ಇನ್ನು ಕೆಲವೇ ದಿನಗಳಲ್ಲಿ Moto G Max ಮೊಬೈಲ್ ಲಾಂಚ್! ಬರೋಬ್ಬರಿ 7,000mAh ಬ್ಯಾಟರಿ
ಆಗಷ್ಟ್ 14 ರಂದು ಮೊಟೊ G ಮ್ಯಾಕ್ಸ್ ಮೊಬೈಲ್ ಲಾಂಚ್
ಮೊಟೊ G ಮ್ಯಾಕ್ಸ್ ಮೊಬೈಲ್ 7,000mAh ಬ್ಯಾಟರಿ ಪಡೆದಿರಲಿದೆ
ಮೊಟೊ G ಮ್ಯಾಕ್ಸ್ ಫೋನ್ ಸ್ನ್ಯಾಪ್‌ಡ್ರಾಗನ್ 6s ಜೆನ್ 4 ಪ್ರೊಸೆಸರ್ ಹೊಂದಿರಲಿದೆ
ಮೊಟೊರೊಲಾ ಮೊಬೈಲ್ ಕಂಪನಿಯು ಭಾರತದಲ್ಲಿ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದ್ದು, ಅದುವೇ ಹೊಸ Moto G Max ಸ್ಮಾರ್ಟ್‌ಫೋನ್ ಆಗಿದೆ. ಈ ಮೊಬೈಲ್ ಕಂಪನಿಯು ಇದೇ ಆಗಸ್ಟ್ 14 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಲಾಂಚ್ ಕುರಿತು ಮೊಟೊ ಸಂಸ್ಥೆಯು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆದಿದೆ. ಇನ್ನು ಮುಂಬರುವ ಈ ಫೋನ್ ಸ್ನ್ಯಾಪ್‌ಡ್ರಾಗನ್ 6s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್ ಹೊಂದಿರಲಿದೆ. ಹಾಗೆಯೇ 50MP ಕ್ಯಾಮೆರಾ ರಚನೆ ಪಡೆದಿರಲಿದೆ. ಅಲ್ಲದೇ 6.72 ಇಂಚಿನ ಡಿಸ್‌ಪ್ಲೇ ಜೊತೆಗೆ 7,000mAh ಬ್ಯಾಟರಿ ಒಳಗೊಂಡಿರಲಿದೆ. ಇದು ಮೂರು ಆಕರ್ಷಕ ಕಲರ್ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹಾಗಾದರೆ ಮೊಟೊ G ಮ್ಯಾಕ್ಸ್ ಸ್ಮಾರ್ಟ್‌ಫೋನಿನ ನಿರೀಕ್ಷಿತ ಫೀಚರ್ಸ್ ಹಾಗೂ ಇತರೆ ಮಾಹಿತಿ ಮುಂದೆ ತಿಳಿಯೋಣ.
SurveyAlso Read : Jio ಗ್ರಾಹಕರಿಗೆ ಭರ್ಜರಿ OTT ಆಫರ್: ಎರಡು ಹೊಸ ಪಾಸ್‌ಗಳು ಲಾಂಚ್!
Moto G Max ಲಾಂಚ್‌ಗೆ ಮುಹೂರ್ತ ಫಿಕ್ಸ್
ಮೊಟೊರೊಲಾ ಸಂಸ್ಥೆಯು ನೂತನ ಮೊಟೊ G ಮ್ಯಾಕ್ಸ್ ಸ್ಮಾರ್ಟ್‌ಫೋನ್ ಇದೇ ಆಗಸ್ಟ್ 14 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇನ್ನು ಬಿಡುಗಡೆ ಕುರಿತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆದಿದೆ. Pantone Stargazer, Pantone Malaga ಮತ್ತು Pantone Alaskan Blue ಬಣ್ಣಗಳ ಆಯ್ಕೆಯನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ.

ಮೊಟೊ G ಮ್ಯಾಕ್ಸ್ ನಿರೀಕ್ಷಿತ ಫೀಚರ್ಸ್
ಮೊಟೊ G ಮ್ಯಾಕ್ಸ್ ಮೊಬೈಲ್ 6.72 ಇಂಚಿನ FHD+ LCD ಡಿಸ್ಪ್ಲೇ ಸೌಲಭ್ಯ ಹೊಂದಿರಲಿದ್ದು, ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ನೀಡಲಿದೆ. ಫೋನಿನ ಡಿಸ್‌ಪ್ಲೇಯ ರಕ್ಷಣೆಗೆ Corning Gorilla Glass 7i ಬಳಸಲಾಗಿದೆ. ಅಲ್ಲದೇ ಈ ಫೋನ್ ಸ್ನ್ಯಾಪ್‌ಡ್ರಾಗನ್ 6s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ 6GB + 128 GB ಹಾಗೂ 8GB + 128 GB ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಹಾಗೆಯೇ ಇದು IP64 ರೇಟಿಂಗ್ ಸೌಲಭ್ಯ ಸಹ ಒಳಗೊಂಡಿರಲಿದೆ.
ಮೊಟೊ G ಮ್ಯಾಕ್ಸ್ ಮೊಬೈಲ್ ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಗಮನ ನೀಡಿರುವಂತೆ ತೋರುತ್ತಿದ್ದು, ಇದು ಹಿಂಭಾಗದಲ್ಲಿ 50MP Sony LYT-600 ಪ್ರೈಮರಿ ಕ್ಯಾಮೆರಾ ಪಡೆದಿರುವುದು ಬಹುತೇಕ ಪಕ್ಕಾ ಆಗಿದೆ. ಮೊಟೊ ಸಂಸ್ಥೆಯು ಹಗಲು ಹಾಗೂ ಮಂದ ಬೆಳಕಿನಲ್ಲೂ ಉತ್ತಮ ಫೋಟೋಗಳನ್ನು ನೀಡುವತ್ತ ಗಮನಹರಿಸಿದೆ. ಅಲ್ಲದೇ ಇದು 7,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರುವುದು ಖಚಿತ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್ 16 ನೊಂದಿಗೆ ಸ್ಟೀರಿಯೊ ಸ್ಪೀಕರ್‌ಗಳನ್ನು ಸಹ ಪಡೆಯುತ್ತದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
