Moto Edge 60 Stylus ಸದ್ದಿಲ್ಲದೇ Sketch Pen ಜೊತೆಗೆ ಲಾಂಚ್ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Updated on 10-Apr-2025
HIGHLIGHTS

Moto Edge 60 Stylus ಸ್ಮಾರ್ಟ್ಫೋನ್ Sketch Pen ಜೊತೆಗೆ ಲಾಂಚ್ ಡೇಟ್ ಫಿಕ್ಸ್ ಆಗಿದೆ.

Moto Edge 60 Stylus ಫೋನ್ Qualcomm Snapdragon 7s Gen 2 ನಿಂದ ನಡೆಯಬಹುದು.

Moto Edge 60 Stylus ಭಾರತದಲ್ಲಿ ಇದೆ 15ನೇ ಏಪ್ರಿಲ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

Moto Edge 60 Stylus In India: ಭಾರತದಲ್ಲಿ ಮುಂಬರಲಿರುವ ಮೊಟೊರೊಲಾ ಕಂಪನಿಯ ಜಬರ್ದಸ್ತ್ ಸ್ಟೈಲಿಶ್ ಲುಕ್ ಮತ್ತು ವಿನ್ಯಾಸದೊಂದಿಗೆ ಬರಲಿರುವ ಈ Moto Edge 60 Stylus ಸ್ಮಾರ್ಟ್ಫೋನ್ ಹೊಸ Sketch Pen ಜೊತೆಗೆ ಸುಮಾರು 25,000 ರೂಗಳೊಳಗೆ ಇದೆ 15ನೇ ಏಪ್ರಿಲ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಿದ್ದವಾಗಿದೆ.

ಮೊಟೊರೊಲಾ ಈ ಸ್ಮಾರ್ಟ್ಫೋನ್ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದಿಷ್ಟು ಮಾಹಿತಿಯನ್ನು ಪೋಸ್ಟ್ ಮಾಡಿದ್ದೂ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ (Flipkart) ಮೂಲಕ ಮಾರಾಟ ಮಾಡುವುದನ್ನು ಖಚಿತಪಡಿಸಿದೆ. ಅಲ್ಲದೆ ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಮುಂಬರಲಿರುವ Moto Edge 60 Stylus ಸ್ಮಾರ್ಟ್ಫೋನ್ ಫೋನ್‌ನ ನಿರೀಕ್ಷಿತ ವಿಶೇಷಣ ಮತ್ತು ಫೀಚರ್ಗಳನ್ನು ಸಹ ಬಹಿರಂಗಪಡಿಸಿದೆ.

Moto Edge 60 Stylus ಜೊತೆಗೆ Sketch Pen ಲಭ್ಯ:

Moto Edge 60 Stylus In India

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿರುವ ಈ ಸ್ಮಾರ್ಟ್ಫೋನ್ ಮೊದಲ ಬಾರಿಗೆ ಸ್ಯಾಮ್‌ಸಂಗ್‌ ಫೋನ್ಗಳಂತೆ Sketch Pen ಜೊತೆಗೆ ಬಿಡುಗಡೆಯಾಗಲು ಸಿದ್ದವಾಗಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಪೋಸ್ಟ್ ಬಂದ ನಂತರ ಅನೇಕ ಬಳಕೆದಾರರು ಸಂತೋಷದಲ್ಲಿ ತೆಳಾಡುತ್ತಿದ್ದಾರೆ ಇದಕ್ಕೆ ಕಾರಣ ಇದರ ಬೆಲೆಯಾಗಿದೆ. ಲಕ್ಷಾಂತರ ರೂಪಾಯಿಗಳಲ್ಲಿ ಬರುವ ಸ್ಯಾಮ್‌ಸಂಗ್‌ ಎಸ್ ಪೆನ್ ಮಾದರಿಯನ್ನು ಈಗ ಡಿಸೆಂಟ್ ಬೆಲೆಯಲ್ಲಿ ಪಡೆಯುವ ಅವಕಾಶವನ್ನು ಮೋಟೋರೋಲ ನೀಡುತ್ತಿದೆ.

Also Read: UPI ಪೇಮೆಂಟ್‌ನಿಂದ Aadhaar ವೆರಿಫಿಕೇಷನ್‌ಗಾಗಿ ಬಳಸುವ QR Code ಕಂಡುಹಿಡಿದವರು ಯಾರು ಗೊತ್ತಾ?

ಪ್ರಸ್ತುತ ಈ Moto Edge 60 Stylus ಫೋನ್ ಫೀಚರ್ ಮತ್ತು ಸರಣಿಯನ್ನು ನೋಡುವುದಾದರೆ ಈಗಸ್ಟೇ ಬಿಡುಗಡೆಯಾದ Moto Edge 60 Fusion ಫೋನ್ ಹೊಂದಿರುವ ಫೀಚರ್ ಮಾದರಿಯನ್ನೇ ಅನುಸಾರಿಸುತ್ತಿರುವ ಈ ಫೋನ್ ಅದೇ ಬೆಲೆಯ ಸುತ್ತಮುತ್ತ ಬರುವುದಾಗಿ ಯೋಚಿಸುತ್ತಿದ್ದರೆ. ಅಂದರೆ ಇದರ ಆರಂಭಿ 8GB RAM ಮತ್ತು 256GB ಸ್ಟೋರೇಜ್ ಸುಮಾರು 24,999 ರೂಗಳಿಂದ ಪ್ರತ್ಯೇಕವಾಗಿ Flipakrt ಮೂಲಕ ಬಿಡುಗಡೆಯಾಗಲು ನಿರೀಕ್ಷಿಸಲಾಗಿದೆ.

Moto Edge 60 Stylus ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?

  • ಮುಂಭಾಗದಲ್ಲಿ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ pOLED ಪ್ಯಾನಲ್ ಇರಬಹುದು.
  • Moto Edge 60 Stylus ಫೋನ್ Qualcomm Snapdragon 7s Gen 2 ಚಿಪ್‌ಸೆಟ್ ಅನ್ನು ಹೊಂದಿರಬಹುದು.
  • Moto Edge 60 Stylus ಫೋನ್ ಆಂಡ್ರಾಯ್ಡ್ 15 ಆಧಾರಿತ ಕ್ಲೋಸ್-ಟು-ಸ್ಟಾಕ್ ಹಲೋ UI ಇರಬಹುದು.
  • ಈಗ ಕ್ಯಾಮೆರಾಗಳ ವಿಷಯಕ್ಕೆ ಬಂದರೆ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 13MP ಅಲ್ಟ್ರಾವೈಡ್ ಕ್ಯಾಮೆರಾ ಇರಬಹುದು.
  • Moto Edge 60 Stylus ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಸೇಲ್ಫಿಗಾಗಿ 32MP ಕ್ಯಾಮೆರಾವನ್ನು ನೀಡುವ ನಿರೀಕ್ಷೆಗಳಿವೆ.
  • ಫೋನ್ ಅನ್ನು ಆನ್‌ನಲ್ಲಿ ಇಡುವುದು 68W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಹೊಂದಿರುವ 5000mAh ಸೆಲ್ ಆಗಿರಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :