ್ಲೇಯ ಪಂಚ್-ಹೋಲ್ ವಿನ್ಯಾಸದಲ್ಲಿ ಸ್ಮಾರ್ಟ್ಫೋನ್ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Motorola Edge 50 Fusion first sale in India, check price and offers 2024 – Digit Kannada

ಸ್ಮಾರ್ಟ್ಫೋನ್ Qualcomm Snapdragon 7s Gen 2 ನಿಂದ ಚಾಲಿತವಾಗಿದ್ದು 12GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಇದು 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದು 68W ವೈರ್ಡ್ ಚಾರ್ಜಿಂಗ್‌ನಿಂದ ಬೆಂಬಲಿತವಾಗಿದೆ. Motorola Edge 50 Fusion ಕಂಪನಿಯ ಸ್ವಂತ Hello UI ಲೇಯರ್‌ನೊಂದಿಗೆ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಅನ್ನು ಬೂಟ್ ಮಾಡುತ್ತದೆ. ಸ್ಮಾರ್ಟ್‌ಫೋನ್‌ಗೆ 3 ವರ್ಷಗಳ ಓಎಸ್ ಅಪ್‌ಡೇಟ್ ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಒದಗಿಸುವುದಾಗಿ ಮೊಟೊರೊಲಾ ಹೇಳಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :