Moto G67 Power 5G Launch
ಭಾರತದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಮೋಟೊರೋಲಾ ತನ್ನ ಮುಂಬರಲಿರುವ Moto G67 Power 5G ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದೆ. ಕಂಪನಿ ಇದರಲ್ಲಿ ಸಿಕ್ಕಾಪಟ್ಟೆ ಜಬರ್ದಸ್ತ್ ಫೀಚರ್ಗಳೊಂದಿಗೆ ಪ್ಯಾಕ್ ಮಾಡಿದೆ. ಸ್ಮಾರ್ಟ್ಫೋನ್ ಬಗ್ಗೆ ಕಂಪನಿ ಈಗಾಗಲೇ ಎಲ್ಲ ಫೀಚರ್ಗಳನ್ನು ಫ್ಲಿಪ್ಕಾರ್ಟ್ ಮೂಲಕ ಬಹಿರಂಗಪಡಿಸಿದೆ. ಮೋಟೊರೋಲಾ ಫೋನ್ ಹೊಸ Sony ಕ್ಯಾಮೆರಾ ಮತ್ತು 7000mAh ಬ್ಯಾಟರಿಯೊಂದಿಗೆ ಸ್ಮಾರ್ಟ್ಫೋನ್ ಇದೆ 5ನೇ ನವೆಂಬರ್ 2025 ರಂದು ಬಿಡುಗಡೆಗೊಳಿಸಿದೆ. ಸ್ಮಾರ್ಟ್ಫೋನ್ ಬಗ್ಗೆ ಈವರಗೆ ಲಭ್ಯವಿರುವ ಎಲ್ಲಾ ಮಾಹಿತಿಗಳ ಒಂದಿಷ್ಟು ಮಾಹಿತಿ ಇಲ್ಲಿವೆ ನೋಡಿ.

ಮೊಟೊರೊಲಾ ಕಂಪನಿಯ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ ಆದ Moto G67 Power 5G ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬಿಡುಗಡೆ ದಿನಾಂಕವನ್ನು ಕಂಪನಿಯು ಅಧಿಕೃತವಾಗಿ ದೃಢಪಡಿಸಿದ್ದು ಈ ಹೊಸ ‘ಪವರ್’ ಸರಣಿಯ ಮಾದರಿಯು 5ನೇ ನವೆಂಬರ್ 2025 ರಂದು ಗ್ರಾಹಕರ ಮುಂದೆ ಬರಲಿದೆ. ಈ ಸ್ಮಾರ್ಟ್‌ಫೋನ್ ತನ್ನ ದೈತ್ಯ ಬ್ಯಾಟರಿ ಸಾಮರ್ಥ್ಯ ಮತ್ತು ಸುಧಾರಿತ ಕಾರ್ಯಕ್ಷಮತೆಯಿಂದಾಗಿ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಗಮನ ಸೆಳೆಯುವ ನಿರೀಕ್ಷೆಯಿದೆ. ಈ ಫೋನಿನ ಬಿಡುಗಡೆಯು ಫ್ಲಿಪ್ಕಾರ್ಟ್ ಮುಖಾಂತರ ನಡೆಯುವ ಸಾಧ್ಯತೆ ಹೆಚ್ಚಿದೆ. ಸ್ಮಾರ್ಟ್ಫೋನ್ ಸುಮಾರು ₹15,000 ರೂಗಳೊಳಗೆ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ.
ಈ ಮುಂಬರಲಿರುವ Moto G67 Power 5G ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆಯೆಂದರೆ ಅದರ ಪವರ್ಫುಲ್ 7000 mAh ಬ್ಯಾಟರಿಯೊಂದಿಗೆ ಇದು 30W ಟರ್ಬೊಪವರ್ ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ. ಕಾರ್ಯಕ್ಷಮತೆಯ ವಿಷಯದಲ್ಲಿ ಇದು ಫಾಸ್ಟ್ 5G ಕನೆಕ್ಷನ್ ಮತ್ತು ಉತ್ತಮ ಗೇಮಿಂಗ್ ಸಾಮರ್ಥ್ಯಕ್ಕಾಗಿ Qualcomm Snapdragon 7s Gen 2 ಪ್ರೊಸೆಸರ್ ಅನ್ನು ಹೊಂದಿರಲಿದ್ದು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.
Also Read: Airtel ಗ್ರಾಹಕರಿಗೆ ಮಾತ್ರ! ಕೇವಲ 349 ರೂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 20 ಕ್ಕೂ ಅಧಿಕ OTT ಪ್ರಯೋಜನಗಳು ಲಭ್ಯ!
Moto G67 Power 5G ಸ್ಮಾರ್ಟ್‌ಫೋನ್‌ನ ಕ್ಯಾಮರಾ ವಿಭಾಗದಲ್ಲಿ ಇದು 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ OIS ಬೆಂಬಲದೊಂದಿಗೆ ಮತ್ತು 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಸೇರಿದಂತೆ ಉತ್ತಮ ಸೆಟಪ್ ಅನ್ನು ಒಳಗೊಂಡಿದೆ. ಡಿಸ್ಪ್ಲೇಯು 6.72 ಇಂಚಿನ FHD+ ಡಿಸ್ಪ್ಲೇಯಾಗಿದ್ದು ಸುಗಮ ನೋಟಕ್ಕಾಗಿ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಇದರ ಜೊತೆಗೆ ಫೋನ್ IP64 ರೇಟಿಂಗ್ ಮತ್ತು MIL-810H ಮಿಲಿಟರಿ-ಗ್ರೇಡ್ ರಕ್ಷಣೆಯನ್ನು ಹೊಂದಿದ್ದು ಗಟ್ಟಿಮುಟ್ಟಾದ ವಿನ್ಯಾಸವನ್ನು ಒದಗಿಸುತ್ತದೆ.