Motorola G85 5G Price drop under Rs 15000 on Flipkart sale
Moto G85 5G Price Drop: ಭಾರತದಲ್ಲಿ ನಿಮಗೊಂದು ಫುಲ್ ಲೋಡೆಡ್ ಫೀಚರ್ ಮತ್ತು ಪವರ್ಫುಲ್ ವಿಶೇಷತೆಗಳೊಂದಿಗೆ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಸುಮಾರು 15,000 ರೂಗಳೊಳಗೆ ಹುಡುಕುತ್ತಿದ್ದರೆ ಈ Moto G85 5G ಒಮ್ಮೆ ಪರಿಶೀಲಿಸಬಹುದು. ಈ ಸ್ಮಾರ್ಟ್ಫೋನ್ ಪ್ರಸ್ತುತ ಅಮೆಜಾನ್ ಮೂಲಕ ಪಟ್ಟಿ ಮಾಡಲಾಗಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಕೇವಲ 16,200 ರೂಗಳಿಗೆ ಪಟ್ಟಿ ಮಾಡಲಾಗಿದೆ ಆದರೆ ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಿಮಿಟೆಡ್ ಸಮಯದವರೆಗೆ ಮಾರಾಟವಾಗುತ್ತಿದೆ.
ಪ್ರಸ್ತುತ Moto G85 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಮಾದರಿಯನ್ನು ಅಮೆಜಾನ್ ಮೂಲಕ 16,200 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಆದರೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 2000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ Moto G85 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಸುಮಾರು 14,200 ರೂಗಳ ವರೆಗೆ ಕಡಿಮೆಯಾಗುವ ಸಾಧ್ಯತೆಗಳಿವೆ.
ಅಲ್ಲದೆ Moto G85 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Moto G85 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 14,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಇದನ್ನೂ ಓದಿ: Digital Arrest: ದೆಹಲಿಯ ವ್ಯಕ್ತಿಯನ್ನು ಡಿಜಿಟಲ್ ಬಂಧನಗೊಳಿಸಿ ಪೂರ್ತಿ 25 ಲಕ್ಷ ದೋಚಿ ಸಿಕ್ಕಿಬಿದ್ದ ವಂಚಕರು! ಆಗಿದ್ದೇನು?
Moto G85 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ pOLED ಕರ್ವ್ ಡಿಸ್ಪ್ಲೇ ಅನ್ನು ಹೊಂದಿದೆ. ಇದು 1600nits ಗರಿಷ್ಠ ಹೊಳಪನ್ನು ಹೊಂದಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. Moto G85 5G ಸ್ಮಾರ್ಟ್ಫೋನ್ ಹೊಂದಿರುವ Snapdragon 6s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಜೊತೆಗೆ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ನೊಂದಿಗೆ ಫೋನ್ ಉತ್ತಮವಾದ ಸಾಮಾನ್ಯ ಕಾರ್ಯಕ್ಷಮತೆಯನ್ನು ನೀಡುತ್ತದೆ. Moto G85 5G ಸ್ಮಾರ್ಟ್ಫೋನ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
Moto G85 5G ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ Sony LYT-600 ಸೆನ್ಸರ್ ಹೊಂದಿರುವ ಮೊದಲ Moto G-ಸರಣಿ ಸ್ಮಾರ್ಟ್‌ಫೋನ್ ಆಗಿದೆ. ಇದು 50MP ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಹಿಂಭಾಗದ ಡ್ಯುಯಲ್-ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಕ್ಯಾಮರಾ ಸ್ವಲ್ಪ ಹೆಚ್ಚು-ಸ್ಯಾಚುರೇಟೆಡ್ ಇಮೇಜ್ಗಳನ್ನು ನೀಡುತ್ತದೆ. ಅಲ್ಲದೆ ಇದರ ಮುಂಭಾಗದಲ್ಲಿ ಸೆಲ್ಫಿಗಾಗಿ 32MP ಕ್ಯಾಮೆರಾ ಸೆನ್ಸರ್ ಅನ್ನು ಸಹ ಹೊಂದಿದೆ.